ಶಬರಿಮಲಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪುನರುಚ್ಚಾರ

ನವ ದೆಹಲಿ – ಸಾಮಾಜಿಕ ಸುಧಾರಣೆಗಳ ಹೆಸರಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುವಂತಿಲ್ಲ. ಸಂವಿಧಾನ ಶಿಲ್ಪಿಗಳು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ನಿಬಂಧನೆಗಳನ್ನು ರೂಪಿಸಿದ್ದಾರೆ, ಅದನ್ನು ೯ ನ್ಯಾಯಮೂರ್ತಿಗಳ ಪೀಠ ಬದಲಾಯಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಸಮ್ಮತಿಯೊಂದಿಗೆ ಸುಧಾರಣೆಯ ಬೇಡಿಕೆ ಬಂದರೆ ಮಾತ್ರ ಅದರ ಬಗ್ಗೆ ಯೋಚಿಸಬಹುದು ಎಂದು ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.
೧. ವಿಚಾರಣೆಯ ಸಂದರ್ಭದಲ್ಲಿ ಕೇರಳ ಸರಕಾರದ ಪರವಾಗಿ ಹಿರಿಯ ನ್ಯಾಯವಾದಿ ಜಯದೀಪ ಗುಪ್ತಾ ಅವರು ವಾದ ಮಂಡಿಸಿ, ಧರ್ಮದ ಅತ್ಯಗತ್ಯ ಅಂಶಗಳನ್ನು ಸಾಮಾಜಿಕ ಸುಧಾರಣೆಗಳ ಹೆಸರಿನಲ್ಲಿ ತೆಗೆದುಹಾಕಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಪೂಜೆಯ ಹಕ್ಕು ಬಹಳ ಮುಖ್ಯವಾದುದು ಮತ್ತು ಈ ಹಕ್ಕು ಪವಿತ್ರ ಸ್ಥಳಗಳಲ್ಲಿರುತ್ತದೆ. ಅದನ್ನು ತೆಗೆದುಹಾಕುವುದು ಹಕ್ಕಿನ ಉಲ್ಲಂಘನೆಯಾಗುತ್ತದೆ, ಎಂದು ಹೇಳಿದರು.
೨. ರಾಜ್ಯವು ಸಾಮಾಜ ಕಲ್ಯಾಣಕ್ಕಾಗಿ ಕಾನೂನುಗಳನ್ನು ರೂಪಿಸಿದಾಗ, ಧಾರ್ಮಿಕ ಆಚರಣೆಗಳ ಆಧಾರದ ಮೇಲೆ ಅವುಗಳನ್ನು ರದ್ದುಗೊಳಿಸಬಾರದೆಂದು ನ್ಯಾಯಾಲಯದಲ್ಲಿ ವಾದಿಸಲಾಯಿತು.
೩. ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಪರವಾಗಿ ಹಿರಿಯ ನ್ಯಾಯವಾದಿ ಸಂಜಯ ಹೆಗ್ಡೆ ಅವರು ಮಾತನಾಡಿ, ತರ್ಕವಾದಿಗಳು ಪ್ರತಿಯೊಂದನ್ನೂ ತರ್ಕದ ಅಳತೆಗೋಲಿನ ಮೇಲೆ ನೋಡುತ್ತಾರೆ. ಸಂವಿಧಾನದ ‘ಕಲಂ ೫೧ ಎ’ ನಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ಸುಧಾರಣೆಯ ಮನೋಭಾವವನ್ನು ಉತ್ತೇಜಿಸುವ ಬಗ್ಗೆ ಹೇಳಲಾಗಿದೆ, ಎಂದರು.
೪. ಸ್ವಾಮಿ ಅಗ್ನಿವೇಶ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು, ಸಂವಿಧಾನವು ಧರ್ಮಗಳಲ್ಲಿ ಸುಧಾರಣೆಗೆ ಅವಕಾಶ ನೀಡಿದೆ. ಕಲಂ ೨೬ ರಲ್ಲಿ ‘ನಿರ್ವಹಣೆ’ ಎಂಬ ಪದವನ್ನು ಬಳಸಲಾಗಿದೆಯೇ ಹೊರತು ‘ನಿಯಂತ್ರಣ’ ಎಂದಲ್ಲ. ಇದರಿಂದ ಧಾರ್ಮಿಕ ಸಂಸ್ಥೆಗಳ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವೆ ಸಮತೋಲನವಿದೆ ಎಂಬುದು ಸ್ಪಷ್ಟವಾಗುತ್ತದೆ, ಎಂದು ಅವರು ತಿಳಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”