ಹಿಂದೂಗಳ ಶಕ್ತಿಪೀಠ ಕಂಕಾಲಿತಲಾ (ಬಂಗಾಳ) ದಲ್ಲಿ ‘ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ’ ಎಂಬ ಫಲಕ ತೆರವುಗೊಳಿಸಿದ ಪೊಲೀಸರು

ಕೋಲಕಾತಾ (ಬಂಗಾಳ) – 51 ಶಕ್ತಿಪೀಠಗಳಲ್ಲಿ ಒಂದಾದ ಕಂಕಾಲಿತಲಾ ದೇವಸ್ಥಾನದ ಪರಿಸರದಲ್ಲಿ ‘ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ’ ಎಂಬ ಫಲಕಗಳನ್ನು ಹಾಕಲಾಗಿತ್ತು. ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಆ ಫಲಕಗಳನ್ನು ತೆರವುಗೊಳಿಸಿದ್ದಾರೆ.

1. ಸ್ಥಳೀಯ ಮೂಲಗಳ ಪ್ರಕಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕೆಲವು ಕಾರ್ಯಕರ್ತರು ಈ ಫಲಕಗಳನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದ ಪವಿತ್ರತೆಯನ್ನು ಕಾಪಾಡಲು ಮತ್ತು ಇತರ ಧರ್ಮೀಯರ ಹಸ್ತಕ್ಷೇಪವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅವರ ವಾದವಾಗಿದೆ.

2. ಈ ಘಟನೆಯ ಬಗ್ಗೆ ದೇವಸ್ಥಾನ ಸಮಿತಿಯು ಆತಂಕ ವ್ಯಕ್ತಪಡಿಸಿದೆ. ಸಮಿತಿಯ ಸದಸ್ಯರೊಬ್ಬರು ಮಾತನಾಡಿ, ‘ಕಂಕಾಲಿತಲಾ ಒಂದು ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಇಲ್ಲಿಗೆ ಎಲ್ಲಾ ಧರ್ಮದ ಜನರು ಶ್ರದ್ಧೆಯಿಂದ ಬರುತ್ತಾರೆ. ಇಂತಹ ಫಲಕಗಳನ್ನು ಹಾಕುವುದು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿದೆ’ ಎಂದಿದ್ದಾರೆ. (ದೇವಸ್ಥಾನ ಮಂಡಳಿಯ ಸದಸ್ಯರಿಗೆ ಧರ್ಮ ಶಿಕ್ಷಣದ ಅವಶ್ಯಕತೆ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ! ಸಂಪಾದಕರು)

3. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಿ ಭಂಗವಾಗಬಾರದು ಮತ್ತು ಧಾರ್ಮಿಕ ಸೌಹಾರ್ದತೆ ನೆಲೆಸಬೇಕು ಎಂಬ ಕಾರಣ ನೀಡಿ ಪೊಲೀಸರು ಫಲಕಗಳನ್ನು ತೆಗೆದುಹಾಕಿದ್ದಾರೆ.

4. ಈ ಘಟನೆಯ ನಂತರ ಪರಿಸರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಮತ್ತು ಶಾಂತಿ ಕಾಪಾಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ರಾಜಕೀಯ ವಲಯದಲ್ಲೂ ಇದಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ತೃಣಮೂಲ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿದೆ ಮತ್ತು ಭಾಜಪ ಈ ವಿಷಯದಲ್ಲಿ ಎಚ್ಚರಿಕೆಯ ನಿಲುವನ್ನು ತಳೆದಿದೆ.

ಕಂಕಾಲಿತಲಾ ಶಕ್ತಿಪೀಠದ ಮಹತ್ವ

ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿರುವ ಕಂಕಾಲಿತಲಾ ಅತ್ಯಂತ ಮಹತ್ವದ ಹಾಗೂ ಪವಿತ್ರವಾದ ಧಾರ್ಮಿಕ ಸ್ಥಳವಾಗಿದೆ. ಹಿಂದೂ ಧರ್ಮದ 51 ಶಕ್ತಿಪೀಠಗಳಲ್ಲಿ ಇದು ಒಂದೆಂದು ಪರಿಗಣಿಸಲ್ಪಟ್ಟಿದೆ. ಭಗವಾನ್ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಮಾತಾ ಸತಿಯ ದೇಹವನ್ನು ಛಿದ್ರಗೊಳಿಸಿದಾಗ, ಅವಳ ದೇಹದ ಕಂಕಾಲ (ಸೊಂಟದ ಭಾಗ) ಇಲ್ಲಿ ಬಿದ್ದಿತ್ತು ಎನ್ನಲಾಗುತ್ತದೆ. ಇಲ್ಲಿ ದೇವಿಯನ್ನು ‘ದೇವಗರ್ಭ’ ಅಥವಾ ‘ಕಂಕಾಲೀ’ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಅವಳ ರಕ್ಷಕನಾಗಿ ಭಗವಾನ್ ಶಿವನು ‘ರುರು’ ಭೈರವನ ರೂಪದಲ್ಲಿ ನೆಲೆಸಿದ್ದಾನೆ. ಈ ದೇವಸ್ಥಾನದ ವಿಶೇಷತೆಯೆಂದರೆ ಇಲ್ಲಿ ಯಾವುದೇ ರೀತಿಯ ಶಿಲಾಮೂರ್ತಿಗಳಿಲ್ಲ. ಬದಲಾಗಿ, ಒಂದು ಪವಿತ್ರ ಕುಂಡದಲ್ಲಿರುವ ಶಿಲೆಗಳನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ.

ಸಂಪಾದಕೀಯ ನಿಲುವು

  • ಹಿಂದೂಗಳ ಶಕ್ತಿಪೀಠಗಳಲ್ಲಿ ಅಹಿಂದೂಗಳಿಗೆ ಏನು ಕೆಲಸ? ಗೋಮಾಂಸ ಭಕ್ಷಣೆ ಮಾಡುವವರಿಗೆ ಹಿಂದೂಗಳ ದೇವಸ್ಥಾನಗಳಲ್ಲಿ ಪ್ರವೇಶ ಏಕೆ ನೀಡಬೇಕು? ಆದ್ದರಿಂದ ಇಂತಹ ಫಲಕಗಳನ್ನು ದೇವಸ್ಥಾನದ ಪರಿಸರದಲ್ಲಿ ಹಾಕಿದರೆ ಅದರಲ್ಲಿ ತಪ್ಪೇನಿದೆ?
  • ಫಲಕಗಳನ್ನು ತೆರವುಗೊಳಿಸಲು ತೋರುವ ಇಂತಹ ತತ್ಪರತೆಯನ್ನು, ಹಿಂದೂಗಳನ್ನು ಪೀಡಿಸುವ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಎಂದಾದರೂ ತೋರುತ್ತಾರೆಯೇ?
  • ಈಗ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ. ಆದ್ದರಿಂದ ಸರಕಾರವು ಮೊದಲಿಗೆ ರಾಜ್ಯದ ಎಲ್ಲಾ ದೇವಸ್ಥಾನಗಳ ಹೊರಗೆ ಇಂತಹ ಫಲಕಗಳನ್ನು ಹಾಕುವುದರ ಜೊತೆಗೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಬೇಕು ಎಂಬುದು ಹಿಂದೂಗಳ ಆಶಯವಾಗಿದೆ!