ದೇಶದ ಎಲ್ಲಾ ಹಿಂದೂ ದೇವಸ್ಥಾನಗಳನ್ನು ಹಿಂದೂಗಳಿಗೆ ಹಸ್ತಾಂತರಿಸಿ ! – ವಿಶ್ವ ಹಿಂದೂ ಪರಿಷತ್ತಿನಿಂದ ಸರಕಾರಕ್ಕೆ ಆಗ್ರಹ

ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರ ಪ್ರಶ್ನೆ

ಶ್ರೀ ಮಿಲಿಂದ್ ಪರಾಂಡೆ (ಮಧ್ಯದಲ್ಲಿ)

ಶಿರಡಿ (ಅಹಲ್ಯಾನಗರ) – ದೇಶದ ಎಲ್ಲಾ ಹಿಂದೂ ದೇವಸ್ಥಾನಗಳನ್ನು ಹಿಂದೂಗಳಿಗೇ ಹಸ್ತಾಂತರಿಸಬೇಕು. ದೇವಸ್ಥಾನಗಳನ್ನು ನಿರ್ವಹಿಸುವುದು ಸರಕಾರ ಅಥವಾ ನ್ಯಾಯಾಲಯದ ಕೆಲಸವಲ್ಲ. ಯಾವುದೇ ಚರ್ಚ್ ಅಥವಾ ಮಸೀದಿ ಸರಕಾರದ ನಿಯಂತ್ರಣದಲ್ಲಿಲ್ಲ ಆದರೆ ಕೇವಲ ಹಿಂದೂ ದೇವಸ್ಥಾನಗಳನ್ನು ಮಾತ್ರ ಸರಕಾರೀಕರಣ ಮಾಡುವುದು ಏಕೆ? ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ. ಮಿಲಿಂದ್ ಪರಾಂಡೆ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅವರು ಶಿರಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ದೇವಸ್ಥಾನಗಳ ನಿರ್ವಹಣೆಯನ್ನು ಹಿಂದೂಗಳೇ ಮಾಡುತ್ತಾರೆ!

ಶ್ರೀ. ಮಿಲಿಂದ ಪರಾಂಡೆ ಮಾತನಾಡಿ, ‘ಹಿಂದೂ ದೇವಸ್ಥಾನಗಳ ನಿರ್ವಹಣೆಯನ್ನು ಹಿಂದೂಗಳೇ ಮಾಡಬೇಕು ಎಂಬ ಉದ್ದೇಶದೊಂದಿಗೆ ದೇಶದ ವಿವಿಧ ಹಿಂದೂ ಸಂಘಟನೆಗಳು ಒಂದಾಗಿವೆ. ನಾವು ಈ ವಿಷಯವಾಗಿ ದೇಶದ ಎಲ್ಲಾ ಸಂಸದರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಜನಪ್ರತಿನಿಧಿಗಳು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ‘ದೇವಸ್ಥಾನ ಮುಕ್ತಿ’ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎಂದರು.

ಲವ್ ಜಿಹಾದ್ ತಡೆಯಲು ದೇಶದಲ್ಲಿ ‘ಧರ್ಮ ಸ್ವಾತಂತ್ರ್ಯ ಕಾಯ್ದೆ’ ಅಗತ್ಯ!

ಪರಾಂಡೆ ಮಾತು ಮುಂದುವರೆಸುತ್ತಾ, ದೇಶದಲ್ಲಿ ಒಂದು ನಿರ್ದಿಷ್ಟ ವರ್ಗದವರು ಯೋಜಿತ ರೀತಿಯಲ್ಲಿ ‘ಲವ್ ಜಿಹಾದ್’ ಘಟನೆಗಳನ್ನು ನಡೆಸುತ್ತಿದ್ದಾರೆ. ಹಿಂದೂ ಸಮಾಜವು ಇದರ ವಿರುದ್ಧ ಸಮರ್ಥವಾಗಿ ನಿಲ್ಲುವುದು ಅಗತ್ಯವಾಗಿದೆ. ವಿದೇಶಿ ಮಿಷನರಿಗಳಿಗೆ ಮತಾಂತರಕ್ಕಾಗಿ ಸಿಗುವ ನಿಧಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದರು. ಸಂಸತ್ತಿನ ಅಂಕಿಅಂಶಗಳು ಹೇಳುವಂತೆ, ಕಳೆದ ವರ್ಷ ಎಫ್.ಸಿ.ಆರ್.ಎ. (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಮಿಷನರಿಗಳಿಗೆ 18 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹಣವನ್ನು ಬಳಸಲಾಗುತ್ತಿದೆ, ಇದನ್ನು ನಿಷೇಧಿಸಬೇಕು. ಧರ್ಮ ರಕ್ಷಣೆಗಾಗಿ ಪ್ರತಿಯೊಂದು ರಾಜ್ಯದಲ್ಲೂ ವಿಧೇಯಕ ಅಂಗೀಕಾರವಾಗಬೇಕು. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿರುವ ಧರ್ಮ ಸ್ವಾತಂತ್ರ್ಯ ಕಾಯ್ದೆಯನ್ನು ಈಗ ಇಡೀ ದೇಶಾದ್ಯಂತ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಬಂಗಾಳದ ಬದಲಾವಣೆ ದೇಶದ ಭದ್ರತೆಗೆ ಪೂರಕ!

ಬಂಗಾಳದಲ್ಲಿ ಮೊದಲ ಬಾರಿಗೆ ಭಾಜಪ ಅಧಿಕಾರಕ್ಕೆ ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಹಿಂದೂ ಹಿತವೇ ದೇಶದ ಹಿತ. ಬಂಗಾಳದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ಆಂತರಿಕ ಭದ್ರತೆಗೆ ದೊಡ್ಡ ಪ್ರಶ್ನೆ ಎದುರಾಗಿತ್ತು. ಈಗ ಅಲ್ಲಿ ಹಿಂದುತ್ವನಿಷ್ಠ ಸಿದ್ಧಾಂತದ ಸರಕಾರ ಬಂದಿರುವುದರಿಂದ ದೇಶದ ಗಡಿಗಳು ಮತ್ತು ಭದ್ರತೆ ಇನ್ನಷ್ಟು ಬಲಗೊಳ್ಳಲಿವೆ ಎಂದು ಅಭಿಪ್ರಾಯಪಟ್ಟರು.

ಸಂಪಾದಕೀಯ ನಿಲುವು

ಚರ್ಚ್ ಮತ್ತು ಮಸೀದಿಗಳು ಸರಕಾರದ ನಿಯಂತ್ರಣದಲ್ಲಿಲ್ಲ, ಹಾಗಾದರೆ ದೇವಸ್ಥಾನಗಳು ಮಾತ್ರ ಏಕೆ?