ಗಡಿಯಲ್ಲಿ ಬೇಲಿಗಾಗಿ ಭೂಮಿ ನೀಡುವ ಬಂಗಾಳ ಸರಕಾರದ ನಿರ್ಧಾರಕ್ಕೆ ಬಾಂಗ್ಲಾದೇಶದ ಭಾರತದ್ವೇಷಿ ನಾಯಕ ನಾಹಿದ ಇಸ್ಲಾಂನ ಹಾರಾಟ

ಢಾಕಾ (ಬಾಂಗ್ಲಾದೇಶ) – “ದೇಶವು ಮತ್ತೊಮ್ಮೆ ಗಡಿಯಲ್ಲಿ ನಡೆಯುತ್ತಿರುವ ಸಾವುಗಳು ಮತ್ತು ಹೊಸದಾಗಿ ನಿರ್ಮಿಸಲಾಗುತ್ತಿರುವ ಮುಳ್ಳುತಂತಿಯ ಬೇಲಿಗೆ ಸಾಕ್ಷಿಯಾಗುತ್ತಿದೆ. ಒಂದು ದೇಶವು ಗಡಿಯಲ್ಲಿ ಬೇಲಿ ಹಾಕುವುದು ಮತ್ತು ಇನ್ನೊಂದು ದೇಶದ ನಾಗರಿಕರನ್ನು ಕೊಲ್ಲುವುದನ್ನು ಮುಂದುವರಿಸಿದರೆ, ಮೈತ್ರಿಯಾಗುವುದು ಅಸಾಧ್ಯ. ಮುಳ್ಳುತಂತಿಗಳ ಹಿಂದೆ ನಿಂತು ನಿಜವಾದ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ,” ಎಂದು ಬಾಂಗ್ಲಾದೇಶದ ‘ನ್ಯಾಷನಲ್ ಸಿಟಿಜನ್ ಪಾರ್ಟಿ’ಯ ಸಂಚಾಲಕ ಮತ್ತು ಸಂಸತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ (ಎಂದರೆ ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಅಥವಾ ವಿಧಾನ ಪರಿಷತ್ ಈ ಸ್ಥಳಗಳಲ್ಲಿ ಸಂಬಂಧಿತ ಪಕ್ಷದ ಪಕ್ಷ ಶ್ರೇಷ್ಠರು ನೇಮಿಸಿರುವ ಪಕ್ಷ ಪ್ರಮುಖ) ನಾಹಿದ್ ಇಸ್ಲಾಂ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಬಂಗಾಳದಲ್ಲಿ ಭಾಜಪ ಸರಕಾರ ರಚನೆಯಾದ ನಂತರ, ಮುಖ್ಯಮಂತ್ರಿ ಸುಭೇಂದು ಅಧಿಕಾರಿ ಅವರು ಬಾಂಗ್ಲಾದೇಶದ ಗಡಿಯಲ್ಲಿ ಬೇಲಿ ಹಾಕಲು ಗಡಿ ಭದ್ರತಾ ಪಡೆಗೆ (BSF) 45 ದಿನಗಳಲ್ಲಿ ಭೂಮಿಯನ್ನು ಹಸ್ತಾಂತರಿಸುವಂತೆ ಆದೇಶ ನೀಡಿದ್ದರು. ಈ ನಿರ್ಧಾರವನ್ನು ವಿರೋಧಿಸಿ ನಾಹಿದ್ ಈ ಹೇಳಿಕೆ ನೀಡಿದ್ದಾರೆ. ನಾಹಿದ್ ಅವರನ್ನು ಹಿಂದಿನ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ.
“Friendship with a nation that builds fences on its border is impossible!” – Anti-India Bangladeshi leader Nahid Islam lashes out after Bengal government approves land for border fencing.
He further warned that if Tariq Rahman’s government fails to defend the nation, “the people… pic.twitter.com/6LQch030am
— Sanatan Prabhat (@SanatanPrabhat) May 13, 2026
ನಾಹಿದ್ ಇಸ್ಲಾಂ ಅವರ ಮಾತು ಮುಂದುವರೆಸಿ,
1. ಒಂದು ವೇಳೆ ತಾರಿಕ ರೆಹಮಾನರವರ ಸರಕಾರವು ದೇಶವನ್ನು ರಕ್ಷಿಸುವಲ್ಲಿ ವಿಫಲವಾದರೆ, ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಜನರೇ ತಮ್ಮ ಹೆಗಲ ಮೇಲೆ ತೆಗೆದುಕೊಳ್ಳುತ್ತಾರೆ.
2. ನೆರೆಯ ದೇಶದ ಜನರು (ಮುಸ್ಲಿಮರು) ಒಂದು ದಿನ ಈ ಬೇಲಿಯನ್ನು ಕಿತ್ತೆಸೆದು ಬಾಂಗ್ಲಾದೇಶದ ಜನರೊಂದಿಗೆ ನಿಜವಾದ ಸಂಬಂಧವನ್ನು ಬೆಳೆಸುತ್ತಾರೆ. (ಭಾರತವು ಗಡಿಯಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕೆಂದು ಇದರಿಂದ ತಿಳಿಯುತ್ತದೆ !- ಸಂಪಾದಕರು)
3. ಗಡಿಯ ಆಚೆಗಿನ ಮುಸ್ಲಿಮರು ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. (ಒಂದು ವೇಳೆ ನಾಹಿದ್ ಅವರಿಗೆ ಹಾಗೆ ಅನ್ನಿಸುವುದಾದರೆ, ಅವರು ಭಾರತದ ಎಲ್ಲಾ ಮುಸ್ಲಿಮರನ್ನು ತಮ್ಮ ದೇಶಕ್ಕೆ ಕರೆದೊಯ್ಯಲಿ !-ಸಂಪಾದಕರು)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!