ಅಧರ್ಮವನ್ನು ಪ್ರೋತ್ಸಾಹಿಸುವ ಶ್ಯಾಮ್ ಮಾನವ್ ಅವರು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಸವಾಲು ಹಾಕಿದ ಪ್ರಕರಣ

ನಾಗಪುರ – ಬಾಗೇಶ್ವರ್ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಪವಾಡಗಳಿಗೆ ಸವಾಲು ಹಾಕುತ್ತಾ ‘ಅಖಿಲ ಭಾರತೀಯ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ’ಯು ಬಹುಮಾನದ ಮೊತ್ತವನ್ನು 30 ಲಕ್ಷ ರೂಪಾಯಿಗಳಿಂದ 80 ಲಕ್ಷ ರೂಪಾಯಿಗಳಿಗೆ ಏರಿಸಿದೆ. ಸಮಿತಿಯ ಸಂಚಾಲಕ ಶ್ಯಾಮ್ ಮಾನವ್ ಈ ಸವಾಲನ್ನು ನೀಡಿದ್ದು, ಅದಕ್ಕೆ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಯಾರಿಗೆ ಪರೀಕ್ಷೆ ಮಾಡಬೇಕಾಗಿದೆಯೋ ಅವರು ದರ್ಬಾರಿಗೆ ಬರಬೇಕು ಎಂದು ಪ್ರತ್ಯುತ್ತರ ನೀಡಿದ್ದಾರೆ. ಶ್ಯಾಮ್ ಮಾನವ್ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸವಾಲಿನ ಷರತ್ತುಗಳ ಮಾಹಿತಿಯನ್ನು ನೀಡಿದ್ದಾರೆ.
ಶ್ಯಾಮ್ ಮಾನವ್ ಅವರು ನೀಡಿದ ಸವಾಲಿನ ಷರತ್ತುಗಳು !
1. ಈ ಪರೀಕ್ಷೆಯು ಕೇವಲ ನಾಗಪುರದ ಪತ್ರಕಾರ್ ಭವನದಲ್ಲಿ ಮಾತ್ರ ನಡೆಯಬಹುದಾಗಿದೆ.
2. ಒಂದು ಪಂಚ ಸಮಿತಿಯನ್ನು ಸ್ಥಾಪಿಸಲಾಗುವುದು. ಇದಕ್ಕೆ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಮ್ಮತಿಯೂ ಇರಬೇಕು. ಪರೀಕ್ಷೆಯ ಸಮಯದಲ್ಲಿ ಅವರ ಮತ್ತು ಅಲ್ಲಿ ಉಪಸ್ಥಿತರಿರುವ ಇತರ ಜನರ ಮೊಬೈಲ್ ಫೋನ್‌ಗಳನ್ನು ಸೀಲ್ ಮಾಡಲಾಗುವುದು.
3. ಮಹಾರಾಜರ ಮುಂದೆ ಅನಿರೀಕ್ಷಿತವಾಗಿ 10 ಅಪರಿಚಿತ ವ್ಯಕ್ತಿಗಳನ್ನು ತರಲಾಗುವುದು. ಮಹಾರಾಜರು ಆ ವ್ಯಕ್ತಿಗಳ ಹೆಸರು, ಅವರ ತಂದೆಯ ಹೆಸರು, ಉಪನಾಮ ಮತ್ತು ಮೊಬೈಲ್ ಸಂಖ್ಯೆಯನ್ನು ಹೇಳಬೇಕಾಗುತ್ತದೆ, ಹಾಗೆಯೇ ಹತ್ತಿರವಿರುವ 10 ವಸ್ತುಗಳನ್ನು ತಮ್ಮ ದಿವ್ಯ ದೃಷ್ಟಿಯಿಂದ ಗುರುತಿಸಬೇಕಾಗುತ್ತದೆ.
4. ಅವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದರೆ, 5 ದಿನಗಳ ನಂತರ ಹೊಸ ಜನರೊಂದಿಗೆ ಇದೇ ಪ್ರಕ್ರಿಯೆಯನ್ನು ಮತ್ತೆ ಮಾಡಲಾಗುವುದು. ಎರಡೂ ಬಾರಿ ಶೇಕಡಾ 90 ರಷ್ಟು ನಿಖರವಾದ ಫಲಿತಾಂಶ ಬಂದರೆ ಅವರಿಗೆ 80 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು.
ಅಖಿಲ ಭಾರತೀಯ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ತರ್ಕವೇನೆಂದರೆ, ದರ್ಬಾರಿನಲ್ಲಿ ಮಾಹಿತಿ ಕಲೆಹಾಕಲು ಗುಪ್ತ ಮಾರ್ಗಗಳಿರಬಹುದು. ಅವುಗಳನ್ನು ನಿಯಂತ್ರಿಸುವುದು ಕಷ್ಟ. ಮಹಾರಾಜರು ತಮ್ಮನ್ನು ತಾವು ಸಾಬೀತುಪಡಿಸಿದರೆ, ನಾನು ಅವರ ಪಾದಗಳಿಗೆ ನಮಸ್ಕರಿಸುತ್ತೇನೆ, ನನ್ನ ಸಂಸ್ಥೆಯನ್ನು ಮುಚ್ಚುತ್ತೇನೆ ಮತ್ತು ಅವರ ಭಕ್ತನಾಗುತ್ತೇನೆ. ಮಹಾರಾಜರು ಸವಾಲನ್ನು ಸ್ವೀಕರಿಸುವುದಿಲ್ಲ. ನಿಷ್ಪಕ್ಷಪಾತ ಸವಾಲಿನಲ್ಲಿ ಭಾಗವಹಿಸಿದರೆ ತಮ್ಮ ದಂಧೆ ಬಂದ್ ಆಗುತ್ತದೆ ಎಂದು ಅವರಿಗೆ ತಿಳಿದಿದೆ. ಇದರಿಂದಾಗಿ ಅವರು ಓಡಿಹೋದರು. ಅವರ ಕಾರ್ಯಗಳು ಬೂಟಾಟಿಕೆಯಿಂದ ಕೂಡಿವೆ, ಎಂದು ಹೇಳಿದರು.
ನಾವು ಜಾದೂಗಾರರಲ್ಲ, ಇದು ಈಶ್ವರಿ ಪ್ರೇರಣೆ ! – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ
ಈ ಸವಾಲಿಗೆ ಉತ್ತರಿಸುತ್ತಾ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು, ‘ನಾವು ಜಾದೂಗಾರರಲ್ಲ. ನಮಗೆ ಈಶ್ವರ ಯಾವ ಪ್ರೇರಣೆ ನೀಡುತ್ತಾನೋ, ಅದರಂತೆ ನಾವು ಜನರಿಗೆ ಮಾರ್ಗದರ್ಶನ ನೀಡುತ್ತೇವೆ,” ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !