ಕಳೆದ ವಾರವಷ್ಟೇ ಗುಂಡಿನ ದಾಳಿ ನಡೆದಿತ್ತು!
(‘ವೈಟ್ ಹೌಸ್’ ಎಂದರೆ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿ)

ವಾಷಿಂಗ್ಟನ್ (ಅಮೆರಿಕ) – ಕಳೆದ ವಾರವಷ್ಟೇ ವೈಟ್ ಹೌಸ್‌ನಲ್ಲಿ ‘ಕರೆಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮ ನಡೆಯುತ್ತಿದ್ದಾಗ ಸಭಾಂಗಣದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯ ಬೆನ್ನಲ್ಲೇ ಈಗ ವೈಟ್ ಹೌಸ್ ಆವರಣದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಬೆಂಗಾವಲು ಪಡೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಕಳೆದ ವಾರ ನಡೆದ ಗುಂಡಿನ ದಾಳಿಯ ಸಂದರ್ಭದಲ್ಲಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ವ್ಯಾನ್ಸ್ ಉಪಸ್ಥಿತರಿದ್ದರು.
Another shooting near the White House 🇺🇸 and JD Vance’s convoy reportedly had a narrow escape
Second shooting incident within a week raises concerns
Yet Donald Trump talks of taking on multiple countries when even security near his own residence seems questionable. https://t.co/S6LQnRIFQT pic.twitter.com/MjypW417Nm
— Sanatan Prabhat (@SanatanPrabhat) May 5, 2026
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ‘ಅಮೆರಿಕ ಸೀಕ್ರೆಟ್ ಸರ್ವಿಸ್’ (ಅಮೆರಿಕದ ಅಧ್ಯಕ್ಷರ ಭದ್ರತಾ ಸಂಸ್ಥೆ) ನ ಉಪನಿರ್ದೇಶಕ ಮ್ಯಾಥ್ಯೂ ಕಿನ್, “ವಾಷಿಂಗ್ಟನ್ ಡಿ.ಸಿ.ಯ 15ನೇ ರಸ್ತೆ ಮತ್ತು ಇಂಡಿಪೆಂಡೆನ್ಸ್ ಅವೆನ್ಯೂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೈಟ್ ಹೌಸ್ ಕಾಂಪ್ಲೆಕ್ಸ್‌ನ ಹೊರಗೆ ಗಸ್ತು ತಿರುಗುತ್ತಿದ್ದ ಸೈನಿಕರಿಗೆ ಬಂದೂಕುಧಾರಿ ಶಂಕಿತ ವ್ಯಕ್ತಿಯೊಬ್ಬ ಕಾಣಿಸಿದನು. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸಲು ಹತ್ತಿರ ಹೋದಾಗ, ಆ ವ್ಯಕ್ತಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದನು. ಅಧಿಕಾರಿಗಳು ಪ್ರತಿದಾಳಿ ನಡೆಸಿದಾಗ ಆತ ಗಾಯಗೊಂಡಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಪಾದಚಾರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಬೆಂಗಾವಲು ಪಡೆ ಇದೇ ಮಾರ್ಗವಾಗಿ ಹಾದುಹೋಗಿತ್ತು” ಎಂದು ಅಧಿಕಾರಿಗಳು ತಿಳಿಸಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation