'ನೀಟ್' ಪರೀಕ್ಷೆ ಮಹಾ ಹಗರಣ ಪ್ರಕರಣ
ಪರೀಕ್ಷೆಗೆ ೧೦ ದಿನಗಳ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆ ಪಡೆದಿದ್ದ!

ಲಾತೂರ (ಮಹಾರಾಷ್ಟ್ರ) – ‘ನೀಟ್’ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು ಇಲ್ಲಿನ ಪ್ರಸಿದ್ಧ ರೇಣುಕಾಯಿ ಕೆಮಿಸ್ಟ್ರಿ ಕ್ಲಾಸಸ್ (ಆರ್.ಸಿ.ಸಿ.) ಕೋಚಿಂಗ್ ಕ್ಲಾಸ್ ನ ಸಂಚಾಲಕ ಪ್ರೊ. ಶಿವರಾಜ ಮೋಟೆಗಾಂವ್ಕರ್ ನನ್ನು ೧೧ ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಬಂಧಿಸಿದೆ. ಮೇ ೩ ರಂದು ನಡೆದ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಮೋಟೆಗಾಂವ್ಕರ್ ೧೦ ದಿನಗಳ ಮುಂಚಿತವಾಗಿ, ಅಂದರೆ ಏಪ್ರಿಲ್ ೨೩ ರಂದೇ ಪಡೆದುಕೊಂಡಿದ್ದನು.
ತನಿಖೆಯ ವೇಳೆ ಆತನ ಮೊಬೈಲ್ ನಲ್ಲಿ ‘ನೀಟ್’ ಪರೀಕ್ಷೆಯ ಮೂಲ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆ ಪತ್ತೆಯಾಗಿದೆ. ಆತ ಈ ಪ್ರಶ್ನೆಪತ್ರಿಕೆಯನ್ನು ವಿವೇಕ ಪಾಟೀಲ್ ಎಂಬ ವ್ಯಕ್ತಿಗೆ ಮತ್ತು ಕೆಲವು ವಿಶೇಷ ವಿದ್ಯಾರ್ಥಿಗಳಿಗೆ ಕಳುಹಿಸಿದ್ದನು. ಮೇ ೧೪ ರಂದು ಲಾತೂರನಲ್ಲಿರುವ ಆತನ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆಯೇ ಆತ ತನ್ನ ಮೊಬೈಲ್ ನಲ್ಲಿದ್ದ ಎಲ್ಲಾ ತಾಂತ್ರಿಕ ಪುರಾವೆಗಳನ್ನು ಮತ್ತು ಮಾಹಿತಿಯನ್ನು ಅಳಿಸಿಹಾಕಿದ್ದನು. ಸದ್ಯಕ್ಕೆ ಆತ ಲಾಭ ಪಡೆದ ವಿದ್ಯಾರ್ಥಿಗಳ ಹೆಸರುಗಳನ್ನು ಹೇಳಲು ಮೀನಾಮೇಶ ಮಾಡುತ್ತಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ಮೋಟೆಗಾಂವ್ಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವುದು ಕಂಡುಬಂದಿದೆ.
ಯಾರು ಈ ಪ್ರೊ. ಶಿವರಾಜ ಮೋಟೆಗಾಂವ್ಕರ್?
ಶಿವರಾಜ್ ಮೋಟೆಗಾಂವ್ಕರ್ ಶಿಕ್ಷಣ ಕ್ಷೇತ್ರದಲ್ಲಿ ‘ಎಮ್. ಸರ್’ ಎಂದೇ ಗುರುತಿಸಲ್ಪಟ್ಟಿದ್ದಾನೆ. ೧೯೯೯ ರಲ್ಲಿ ಆತ ಕೇವಲ ೧೦ ವಿದ್ಯಾರ್ಥಿಗಳೊಂದಿಗೆ ಕೋಚಿಂಗ್ ಕ್ಲಾಸ್ ಅನ್ನು ಪ್ರಾರಂಭಿಸಿದ್ದನು. ತದನಂತರ ಈ ಕೋಚಿಂಗ್ ಕ್ಲಾಸ್ ‘ಆರ್.ಸಿ.ಸಿ.’ ಹೆಸರಿನಲ್ಲಿ ಪ್ರಸಿದ್ಧಿಯಾಯಿತು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!