ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಪಾದರಕ್ಷೆಯ ಧೂಳಿಗೂ ಸಮಾನರಲ್ಲ ಎಂದು ಹೇಳಿಕೆ ನೀಡಿದ್ದರು

ಘಾಜಿಯಾಬಾದ್ (ಉತ್ತರ ಪ್ರದೇಶ) / ಭಾಗ್ಯನಗರ (ತೆಲಂಗಾಣ) – ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನ ನಾಯಕ ರಾಹುಲ ಗಾಂಧಿ ಅವರ ವಿರುದ್ಧ ಆಕ್ಷೇಪಾರ್ಹ ಭಾಷೆಯಲ್ಲಿ ಟೀಕೆ ಮಾಡಿದ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ದೂರದರ್ಶನದ ಪತ್ರಕರ್ತ ಅಶೋಕ ಶ್ರೀವಾಸ್ತವ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತೆಲಂಗಾಣ ಪೊಲೀಸರು ಘಾಜಿಯಾಬಾದ್‌ನಲ್ಲಿರುವ ಶ್ರೀವಾಸ್ತವ ಅವರ ನಿವಾಸಕ್ಕೆ ಹೋಗಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆ ಸಮಯದಲ್ಲಿ ಶ್ರೀವಾಸ್ತವ ಅವರು ಮನೆಯಲ್ಲಿ ಇರಲಿಲ್ಲ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ ೩೫(೩) ರ ಅಡಿಯಲ್ಲಿ ನೋಟಿಸ್ ನೀಡಲು ಭಾಗ್ಯನಗರದ ಇಬ್ಬರು ಪೊಲೀಸ್ ಉಪನಿರೀಕ್ಷಕರ ತಂಡವು ಘಾಜಿಯಾಬಾದ್‌ನ ಲಿಂಕ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯನಗರ ಪ್ರದೇಶಕ್ಕೆ ತಲುಪಿತ್ತು.
ಅಶೋಕ್ ಶ್ರೀವಾಸ್ತವ ಏನು ಹೇಳಿದ್ದರು?
’ಡಿಡಿ ನ್ಯೂಸ್’ ವಾಹಿನಿಯ ಚರ್ಚೆಯೊಂದರಲ್ಲಿ ಭಾಜಪ ವಕ್ತಾರ ತುಹಿನ್ ಸಿನ್ಹಾ, ರಾಜಕೀಯ ವಿಶ್ಲೇಷಕ ಸೈಯದ್ ಜಾವೇದ್ ಮತ್ತು ಇತರ ಅತಿಥಿಗಳ ಉಪಸ್ಥಿತಿಯಲ್ಲಿ ಶ್ರೀವಾಸ್ತವ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಕುರಿತು ಪ್ರಸ್ತಾಪಿಸುತ್ತಾ ಶ್ರೀವಾಸ್ತವ ಅವರು, ‘ನೀವು ಸಾವರ್ಕರ್ ಅವರ ಪಾದರಕ್ಷೆಯ ತುದಿಗೂ ಸಮಾನರಲ್ಲ. ನೀವು ಅವರ ಪಾದರಕ್ಷೆಯ ಧೂಳಿನ ಸಾವಿರದ ಒಂದು ಭಾಗದಷ್ಟೂ ಇಲ್ಲ. ರಾಹುಲ್ ಗಾಂಧಿ ಅವರು ವೀರ್ ಸಾವರ್ಕರ್ ಅವರ ಪಾದರಕ್ಷೆಯ ತಳಕ್ಕೆ ಅಂಟಿಕೊಂಡಿರುವ ಧೂಳಿನ ಕಣಕ್ಕೂ ಸಮಾನರಲ್ಲ’ ಎಂದು ಹೇಳಿದ್ದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ