ಈ ವರ್ಷ ರದ್ದಾಗಿದ್ದ ಪರೀಕ್ಷೆ ಜೂನ್ ೨೧ ರಂದು ನಡೆಯಲಿದೆ
(ನೀಟ್ (NEET) ಎಂದರೆ ‘ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್’, ಅಂದರೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ)

ನವ ದೆಹಲಿ – ಮುಂದಿನ ವರ್ಷದಿಂದ ‘ನೀಟ್’ ಪರೀಕ್ಷೆಯು ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೇ ೧೫ ರಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಮೇ ೩, ೨೦೨೬ ರಂದು ನಡೆದಿದ್ದ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಮೇ ೭ ರಂದು ಬೆಳಕಿಗೆ ಬಂದ ನಂತರ, ಕೇಂದ್ರ ಸರಕಾರವು ಮೇ ೧೨ ರಂದು ಈ ಪರೀಕ್ಷೆಯನ್ನೇ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಮೇ ೩, ೨೦೨೬ ರಂದು ನಡೆದಿದ್ದ ಪರೀಕ್ಷೆಯು ದೇಶದ ೫೫೧ ಮತ್ತು ವಿದೇಶದ ೧೪ ನಗರಗಳಲ್ಲಿ ನಡೆದಿತ್ತು. ಇದಕ್ಕಾಗಿ ೫ ಸಾವಿರದ ೪೦೦ ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು ೨೨ ಲಕ್ಷದ ೭೯ ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ‘‘ಯಾವುದೇ ತಪ್ಪು ಅಭ್ಯರ್ಥಿ ಆಯ್ಕೆಯಾಗುವುದು ನಮಗೆ ಇಷ್ಟವಿರಲಿಲ್ಲ; ಆದ್ದರಿಂದ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆವು. ಈಗ ಈ ಪರೀಕ್ಷೆಯು ಜೂನ್ ೨೧ ರ ಭಾನುವಾರದಂದು ನಡೆಯಲಿದೆ. ಪ್ರವೇಶ ಪತ್ರಗಳು ಜೂನ್ ೧೪ ರಿಂದ ಸಿಗಲು ಪ್ರಾರಂಭವಾಗುತ್ತವೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ೧೫ ನಿಮಿಷಗಳ ಹೆಚ್ಚುವರಿ ಸಮಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯಲ್ಲಿ ತಮ್ಮಿಷ್ಟದ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ೭ ದಿನಗಳ ಕಾಲಾವಕಾಶ ನೀಡಲಾಗುವುದು,’’ ಎಂದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇದುವರೆಗೆ ೭ ಜನರ ಬಂಧನ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳವು (ಸಿಬಿಐ) ಇದುವರೆಗೆ ೭ ಜನರನ್ನು ಬಂಧಿಸಿದೆ. ಇವರಲ್ಲಿ ಐವರನ್ನು, ಅಂದರೆ ರಾಜಸ್ಥಾನದಿಂದ ಸಿಕ್ಕಿಬಿದ್ದ ಮಾಂಗಿ ಲಾಲ್ ಬಿಂವಾಲ್, ಜಮವಾರಾಮ್‌ಗಢದ ಸಹೋದರ ದಿನೇಶ್ ಬಿಂವಾಲ್, ಅವರ ಮಗ ವಿಕಾಸ್ ಬಿಂವಾಲ್, ಹರಿಯಾಣದ ಗುರುಗ್ರಾಮದ ಯಶ್ ಯಾದವ್ ಮತ್ತು ನಾಸಿಕ್‌ನ ಶುಭಂ ಖೈರ್ನಾರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಐದೂ ಆರೋಪಿಗಳನ್ನು ನ್ಯಾಯಾಲಯವು ೭ ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದರೊಂದಿಗೆ ಸಿಬಿಐ ಪುಣೆಯಿಂದ ‘ಬ್ಯೂಟಿಷಿಯನ್’ (ಸೌಂದರ್ಯ ವರ್ಧನಾಲಯ ನಡೆಸುವ) ಮನೀಷಾ ವಾಗ್ಮಾರೆ ಮತ್ತು ನಾಸಿಕ್‌ನಿಂದ ಧನಂಜಯ್ ಲೋಖಂಡೆ ಈ ಇಬ್ಬರನ್ನೂ ಬಂಧಿಸಿತ್ತು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!