
೧. ೨೨ ಜನವರಿ ೨೦೨೪ – ದೇಶದ ಇತಿಹಾಸಕ್ಕೆ ತಿರುವು ನೀಡಿದ ದಿನ !
ಪುಷ್ಯ ಶುಕ್ಲ ದ್ವಾದಶಿ, ಅಂದರೆ ೨೨ ಜನವರಿ ೨೦೨೪ ರಂದು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿತು. ದೇಶದ ಇತಿಹಾಸಕ್ಕೆ ತಿರುವು ನೀಡಿದ ಈ ಸಮಾರಂಭವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನರು ವೀಕ್ಷಿಸಿದರು. ‘ಆನ್‌ಲೈನ್ ವೀಕ್ಷಣೆಯ ಎಲ್ಲ ವಿಶ್ವ ದಾಖಲೆಗಳು ಮುರಿಯಲ್ಪಟ್ಟವು ! ಆಸೇತುಹಿಮಾಚಲದ ವರೆಗೆ, ಭಾರತದ ಎಲ್ಲ ನಗರಗಳಲ್ಲಿ ಮತ್ತು ೬ ಲಕ್ಷಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಈ ದಿನವನ್ನು ಯಾವುದೇ ಉತ್ಸವಕ್ಕಿಂತಲೂ ಹೆಚ್ಚು ಉತ್ಸಾಹದಿಂದ ಆಚರಿಸಲಾಯಿತು. ಇದೆಲ್ಲವೂ ಅದ್ಭುತ ಮತ್ತು ಅಭೂತಪೂರ್ವವಾಗಿದೆ. ಇದು ಕಲ್ಪನಾತೀತವಾಗಿದೆ. ‘ಭಾರತದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಸಮಗ್ರ ದೇಶವು ಒಮ್ಮನಸ್ಸಿನಿಂದ, ಒಕ್ಕೊರಳಿನಿಂದ ಸಂಭ್ರಮಿಸುವಂತಹದ್ದು’ ಈ ಮೊದಲು ಎಂದಿಗೂ ಸಂಭವಿಸಿರಲಿಲ್ಲ. ಆದುದರಿಂದಲೇ ಇದು ಐತಿಹಾಸಿಕವಾಗಿದೆ.

೨. …ಮತ್ತು ವಿಭಜಕ ಮನಸ್ಥಿತಿಯಲ್ಲಿ ಸಿಲುಕಿದ್ದ ಭಾರತವು ಇದ್ದಕ್ಕಿದ್ದಂತೆ ಬದಲಾಯಿತು !
ಶ್ರೀರಾಮಮಂದಿರದ ನಿಮಿತ್ತದಿಂದ ಇಡೀ ದೇಶವು ಒಂದೇ ಭಾವನೆಯಿಂದ ಮಾತನಾಡಲು ಪ್ರಾರಂಭಿಸಿತು, ಇದು ಮುಖ್ಯ. ಜಾತಿ-ಪಂಥಗಳ ಅಡೆತಡೆಗಳನ್ನು ಮೀರಿ, ಉತ್ತರ-ದಕ್ಷಿಣದಂತಹ ಭೌಗೋಳಿಕ ಭೇದಗಳನ್ನು ಬದಿಗಿರಿಸಿ ಭಾರತವು ಒಗ್ಗಟ್ಟಿನ ದರ್ಶನ ನೀಡಿತು. ವಿಭಜಕ ಮನಸ್ಥಿತಿಯಲ್ಲಿ ಸಿಲುಕಿದ್ದ ಈ ದೇಶವು ಇದ್ದಕ್ಕಿದ್ದಂತೆ ಹೇಗೆ ಬದಲಾಯಿತು ಎಂಬುದು ಜಗತ್ತಿಗೆ ಒಂದು ಒಗಟಾಯಿತು. ಇದರ ಹಿಂದೆ ಶ್ರೀರಾಮ ಮಂದಿರಕ್ಕಾಗಿ ಮಾಡಿದ ೫೫೦ ವರ್ಷಗಳ ರಕ್ತಸಿಕ್ತ ಹೋರಾಟದ ಇತಿಹಾಸವಿದೆ.
೩.‘ಸ್ವ’ದ ಜಾಗೃತಿ ಆಯಿತು, ಈಗ ಆಚರಣೆಯಲ್ಲಿ ತನ್ನಿ !
ರಾಮರಾಜ್ಯದ ನಾಗರಿಕರು ಪ್ರಾಮಾಣಿಕ, ಮುಗ್ಧ, ಸರಳ, ನೇರ ಕಷ್ಟಪಟ್ಟು ದುಡಿಯುವವರಾಗಿದ್ದರು. ಯಾವ ರಾಮರಾಜ್ಯಕ್ಕಾಗಿ ಶ್ರೀರಾಮಮಂದಿರದ ಹೋರಾಟ ಮಾಡಲಾಯಿತೋ, ಆ ರಾಮರಾಜ್ಯವನ್ನು ನಿಜವಾಗಿ ತರುವುದು ಈಗ ನಾಗರಿಕರ ಕರ್ತವ್ಯವಾಗಿದೆ, ಕೇವಲ ಆಡಳಿತಗಾರರದ್ದಲ್ಲ; ಆದುದರಿಂದಲೇ ರಾಮರಾಜ್ಯದ ಕಡೆಗೆ ಸಾಗುವ ಶ್ರೀರಾಮಮಂದಿರದ ಹಂತವು ಪೂರ್ಣಗೊಂಡಿದೆ. ಕೋಟ್ಯಂತರ ಭಾರತೀಯರ ‘ಸ್ವ’ ಜಾಗೃತ ಗೊಂಡಿದೆ. ಈ ‘ಸ್ವ’ವನ್ನು ವಾಸ್ತವದಲ್ಲಿ ತರುವುದು ಮುಂದಿನ ಹಂತವಾಗಿದೆ. ಸ್ವಭಾಷೆ, ಸ್ವಭಾಷೆಯ ಮೂಲಕ ಶಿಕ್ಷಣ, ಪರಂಪರೆ, ಸ್ವಧರ್ಮ ಮತ್ತು ಸ್ವಭಾಷೆಯಲ್ಲಿ ಸಹಿ ಮಾಡುವುದಕ್ಕೆ ಆಗ್ರಹವಿರಬೇಕು. ಇದನ್ನು ಮಾಡಲು ನಮಗೆ ಸಾಧ್ಯವಾದರೆ ಭಾರತವು ವೈಭವಸಂಪನ್ನವಾಗುವುದು ಮಾತ್ರವಲ್ಲ; ಸಮಾಜ ದಲ್ಲಿಯೂ ರಾಮರಾಜ್ಯ ನಿರ್ಮಾಣವಾಗುತ್ತದೆ.
– ಶ್ರೀ. ಪ್ರಶಾಂತ ಪೋಳ (ಪೂರ್ವ ಪ್ರಕಟಣೆ, ‘ಸೇವಾ ವರ್ಧಿನಿ’ ವಾರ್ಷಿಕ ವರದಿ, ೨೦೨೪)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆಯ ಚಾಲನೆ
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!