ಯುವಕರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿಗಳ ಸ್ಪಷ್ಟೀಕರಣ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಯುವಕರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಕರೆದಿದ್ದಾರೆಂಬ ಕಾರಣಕ್ಕೆ ಅವರ ಮೇಲೆ ಟೀಕೆಗಳು ವ್ಯಕ್ತವಾಗತೊಡಗಿದ್ದರಿಂದ, ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಚಾರಣೆಯೊಂದರಲ್ಲಿ ನಾನು ಮಾತನಾಡಿದ್ದನ್ನು ತಪ್ಪು ರೀತಿಯಲ್ಲಿ ಜನರ ಮುಂದೆ ತರಲಾಗಿದೆ. ಇದರಿಂದ ನನಗೆ ತೀವ್ರ ಆಘಾತ ಮತ್ತು ನೋವುಂಟಾಗಿದೆ. ಭಾರತೀಯ ಯುವಕರನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ವಿಚಾರಣೆಯ ಸಮಯದಲ್ಲಿ ಕೆಲವರು ಸುಳ್ಳು ಮತ್ತು ನಕಲಿ ಪದವಿಗಳನ್ನು ಪಡೆದು ವಕೀಲಿ ವೃತ್ತಿಯಂತಹ ಗಂಭೀರ ಕ್ಷೇತ್ರಕ್ಕೆ ಬರುತ್ತಾರೆ. ಅಂತಹ ನಕಲಿ ದಂಧೆ ಮಾಡುವವರನ್ನು ನಾನು ‘ಪರಾವಲಂಬಿಗಳಿಗೆ’ ಹೋಲಿಸಿದ್ದೆನೇ ಹೊರತು, ಯಾವುದೇ ಕಾರಣಕ್ಕೂ ಭಾರತೀಯ ಯುವಕರನ್ನು ಉದ್ದೇಶಿಸಿ ಮಾತನಾಡಿಲ್ಲ. ಭಾರತದ ಪ್ರತಿಯೊಬ್ಬ ಯುವಕನೂ ನನಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತಾನೆ. ನನಗೆ ಭಾರತೀಯ ಯುವಕರ ಬಗ್ಗೆ ಯಾವಾಗಲೂ ಅಪಾರ ಗೌರವವಿದೆ. ಇಂದಿನ ಯುವಕರೇ ದೇಶದ ಭವಿಷ್ಯ ಮತ್ತು ವಿಕಸಿತ ಭಾರತದ ಭದ್ರ ಸ್ತಂಭಗಳಾಗಿದ್ದಾರೆ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!