‘ಹಾಟ್‌ಸ್ಪಾಟ್’
‘ಒಟಿಪಿ’ ಕಿರಿಕಿರಿಗೂ ಮುಕ್ತಿ
(‘ಪಬ್ಲಿಕ್ ವೈ-ಫೈ’ ಎಂದರೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈರ್‌ಲೆಸ್ ಇಂಟರ್ನೆಟ್ ಸಂಪರ್ಕ)

ನವ ದೆಹಲಿ – ಕೇಂದ್ರ ಸರಕಾರವು ದೇಶದಾದ್ಯಂತ ಹೊಸ ಮತ್ತು ಸುಧಾರಿತ ‘ಪಬ್ಲಿಕ್ ವೈ-ಫೈ’ ವ್ಯವಸ್ಥೆ ನೀಡಲು ಕಾರ್ಯ ನಿರ್ವಹಿಸುತ್ತಿದೆ. ಜನರಿಗೆ ‘ಪಬ್ಲಿಕ್ ವೈ-ಫೈ’ ಅನ್ನು ಹೆಚ್ಚು ಸುಲಭ, ಸುರಕ್ಷಿತ ಮತ್ತು ಉಪಯುಕ್ತವಾಗಿಸುವುದು ಸರಕಾರದ ಉದ್ದೇಶವಾಗಿದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಬಳಕೆದಾರರು ಇನ್ನು ಮುಂದೆ ಪ್ರತಿಯೊಂದು ವೈ-ಫೈ ಸ್ಥಳದಲ್ಲಿ ವಿಭಿನ್ನ ‘ಒಟಿಪಿ’ ಮೂಲಕ ‘ಲಾಗಿನ್’ ಆಗಬೇಕಾಗಿಲ್ಲ. ಒಮ್ಮೆ ‘ಒಟಿಪಿ’ ಅಥವಾ ‘ಪಾಸ್‌ವರ್ಡ್’ ಮೂಲಕ ‘ಲಾಗಿನ್’ ಆದ ನಂತರ, ಬಳಕೆದಾರರು ದೇಶದಾದ್ಯಂತ ಲಭ್ಯವಿರುವ ಅಂದಾಜು ೪ ಲಕ್ಷ ಸಾರ್ವಜನಿಕ ‘ವೈ-ಫೈ’ ಕೇಂದ್ರಗಳನ್ನು ಬಳಸಬಹುದು. ದುಬಾರಿ ‘ಮೊಬೈಲ್ ಡೇಟಾ ಪ್ಲಾನ್’ಗಳನ್ನು ಖರೀದಿಸಲು ಸಾಧ್ಯವಾಗದ ಜನರಿಗೆ ಇದು ಬಹಳ ಉಪಯುಕ್ತವಾಗಲಿದೆ.
೧. ಈ ನಿಟ್ಟಿನಲ್ಲಿ ‘ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ವು (‘ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ’ ಅಂದರೆ ‘ಟ್ರಾಯ್’) ಒಂದು ಸಲಹಾ ಪತ್ರವನ್ನು ಹೊರಡಿಸಿದ್ದು, ಜನರಿಂದ ಸಲಹೆಗಳನ್ನು ಕೇಳಿದೆ.
೨. ಸರಕಾರವು ಈ ಹೊಸ ಪಬ್ಲಿಕ್ ವೈ-ಫೈ ವ್ಯವಸ್ಥೆಯಲ್ಲಿ ಸುರಕ್ಷತೆಗೂ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ‘ವೈ-ಫೈ ಪ್ರೊಟೆಕ್ಟೆಡ್ ಆಕ್ಸೆಸ್ ೩’ ನಂತಹ ಆಧುನಿಕ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಲಾಗುವುದು.
ಇದರಿಂದ ಜನನಿಬಿಡ ಸ್ಥಳಗಳಲ್ಲಿಯೂ ‘ಡಿಜಿಟಲ್ ಪಾವತಿ’ಗೆ (ಆನ್‌ಲೈನ್ ಹಣ ಪಾವತಿ) ಹೆಚ್ಚಿನ ಸುರಕ್ಷತೆ ಸಿಗಲಿದೆ. ಇದರಿಂದ ಸೈಬರ್ ವಂಚನೆ ಮತ್ತು ಡೇಟಾ (ಮಾಹಿತಿ) ಕಳ್ಳತನದಂತಹ ಘಟನೆಗಳನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂದು ನಂಬಲಾಗಿದೆ.
ವಿದೇಶಗಳಲ್ಲಿ ‘ಪಬ್ಲಿಕ್ ವೈ-ಫೈ’ನ ಹೆಚ್ಚಿನ ಬಳಕೆ
ಭಾರತದ ಅಂದಾಜು ೧೪೦ ಕೋಟಿ ಜನಸಂಖ್ಯೆಯಲ್ಲಿ ಪ್ರಸ್ತುತ ಕೇವಲ ೨% ಪ್ರತಿಶತ ಜನರು ಮಾತ್ರ ‘ಪಬ್ಲಿಕ್ ವೈ-ಫೈ’ ಬಳಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ, ದಕ್ಷಿಣ ಕೊರಿಯಾದಲ್ಲಿ ಈ ಪ್ರಮಾಣ ೮೦% ಪ್ರತಿಶತ, ಅಮೆರಿಕಾದಲ್ಲಿ ೭೦% ಪ್ರತಿಶತ, ಯುರೋಪ್ ಮತ್ತು ಚೀನಾದಲ್ಲಿ ೬೦% ಪ್ರತಿಶತ ಹಾಗೂ ಇಂಗ್ಲೆಂಡ್‌ನಲ್ಲಿ ಅಂದಾಜು ೫೦% ಪ್ರತಿಶತವಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!