
ರಾಯಪುರ (ಛತ್ತೀಸ್‌ಗಢ) – ಜಾಂಜ್‌ಗೀರ್-ಚಾಂಪಾ ಜಿಲ್ಲೆಯ ಬಲೋದಾ ಇಲ್ಲಿನ ‘ಪಿ.ಎಮ್ ಶ್ರೀ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆ’ಯ ಮುಖ್ಯಾಧ್ಯಾಪಕಿ ಲಕ್ಷ್ಮಿದೇವಿ ಭಾರದ್ವಾಜ್ ಅವರನ್ನು ವಿದ್ಯಾರ್ಥಿನಿಯರ ಮೇಲೆ ಕ್ರೈಸ್ತ ಧರ್ಮ ಸ್ವೀಕರಿಸಲು ಒತ್ತಡ ತರುವುದು, ಹಾಗೆಯೇ ಸರಕಾರಿ ಯೋಜನೆಯ ಹಣದಲ್ಲಿ ಹಗರಣ ಮಾಡಿದ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದೆ. (ಹಿಂದೂ ಹೆಸರು ಇಟ್ಟುಕೊಂಡು ಕ್ರೈಸ್ತ ಧರ್ಮದ ಪ್ರಸಾರ ಮಾಡುವ ಇಂತಹ ಮತಾಂತರಿಗಳು ಹಿಂದೂ ಧರ್ಮಕ್ಕೆ ಮಾರಕವಾಗಿದ್ದಾರೆ ! – ಸಂಪಾದಕರು)
೧. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪಾಲಕರು, ಮುಖ್ಯಾಧ್ಯಾಪಕಿ ಶಾಲೆಯಲ್ಲಿ ಮಕ್ಕಳಿಗೆ ಕ್ರೈಸ್ತ ಪ್ರಾರ್ಥನೆ ಮತ್ತು ಧಾರ್ಮಿಕ ಗೀತೆಗಳನ್ನು ಹಾಡಲು ಒತ್ತಯಿಸುತ್ತಿದ್ದರು ಎಂದು ದೂರು ನೀಡಿದ್ದರು. ಮುಖ್ಯಾಧ್ಯಾಪಕಿಯ ಮೇಲಾದ ಆರೋಪಗಳ ತನಿಖೆಯ ನಂತರ ಜಿಲ್ಲಾ ಶಿಕ್ಷಣ ಇಲಾಖೆಯು ಈ ಕಾರ್ಯಾಚರಣೆ ಮಾಡಿದೆ.
೨. ಮುಂಜಾನೆಯ ಪ್ರಾರ್ಥನಾಸಭೆಯಲ್ಲಿ ಆ ವಿದ್ಯಾರ್ಥಿನಿಯರಿಂದ ರಾಷ್ಟ್ರಗೀತೆ ‘ಜನ ಗಣ ಮನ’ ಬದಲಾಗಿ ‘ಗಾಡ್ ಇಸ್ ಗ್ರೇಟ್’ ಮತ್ತು ‘ಹಾಲೆಲೂಯ’ ದಂತಹ ಕ್ರೈಸ್ತ ಗೀತೆಗಳನ್ನು ಹಾಡಿಸಿಕೊಳ್ಳುತ್ತಿದ್ದರು. ಪಾಲಕರು, ಆ ಹುಡುಗಿಯರ ಮನಸ್ಸಿನಲ್ಲಿ ಹಿಂದೂಗಳ ದೇವತೆಗಳು ಮತ್ತು ಪರಂಪರೆಯ ಬಗ್ಗೆ ನಕಾರಾತ್ಮಕತೆಯನ್ನು ಹರಡುತ್ತಿದ್ದರು ಎಂದೂ ಆರೋಪಿಸಿದರು.
೩. ಪ್ರಕರಣದ ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಶಿಕ್ಷಣಾಧಿಕಾರಿಗಳು ವಿಚಾರಣೆ ಮಾಡಿದರು. ತನಿಖೆಯಲ್ಲಿ, ಈ ಆರೋಪಗಳ ವ್ಯತಿರಿಕ್ತವಾಗಿ ಮುಖ್ಯಾಧ್ಯಾಪಕಿಯು ಸರಕಾರಿ ಯೋಜನೆಗಳ ಅಡಿಯಲ್ಲಿ ಸಿಕ್ಕಿದ ನಿಧಿಯಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ೨೦೨೧-೨೨ ರಲ್ಲಿ ಅವರು ನಕಲಿ ಬಿಲ್ಲುಗಳನ್ನು ತೋರಿಸಿ ಸರಕಾರಿ ನಿಧಿಯನ್ನು ಸ್ವತಃ ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!