ಸರಕಾರಿ ಜಾಗದಲ್ಲಿದ್ದ ಕಸಾಯಿಖಾನೆಗಳಲ್ಲಿ ಪ್ರತಿದಿನ ರಾಜಾರೋಷವಾಗಿ ಗೋಹತ್ಯೆ!

ಪುಣೆ – ದೌಂಡ್ ನಗರದ ಖಾಟಿಕ ಗಲ್ಲಿ, ಕಸಾಯಿ ಮೊಹಲ್ಲಾ ಮತ್ತು ಭೀಮಾ ನದಿಯ ದಂಡೆಯ ಮೇಲಿರುವ ಈದ್ಗಾ ಮೈದಾನ ಪ್ರದೇಶದಲ್ಲಿದ್ದ 8 ಅನಧಿಕೃತ ಕಸಾಯಿಖಾನೆಗಳನ್ನು 3 ದಶಕಗಳ ವಿಳಂಬದ ನಂತರ ಮೇ 11 ರಂದು ನೆಲಸಮಗೊಳಿಸಲಾಗಿದೆ. ಸರಕಾರಿ ಜಾಗದಲ್ಲಿದ್ದ ಈ ಕಸಾಯಿಖಾನೆಗಳಲ್ಲಿ ರಾಜಾರೋಷವಾಗಿ ಗೋಹತ್ಯೆ ಮಾಡಲಾಗುತ್ತಿತ್ತು. ಭೀಮಾ ನದಿಯ ಪ್ರವಾಹ ರೇಖೆಯ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗದಲ್ಲಿ ಈ ಕಸಾಯಿಖಾನೆಗಳನ್ನು ನಿರ್ಮಿಸಲಾಗಿತ್ತು. ಕಾರ್ಯಾಚರಣೆಯ ಸಮಯದಲ್ಲಿ ದೌಂಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಪುಣೆ ಗ್ರಾಮಾಂತರ ಪೊಲೀಸ್ ಪಡೆಯ ಹೆಚ್ಚುವರಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಗೋರಕ್ಷಕರು ಕಾಲಕಾಲಕ್ಕೆ ಪುಣೆ ಗ್ರಾಮಾಂತರ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳಿಗೆ ನೀಡಿದ ಮಾಹಿತಿಯಂತೆ, ದೌಂಡ್ ಪೊಲೀಸರು ಈ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಳ್ಳುವುದರ ಜೊತೆಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು; ಆದರೆ ದೌಂಡ್ ನಗರಸಭೆ ಆಡಳಿತವು ಈ ಕಸಾಯಿಖಾನೆಗಳ ಕಡೆಗೆ ಉದ್ದೇಶಪೂರ್ವಕವಾಗಿ ದುರ್ಲಕ್ಷ್ಯ ವಹಿಸುತ್ತಿತ್ತು. (ಇಂತಹ ದೋಷಿ ಮತ್ತು ಕರ್ತವ್ಯಶೂನ್ಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು! – ಸಂಪಾದಕರು) ಈ ಕಸಾಯಿಖಾನೆಗಳಿಂದ ಪ್ರತಿದಿನ ಅನಿಯಂತ್ರಿತವಾಗಿ ಗೋಹತ್ಯೆ ಮಾಡಲಾಗುತ್ತಿತ್ತು ಮತ್ತು ಗೋಮಾಂಸವನ್ನು ಮುಂಬಯಿ, ಪುಣೆ ಹಾಗೂ ಇತರ ಭಾಗಗಳಿಗೆ ಸಾಗಿಸಲಾಗುತ್ತಿತ್ತು. ದೌಂಡ್ ನಗರ ಮತ್ತು ಸುತ್ತಮುತ್ತಲಿನ ಅಕ್ರಮ ಕಸಾಯಿಖಾನೆಗಳು, ಚರ್ಮದ ಗೋದಾಮು, ಗೋಮಾಂಸ ಮಾರಾಟ ಮತ್ತು ಸಂಗ್ರಹಕ್ಕಾಗಿ ನಿರ್ಮಿಸಲಾದ ಪತ್ರದ ಶೆಡ್ ಗಳನ್ನು ತಕ್ಷಣವೇ ತೆರವುಗೊಳಿಸುವ ಬೇಡಿಕೆ ಬಾಕಿ ಇತ್ತು.
ಗೋಮಾಂಸದ ಅವಶೇಷ ಮತ್ತು ರಕ್ತವನ್ನು ಭೀಮಾ ನದಿಯ ಪಾತ್ರಕ್ಕೆ ಬಿಡಲಾಗುತ್ತಿತ್ತು!
ಗೋಹತ್ಯೆಯ ನಂತರ ಹಸುವಿನ ರಕ್ತ ಮತ್ತು ಅನಗತ್ಯ ಮಾಂಸವನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಭೀಮಾ ನದಿಯ ಪಾತ್ರದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಿದ್ದರಿಂದ ನಗರಸಭೆ ಆಡಳಿತವು ಕಾರ್ಯಾಚರಣೆಗೆ ಮುಂದಾಯಿತು. ದೌಂಡ್ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ ಪವಾರ ಮತ್ತು ದೌಂಡ್ ನಗರಸಭೆಯ ಮುಖ್ಯಾಧಿಕಾರಿ ಅವಧೂತ ತಾವಡೆ ಅವರ ಮಾರ್ಗದರ್ಶನದಲ್ಲಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಾಯಿತು. (ಪವಿತ್ರ ಭೀಮಾ ನದಿಯ ಪಾತ್ರದಲ್ಲಿ ಗೋಮಾಂಸದ ಅವಶೇಷ ಮತ್ತು ರಕ್ತವನ್ನು ಬಿಡುವುದು ಪರಿಸರದ ಹಾನಿ ಮಾತ್ರವಲ್ಲದೆ, ಹಿಂದೂಗಳ ಧಾರ್ಮಿಕ ಭಾವನೆ ಮತ್ತು ಶ್ರದ್ಧೆಗೆ ಮಾಡಿದ ಅವಮಾನವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆಯು ಇಷ್ಟು ವರ್ಷಗಳ ಕಾಲ ಇದನ್ನು ಏಕೆ ನಿರ್ಲಕ್ಷಿಸಿದವು? ಪರಿಸರದ ಹೆಸರಿನಲ್ಲಿ ಹಿಂದೂಗಳ ಹಬ್ಬಗಳನ್ನು ವಿರೋಧಿಸುವ ತಥಾಕಥಿತ ಪರಿಸರವಾದಿಗಳು ಈಗ ಈ ಮಾಲಿನ್ಯದ ಬಗ್ಗೆ ಮೌನವಾಗಿರುವುದೇಕೆ? – ಸಂಪಾದಕರು)
ಗೋಹತ್ಯೆ ಮಾಡುತ್ತಿದ್ದ ಮತಾಂಧರ ತಂಡ ಗಡೀಪಾರು!
ಪುಣೆ ಗ್ರಾಮಾಂತರ ಪೊಲೀಸ್ ಪಡೆಯ ಅಧೀಕ್ಷಕ ಸಂದೀಪ ಸಿಂಗ ಗಿಲ್ ಅವರು ಮಾರ್ಚ್ 23 ರಂದು ದೌಂಡ್ ಪರಿಸರದಲ್ಲಿ ಗೋಹತ್ಯೆ ಮಾಡುತ್ತಿದ್ದ ತಂಡದ ಸದಸ್ಯರಾದ ಹಸನ್ ಉರ್ಫ್ ಲಡ್ಡು ಲಾಲಾ ಖುರೇಷಿ, ಜಮೀಲ್ ಖುರೇಷಿ ಮತ್ತು ಫೈಜಾನ್ ಖುರೇಷಿ ಅವರನ್ನು 2 ವರ್ಷಗಳ ಕಾಲ ಗಡೀಪಾರು ಮಾಡಿದ್ದಾರೆ. ಗೋಹತ್ಯೆ ಮಾಡಿ ಗೋಮಾಂಸ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ತಂಡದ ಈ ಮೂವರನ್ನು ಪುಣೆ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ದೌಂಡ್, ಬಾರಾಮತಿ, ಹವೇಲಿ ಮತ್ತು ಇಂದಾಪುರ ತಾಲೂಕು ಹಾಗೂ ಅಹಲ್ಯಾನಗರ ಜಿಲ್ಲೆಯ ಶ್ರೀಗೊಂಡ ತಾಲೂಕಿನಿಂದ ಗಡೀಪಾರು ಮಾಡಲಾಗಿದೆ. (ಈ ಕ್ರಮವು ಅಪರಾಧಿಗಳಿಗೆ ಬೇರೆಡೆ ಅಪರಾಧ ಮಾಡಲು ಅವಕಾಶ ನೀಡಿದಂತೆಯೇ ಸರಿ! ಇಂತಹ ಶಿಕ್ಷೆಯಿಂದ ಗೋವಂಶ ಹತ್ಯೆ ತಡೆಯಲು ಸಾಧ್ಯವೇ? – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”