
ಢಾಕಾ (ಬಾಂಗ್ಲಾದೇಶ) – ಪಶ್ಚಿಮ ಬಂಗಾಳ ಮತ್ತು ಆಸ್ಸಾಂನಲ್ಲಿ ಭಾಜಪ ಅಧಿಕಾರಕ್ಕೆ ಬಂದ ನಂತರ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದ ಮೇಲೆ ಇದರ ಪರಿಣಾಮವೇನಾಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಬಂಗಾಳದ ಮತದಾನೋತ್ತರ ಸಮೀಕ್ಷೆಗಳಲ್ಲಿ ‘ಭಾಜಪಕ್ಕೆ ಅಧಿಕಾರ ಸಿಗಲಿದೆ’ ಎಂದು ವರದಿಯಾದಾಗ, ಬಾಂಗ್ಲಾದೇಶದ ಸಂಸತ್ತಿನಲ್ಲಿ ಓರ್ವ ಸಂಸದರು ‘ಬಂಗಾಳದಿಂದ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಬರಬಹುದು ಮತ್ತು ಇದರಿಂದ ಬಾಂಗ್ಲಾದೇಶದ ಮುಂದೆ ಹೊಸ ಸಂಕಟ ಎದುರಾಗಬಹುದು’ ಎಂದು ಭೀತಿ ವ್ಯಕ್ತಪಡಿಸಿದ್ದರು. ಈಗ ಬಾಂಗ್ಲಾದೇಶದ ಪತ್ರಕರ್ತ ಅಲ್ತಾಫ್ ಪರ್ವೇಜ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶದ ‘ಪ್ರಥೋಮೊಲೋ’ ದಿನಪತ್ರಿಕೆಯಲ್ಲಿ ಪರ್ವೇಜ್ ಅವರು ಒಂದು ವರದಿ ಪ್ರಕಟಿಸಿದ್ದು, ಭಾರತೀಯ ಜನತಾ ಪಕ್ಷಕ್ಕೆ ೨೦೧೧ ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಂದು ಸ್ಥಾನವೂ ಸಿಕ್ಕಿರಲಿಲ್ಲ; ಆದರೆ ೧೫ ವರ್ಷಗಳ ಒಳಗಾಗಿ ಅವರು ೨೦೦ ರ ಗಡಿ ದಾಟಿದ್ದಾರೆ. ದಕ್ಷಿಣ ಏಷ್ಯಾದ ರಾಜಕೀಯ ವಾತಾವರಣದಲ್ಲಿ ಇದು ‘ರೈಟ್ ಸೈಡ್ ಶಿಫ್ಟ್’ನ (ಬಲಪಂಥೀಯ ಸಿದ್ಧಾಂತದತ್ತ ಒಲವು) ಐತಿಹಾಸಿಕ ಸಂಕೇತವಾಗಿದೆ. ಬಂಗಾಳದ ಚುನಾವಣಾ ಫಲಿತಾಂಶಗಳು ಗಡಿಯಾಚೆಯ ಬಾಂಗ್ಲಾದೇಶದಲ್ಲಿ ಅಸ್ವಸ್ಥತೆ ಸೃಷ್ಟಿಸಿವೆ. ಭಾರತದ ಇತ್ತೀಚಿನ ವರ್ಷಗಳ ಯಾವುದೇ ಚುನಾವಣೆಯು ಬಾಂಗ್ಲಾದೇಶದಲ್ಲಿ ಇಷ್ಟೊಂದು ಸಂಚಲನ ಮೂಡಿಸಿರಲಿಲ್ಲ. ಬಂಗಾಳದ ಚುನಾವಣೆಯು ಈ ಹಿಂದೆಂದೂ ಈ ರೀತಿ ಬಾಂಗ್ಲಾದೇಶದ ಜನರ ಗಮನ ಸೆಳೆದಿರಲಿಲ್ಲ.
ಬಾಂಗ್ಲಾದೇಶದ ಲಕ್ಷ್ಯವೇಕಿತ್ತು?
ಬಂಗಾಳದಲ್ಲಿ ‘ಬಂಗಾಳಿ ಅಸ್ಮಿತೆ’ಯ ಅಂಶ ರಾಜಕೀಯವಾಗಿ ಪಕ್ಕಕ್ಕೆ ಸರಿದಿರುವುದು ಮತ್ತು ಭಾಜಪ-ತೃಣಮೂಲ ಕಾಂಗ್ರೆಸ್ಸಿನ ರಣತಂತ್ರಗಳ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಲಾಗುತ್ತಿದೆ ಎಂದು ಅಲ್ತಾಫ್ ಪರ್ವೇಜ್ ಹೇಳಿದ್ದಾರೆ. ಈ ಅಂಶಗಳ ಬಗ್ಗೆ ಬೇರೆ ಬೇರೆ ದಾವೆಗಳನ್ನು ಮಾಡಲಾಗುತ್ತಿದ್ದರೂ, ಈ ಚುನಾವಣಾ ಫಲಿತಾಂಶಗಳು ಗಡಿಯಾಚೆಯ ಬಾಂಗ್ಲಾದೇಶದಲ್ಲಿ ಅಸ್ವಸ್ಥತೆ ಸೃಷ್ಟಿಸಿರುವುದು ಸತ್ಯ. ಈ ಅಸ್ವಸ್ಥತೆಗೆ ಅನೇಕ ಕಾರಣಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಭರ್ಜರಿ ಪ್ರಚಾರವೂ ಅವುಗಳಲ್ಲಿ ಒಂದು ಕಾರಣವಾಗಿದೆ.
ಬಾಂಗ್ಲಾದೇಶ ಯಾಕೆ ಚಿಂತೆಗೊಳಗಾಗಿದೆ?
ಬಂಗಾಳ ಚುನಾವಣೆಯಲ್ಲಿ ನಿರ್ಮಾಣವಾಗಿರುವ ರಾಜಕೀಯ ಬಿರುಗಾಳಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಾಂಗ್ಲಾದೇಶದ ಉಲ್ಲೇಖವಾಗುತ್ತಲೇ ಇತ್ತು. ಅಮಿತ್ ಶಾ ಅವರ ಹೇಳಿಕೆಗಳು ಬಾಂಗ್ಲಾದೇಶದ ಆತಂಕವನ್ನು ಹೆಚ್ಚಿಸಿವೆ. ಯಾಕೆಂದರೆ ಅವರು ಕೇಂದ್ರ ಸರಕಾರದಲ್ಲಿನ ಒಬ್ಬ ಪ್ರಭಾವಶಾಲಿ ಸಚಿವರಾಗಿದ್ದಾರೆ. ಬಂಗಾಳದಲ್ಲಿ ಭಾಜಪ ವಿಜಯದ ಪರಿಣಾಮಗಳು ಭಾರತದ ಗಡಿಗಳ ಆಚೆಗೂ (ಬಾಂಗ್ಲಾದೇಶದಲ್ಲಿ) ಆಗಲಿವೆ ಎಂದು ಅಲ್ತಾಫ್ ಪರ್ವೇಜ್ ಹೇಳಿದ್ದಾರೆ. ಆಳವಾದ ಮರುಪರಿಶೀಲನಾ ಪ್ರಕ್ರಿಯೆಯ ಅಡಿಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಲಕ್ಷಾಂತರ ಜನರನ್ನು ಗಡಿ ದಾಟಿಸಿ ಕಳುಹಿಸುವ ಪ್ರಯತ್ನ ನಡೆಯಬಹುದು. ಇಂತಹದ್ದೇ ಹೇಳಿಕೆಯನ್ನು ಭಾಜಪ ಇತರ ನಾಯಕರೂ ಸತತವಾಗಿ ನೀಡುತ್ತಿದ್ದಾರೆ. ಈಗ ಭಾಜಪ ದೆಹಲಿಯ ಜೊತೆಗೆ ಬಂಗಾಳದಲ್ಲಿಯೂ ಅಧಿಕಾರದಲ್ಲಿದೆ.
‘ನುಸುಳುಕೋರರನ್ನು ಹೊರಹಾಕಿದರೆ ಸಂಬಂಧಗಳಲ್ಲಿ ಬಿರುಕು ಮೂಡಬಹುದು!’
ಜನರನ್ನು ಗಡಿ ದಾಟಿಸುವ ಪ್ರಯತ್ನಗಳಿಂದಾಗಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಉದ್ವಿಗ್ನತೆ ಉಂಟಾಗಬಹುದೆಂದು ಪರ್ವೇಜ್ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಎರಡೂ ದೇಶಗಳ ಸಂಬಂಧಗಳಲ್ಲಿ ಆದ ಸುಧಾರಣೆಯು ಮತ್ತೆ ಸಂಕಷ್ಟಕ್ಕೆ ಸಿಲುಕಬಹುದು. ಈ ಪರಿಸ್ಥಿತಿಯು ಅನೇಕ ಜಟಿಲ ರಾಜತಾಂತ್ರಿಕ ಮತ್ತು ಮಾನವೀಯ ಪ್ರಶ್ನೆಗಳನ್ನು ಉದ್ಭವಿಸುತ್ತದೆ. ದೊಡ್ಡ ಮಟ್ಟದಲ್ಲಿ ಇಂತಹ ಪ್ರಯತ್ನಗಳು ನಡೆಯುವುದಿಲ್ಲ ಎಂಬ ಸಾಧ್ಯತೆ ಇದ್ದರೂ ಸಹ, ಇಂತಹ ಕೃತ್ಯ ನಡೆಯುವುದನ್ನು ನಿರಾಕರಿಸಲು ಸಾಧ್ಯವಿಲ್ಲ.
ಅಲ್ತಾಫ್ ಅವರ ಪ್ರಕಾರ, ಭಾಜಪ ಆಸ್ಸಾಂ ಮತ್ತು ಬಂಗಾಳದಂತಹ ಗಡಿ ರಾಜ್ಯಗಳಲ್ಲಿ ಬಲಗೊಂಡಿರುವುದರಿಂದ ಬಾಂಗ್ಲಾದೇಶದ ಮೇಲೆ ಖಂಡಿತವಾಗಿಯೂ ದೀರ್ಘಕಾಲದವರೆಗೆ ಒತ್ತಡವಿರುತ್ತದೆ. ಭಾರತದ ನಾಯಕರಿಂದ ಒಂದು ವೇಳೆ ಚುನಾವಣೆಯ ನಂತರವೂ ಇಂತಹದ್ದೇ ಹೇಳಿಕೆಗಳು ಬರುತ್ತಿದ್ದರೆ, ಮುಂಬರುವ ಕಾಲದಲ್ಲಿ ಬಾಂಗ್ಲಾದೇಶದಲ್ಲಿಯೂ ಈ ವಿಷಯದ ಕುರಿತು ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation