ಗಾಜಿಯಾಬಾದ್ (ಉತ್ತರ ಪ್ರದೇಶ) ನ ‘ಸೇಂಟ್ ತೆರೇಸಾ ಅಕಾಡೆಮಿ’ ಶಾಲೆಯಲ್ಲಿ ನಡೆದ ಘಟನೆ
ಶಾಲೆಯ ಮುಂದೆ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ
ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಲು ಮತ್ತು ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಲು ಒತ್ತಾಯ

ಗಾಜಿಯಾಬಾದ್ (ಉತ್ತರ ಪ್ರದೇಶ) – ನಗರದ ಮೋದಿ ನಗರದ ಸಂತಪುರ ಗಲ್ಲಿ ಸಂಖ್ಯೆ-6 ರಲ್ಲಿರುವ ‘ಸೇಂಟ್ ತೆರೇಸಾ ಅಕಾಡೆಮಿ’ ಶಾಲೆಯಲ್ಲಿ ದೈಹಿಕ ಶಿಕ್ಷಣ (ಪಿಟಿ) ಶಿಕ್ಷಕಿಯಾಗಿದ್ದ ಅರುಣಾ ಗೋಸ್ವಾಮಿ ಅವರು, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ ಅವರು ಹಿಂದೂ ಮಕ್ಕಳು ಮತ್ತು ಸಿಬ್ಬಂದಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅರುಣಾ ಗೋಸ್ವಾಮಿ ಅವರು ಮೋದಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮೇ 5 ರಂದು ಹಿಂದೂ ಸಂಘಟನೆಗಳು ಶಾಲೆಯ ಪ್ರವೇಶ ದ್ವಾರದ ಮುಂದೆ ಭಾರಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದವು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಶಾಲೆಯ ಗೇಟ್ ಮೇಲೆ ‘ಜೈ ಶ್ರೀರಾಮ್’ ಎಂದು ಬರೆದು ಹನುಮಾನ್ ಚಾಲೀಸಾ ಪಠಿಸಿದರು. ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಮತ್ತು ಮುಖ್ಯೋಪಾಧ್ಯಾಯಿನಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು. ಪರಿಸ್ಥಿತಿಯನ್ನು ಗಮನಿಸಿ ಶಾಲೆಯ ಗೇಟ್ ಮುಚ್ಚಲಾಗಿತ್ತು ಮತ್ತು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಅರುಣಾ ಗೋಸ್ವಾಮಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸುತ್ತಾ,
1. ನಾನು 2012 ರಿಂದ ಸೇಂಟ್ ತೆರೇಸಾ ಅಕಾಡೆಮಿಯಲ್ಲಿ ‘ಪಿಟಿ’ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗ ಶಿವ ಗೋಸ್ವಾಮಿ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ.
2. ಎರಡು ವರ್ಷಗಳ ಹಿಂದೆ ಹೊಸ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ ಬಂದ ನಂತರ ಶಾಲೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಶಾಲೆಯಲ್ಲಿ ಹಿಂದೂ ಮಕ್ಕಳ ಕೈಯಲ್ಲಿರುವ ‘ಕಲಾವ’ (ಧಾರ್ಮಿಕ ದಾರ) ವನ್ನು ಬಲವಂತವಾಗಿ ಕತ್ತರಿಸಲಾಗುತ್ತಿದೆ. ಪ್ರತಿ ಭಾನುವಾರ ಬಡ ಹಿಂದೂ ಮಕ್ಕಳಿಗೆ ಹಣದ ಆಮಿಷ ತೋರಿಸಿ ಶಾಲೆಯ ಬಸ್‌ನಲ್ಲಿ ಚರ್ಚ್‌ಗೆ ಕರೆದೊಯ್ದು ಮತಾಂತರ ಮಾಡಲಾಗುತ್ತಿದೆ.
3. ಮಕ್ಕಳೊಂದಿಗೆ ಶಿಕ್ಷಕರಿಗೂ ರಜೆಯ ನಂತರ ಚರ್ಚ್‌ಗೆ ಹೋಗಲು ಒತ್ತಾಯಿಸಲಾಗುತ್ತದೆ. ಶಾಲೆಯಲ್ಲಿ ಹಿಂದೂ ಹಬ್ಬಗಳನ್ನು ಆಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಖ್ಯೋಪಾಧ್ಯಾಯಿನಿಯ ಕಚೇರಿಯಲ್ಲಿ ಪೋಷಕರೊಂದಿಗೆ ನಿಂದನೆ ಮತ್ತು ಅಸಭ್ಯವಾಗಿ ವರ್ತಿಸಲಾಗುತ್ತದೆ.
4. ಮೇ 4, 2026 ರಂದು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ ನನ್ನನ್ನು ಕಚೇರಿಗೆ ಕರೆದು, ನನ್ನ ಕೈಮೇಲಿರುವ ‘ಭಗವಾನ್ ಮಹಾದೇವ’ನ ಹಚ್ಚೆಯನ್ನು (tattoo) ಅಳಿಸಲು ಮತ್ತು ಹಣೆಯ ಮೇಲಿರುವ ಬೊಟ್ಟನ್ನು ತೆಗೆಯಲು ಆದೇಶಿಸಿದರು. ಶಾಲಾ ಆವರಣದಲ್ಲಿ ಕೇವಲ ಕ್ರೈಸ್ತ ಧರ್ಮದ ನಿಯಮಗಳು ಮಾತ್ರ ನಡೆಯುತ್ತವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. ನಾನು ಇದನ್ನು ವಿರೋಧಿಸಿದಾಗ, ಅದೇ ದಿನ ನನ್ನನ್ನು ಕೆಲಸದಿಂದ ತೆಗೆದುಹಾಕಿದರು.
5. ನಾನು ಚರ್ಚ್‌ಗೆ ಹೋಗದ ಕಾರಣ ಮತ್ತು ಕಲಾವವನ್ನು ಕತ್ತರಿಸದ ಕಾರಣ ನನ್ನ ಮಗ ಶಿವನಿಗೂ ನಿರಂತರ ಮಾನಸಿಕ ಕಿರುಕುಳ ನೀಡಲಾಗಿದೆ. ಆತನನ್ನು ಹಾಸ್ಟೆಲ್‌ನಲ್ಲಿ ಇರಿಸಲಾಗಿತ್ತು, ಅಲ್ಲಿ ಆತ ಅನಾರೋಗ್ಯಕ್ಕೆ ಒಳಗಾದನು. ತದನಂತರ ಆತನನ್ನು ಶಾಲೆಯಿಂದ ಹೊರಹಾಕಲಾಯಿತು.
ಆರೋಪಗಳನ್ನು ನಿರಾಕರಿಸಿದ ಮುಖ್ಯೋಪಾಧ್ಯಾಯಿನಿ
ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ ಈ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ಕರೆದಿದ್ದಾರೆ. ಅವರು, ತಮ್ಮ ಶಾಲೆಯಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಲಾಗುತ್ತದೆ ಮತ್ತು ಎಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ. ಪಿಟಿ ಶಿಕ್ಷಕಿಗೆ ಮಕ್ಕಳು ಅಥವಾ ಪೋಷಕರ ದೂರಿನ ಮೇರೆಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಒಮ್ಮೆ ಅಥವಾ ಎರಡು ಬಾರಿ ಸೂಚನೆ ನೀಡಲಾಗಿತ್ತು; ಆದರೆ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಮಗುವನ್ನು ಶಾಲೆಯಿಂದ ಹೊರಹಾಕಿಲ್ಲ, ಬದಲಿಗೆ ಆತನ ತಂದೆಯೇ ಶಾಲೆಯನ್ನು ಬಿಡುವ ಪ್ರಮಾಣಪತ್ರಕ್ಕಾಗಿ (Transfer Certificate) ಅರ್ಜಿ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein