‘ಅಲ್ ಖಲಿಫಾ ಟೂರ್ಸ್ ಆಂಡ್ ಟ್ರಾವೆಲ್ಸ್’ನ ಸಂಚಾಲಕ ಅಮೀರ್ ಶೇಖ್ ಕುಟುಂಬ ಸಮೇತ ಪರಾರಿ!

ಪುಣೆ – ಇಲ್ಲಿನ ಕೊಂಡವಾ ಪರಿಸರದಲ್ಲಿ ಹಜ್ ಯಾತ್ರೆಗೆ ಹೋಗುವ ಭಕ್ತರಿಗೆ ‘ಅಲ್ ಖಲಿಫಾ ಟೂರ್ಸ್ ಆಂಡ್ ಟ್ರಾವೆಲ್ಸ್’ ಸಂಸ್ಥೆಯು ದೊಡ್ಡ ಆರ್ಥಿಕ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ‘khabar_nama_punecity’ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಸಂಸ್ಥೆಯ ಸಂಚಾಲಕನಾದ ಅಮೀರ್ ಶೇಖ್, ಮುಸ್ಲಿಮ್ ಭಕ್ತರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಹಣದೊಂದಿಗೆ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಮೇ 17 ರಂದು ಈ ಯಾತ್ರಾರ್ಥಿಗಳ ಪ್ರಯಾಣ ನಿಗದಿಯಾಗಿತ್ತು; ಆದರೆ ಪ್ರಯಾಣದ ದಿನಾಂಕ ಹತ್ತಿರ ಬಂದಾಗ ಟ್ರಾವೆಲ್ಸ್ ಕಚೇರಿ ಮುಚ್ಚಿರುವುದು ಕಂಡುಬಂದಿದೆ ಮತ್ತು ಶೇಖ್ ಜೊತೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಈ ಘಟನೆಯಿಂದ ವಂಚನೆಗೊಳಗಾದ ಭಕ್ತರು ಕೊಂಡವಾ ಪೊಲೀಸ್ ಠಾಣೆಗೆ ಧಾವಿಸಿದರು. ಸದ್ಯ ಅಮೀರ್ ಶೇಖ್ ವಿರುದ್ಧ ಸರಕಾರಿ ನಿಯಮಾನುಸಾರ ಮೊಕದ್ದಮೆ ದಾಖಲಿಸಲಾಗಿದೆ.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು