ಹಿಂದೂ ಯುವತಿಯ ಮತಾಂತರಕ್ಕಾಗಿ ನಿದಾ ಖಾನ್ ಆಕೆಗೆ ಇಸ್ಲಾಮಿಕ್ ಜಾಲತಾಣಗಳ ೧೭೧ ಲಿಂಕ್‌ಗಳನ್ನು ಕಳುಹಿಸಿದ್ದಳು !
ಪೊಲೀಸರ ವಿಚಾರಣೆಯಿಂದ ಮಾಹಿತಿ ಬಹಿರಂಗ
ನಿದಾಳ ಆರ್ಥಿಕ ವಹಿವಾಟುಗಳ ವಿಚಾರಣೆ ಚಾಲ್ತಿಯಲ್ಲಿದೆ !

ನಾಸಿಕ್ – ಇಲ್ಲಿನ ಟಿ.ಸಿ.ಎಸ್. ಪ್ರಕರಣದ ಆರೋಪಿ ನಿದಾ ಖಾನ್, ಸಂತ್ರಸ್ತ ಯುವತಿಯನ್ನು ಮತಾಂತರ ಮಾಡಲು ಇಸ್ಲಾಂ ಬಗ್ಗೆ ಮಾಹಿತಿ ನೀಡುವ ೧೭೧ ಕಂಪ್ಯೂಟರ್ ಲಿಂಕ್‌ಗಳನ್ನು ಕಳುಹಿಸಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ತನಿಖಾ ತಂಡವು ನಿದಾ ಖಾನ್‌ಳನ್ನು ಅವಳ ಮನೆ ಮತ್ತು ಕಚೇರಿಗೆ ಕರೆದೊಯ್ದಿತ್ತು. ಅಲ್ಲಿ ಪುರಾವೆಗಳನ್ನು ಸಂಗ್ರಹಿಸಲು ಪಂಚನಾಮೆ ಮಾಡಲಾಯಿತು.
೧. ನಿದಾಳು ಸಂತ್ರಸ್ತೆಯನ್ನು ಇಸ್ಲಾಂ ಧರ್ಮದತ್ತ ಆಕರ್ಷಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಳು. ನಿದಾಳು ಸಂತ್ರಸ್ತೆಯ ಮನೆಗೆ ಹೋಗಿ ಧಾರ್ಮಿಕ ವಿಧಿ ಮತ್ತು ಅನುಷ್ಠಾನಗಳನ್ನು ಮಾಡುತ್ತಿದ್ದಳು. ನಿದಾ ಸಂತ್ರಸ್ತೆಗೆ ಬುರ್ಖಾ ಧರಿಸುವಂತೆ ಒತ್ತಾಯಿಸಿದ್ದಳು ಎಂಬ ಆರೋಪವೂ ಮಾಡಲಾಗಿದೆ.
೨. ನಿರಂತರವಾಗಿ ನೀಡಲಾಗುತ್ತಿದ್ದ ಧಾರ್ಮಿಕ ಬೋಧನೆ ಮತ್ತು ವೀಡಿಯೊಗಳ ಮೂಲಕ ಸಂತ್ರಸ್ತೆಯ ಆಲೋಚನಾ ಕ್ರಮವನ್ನು ಬದಲಾಯಿಸಲು ಪ್ರಯತ್ನಿಸಲಾಯಿತು. ನಿದಾ ಖಾನ್‌ಳ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಿದಾ ಅಳಿಸಿಹಾಕಿದ ಸಂದೇಶಗಳು, ವೀಡಿಯೊಗಳು ಮತ್ತು ಸಂಖ್ಯೆಗಳನ್ನು ಮರಳಿ ಪಡೆದ ನಂತರ ಕೆಲವು ವಿಷಯಗಳು ಬಹಿರಂಗವಾಗಲಿವೆ.
೩. ಆರ್ಥಿಕ ವಹಿವಾಟುಗಳ ತನಿಖೆಗಾಗಿ ನಿದಾಳ ಬ್ಯಾಂಕ್ ಪಾಸ್‌ಬುಕ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಅವಳಿಗೆ ನಿರ್ದಿಷ್ಟ ಗುಂಪಿನಿಂದ ಹಣ ಸಿಗುತ್ತಿದೆ ಎಂಬ ಅನುಮಾನವನ್ನು ತನಿಖಾಧಿಕಾರಿಗಳು ಈ ಹಿಂದೆಯೇ ನ್ಯಾಯಾಲಯದಲ್ಲಿ ವ್ಯಕ್ತಪಡಿಸಿದ್ದರು.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ