ದಾಳಿಯಲ್ಲಿ ೨ ಮಸೀದಿಗಳು ಮತ್ತು ೨ ಶಾಲೆಗಳು ಧ್ವಂಸಗೊಂಡಿದ್ದವು

ಕಾಬೂಲ (ಅಫ್ಘಾನಿಸ್ತಾನ) – ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಕುನಾರ ಪ್ರಾಂತ್ಯದ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ೨ ಶಾಲೆಗಳು, ೨ ಮಸೀದಿಗಳು ಮತ್ತು ೧ ಆರೋಗ್ಯ ಕೇಂದ್ರ ಧ್ವಂಸಗೊಂಡಿವೆ. ಘಟನೆಯಲ್ಲಿ ೩ ಜನರು ಸಾವನ್ನಪ್ಪಿದ್ದು, ೧೪ ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಪ್ರತಿಪಾದಿಸಿದೆ. ಆದರೆ, ಪಾಕಿಸ್ತಾನವು ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಇತ್ತೀಚೆಗೆ ಅಫ್ಘಾನ್ ಗಡಿಯಿಂದ ಪಾಕಿಸ್ತಾನದ ದಿಕ್ಕಿಗೆ ನಡೆದ ಗುಂಡಿನ ದಾಳಿಯ ಘಟನೆಯನ್ನು ಮರೆಮಾಚಲು ಅಫ್ಘಾನಿಸ್ತಾನವು ಇಂತಹ ದಾವೆಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನ ಹೇಳುತ್ತಿದೆ. ಪಾಕಿಸ್ತಾನದ ಪ್ರಕಾರ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಅಫ್ಘಾನ್ ಗಡಿಯಿಂದ ನಡೆದ ದಾಳಿಗಳಲ್ಲಿ ಖೈಬರ್ ಪಖ್ತುನ್ಖ್ವಾದ ಬಾಜೌರ್ ಜಿಲ್ಲೆಯಲ್ಲಿ ೯ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation