
ವಾಷಿಂಗ್ಟನ್ (ಅಮೆರಿಕ) – ಯುದ್ಧವನ್ನು ನಿಲ್ಲಿಸುವ ಕುರಿತು ಇರಾನ್ ಅಮೆರಿಕಕ್ಕೆ ಶಾಂತಿಯ ಪ್ರಸ್ತಾವನೆಯನ್ನು ಸಲ್ಲಿಸಿತ್ತು; ಆದರೆ ಅಮೆರಿಕ ಇದರಲ್ಲಿನ ಕೆಲವು ಬೇಡಿಕೆಗಳನ್ನು ತಿರಸ್ಕರಿಸಿ ಇರಾನ್ ಎದುರು ೫ ಕಠಿಣ ಷರತ್ತುಗಳನ್ನಿಟ್ಟಿದೆ. ಈ ಕುರಿತು ಇದುವರೆಗೆ ಇರಾನ್ ಆಗಲಿ ಅಥವಾ ಅಮೆರಿಕವಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇರಾನ್ ಎದುರು ಅಮೆರಿಕ ಇಟ್ಟಿರುವ ಕೆಲ ಷರತ್ತುಗಳು,
೧. ಇರಾನ್ ಗೆ ಯಾವುದೇ ರೀತಿಯಲ್ಲಿ ಹಾನಿ ಪರಿಹಾರ ಅಥವಾ ಯುದ್ಧದ ದಂಡದ ರೂಪದಲ್ಲಿ ಹಣ ನೀಡಲು ನಕಾರ.
೨. ತನ್ನ ಬಳಿ ಇರುವ ೪०० ಕಿಲೋ ಸಮೃದ್ಧ ಯುರೇನಿಯಂ ಅನ್ನು ಇರಾನ್ ಅಮೆರಿಕಕ್ಕೆ ಒಪ್ಪಿಸಬೇಕು.
೩. ಇರಾನ್ ಗೆ ಕೇವಲ ಅಣುಶಕ್ತಿ ಸ್ಥಾವರ ಚಾಲನೆಯಲ್ಲಿಡಲು ಮಾತ್ರ ಅನುಮತಿ ಸಿಗಲಿದೆ.
೪. ಇತರ ದೇಶಗಳಲ್ಲಿರುವ ಅಮೆರಿಕ ಜಪ್ತಿ ಮಾಡಿಕೊಂಡಿರುವ ಇರಾನ್ ಆಸ್ತಿ ಮತ್ತು ಸ್ವತ್ತುಗಳನ್ನು ಬಿಡುಗಡೆ ಮಾಡಲು ನಕಾರ.
೫. ಎರಡೂ ದೇಶಗಳ ನಡುವೆ ನಡೆದಿರುವ ಕದನ ವಿರಾಮಕ್ಕೆ ಇನ್ನು ಮುಂದೆ ಎರಡೂ ದೇಶಗಳ ನಡುವೆ ಮಾತುಕತೆಗಳು ಪ್ರಾರಂಭವಾದಾಗ ಮಾತ್ರ ಕಾಲಾವಧಿಯನ್ನು ವಿಸ್ತರಿಸಲಾಗುವುದು.
ಕದನ ವಿರಾಮವಾಗಿ ೪० ದಿನಗಳು ಕಳೆದಿವೆ !
ಫೆಬ್ರವರಿ ೨೮, ೨೦೨೬ ರಂದು ಅಮೆರಿಕ ಇರಾನ್ ಮೇಲೆ ಆಕ್ರಮಣ ಮಾಡಿತ್ತು. ನಂತರ ಏಪ್ರಿಲ್ ೮ ರಂದು ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ನಡೆದಿತ್ತು. ಮೇ ೮ ರಂದು ಕದನ ವಿರಾಮಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ; ಆದರೆ ಎರಡೂ ದೇಶಗಳ ನಡುವೆ ಇದುವರೆಗೆ ಯುದ್ಧದ ಕುರಿತು ಯಾವುದೇ ಪರಿಹಾರ ಲಭಿಸಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation