ಬ್ರಹ್ಮೋಸ್ ಕ್ಷಿಪಣಿಗಿಂತ ಎರಡು ಪಟ್ಟು ಹೆಚ್ಚು ವೇಗ
(ಹೈಪರ್‌ಸಾನಿಕ್ ಎಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು ವೇಗವನ್ನು ಹೊಂದಿರುವುದು)

ನವದೆಹಲಿ – ದೇಶವು ಶೀಘ್ರದಲ್ಲೇ ‘ಹೈಪರ್‌ಸಾನಿಕ್ ಗ್ಲೈಡ್ ಕ್ಷಿಪಣಿ’ ಮತ್ತು ‘ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿ’ಗಳನ್ನು ಹೊಂದಲಿದೆ ಎಂದು ಡಿ.ಆರ್.ಡಿ.ಒ. (DRDO) ಮುಖ್ಯಸ್ಥ ಸಮೀರ್ ಕಾಮತ್ ಅವರು ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಗ್ಲೈಡ್ ಕ್ಷಿಪಣಿಯ ಮೊದಲ ಪರೀಕ್ಷೆಯು ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
"India will soon be equipped with 'Hypersonic Glide' and 'Hypersonic Cruise' missiles.They will be twice as fast as BrahMos missiles," says DRDO Chief Samir Kamat.#DefenceNews
PC: @news24tvchannel pic.twitter.com/ouBYDLZjDO— Sanatan Prabhat (@SanatanPrabhat) May 2, 2026
೧. ಅತ್ಯಾಧುನಿಕ ‘ಹೈಪರ್‌ಸಾನಿಕ್’ ಕ್ಷಿಪಣಿಗಳ ವೇಗವು ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಿಂತ ಎರಡು ಪಟ್ಟು ಹೆಚ್ಚಿರಲಿದೆ. ಇವುಗಳ ವಿಶೇಷ ಗುಣಲಕ್ಷಣಗಳಿಂದಾಗಿ ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯು ಇವುಗಳನ್ನು ತಡೆಯಲು ಸಾಧ್ಯವಿಲ್ಲ. ಅಧಿಕೃತ ಅನುಮೋದನೆ ದೊರೆತ ೫ ವರ್ಷಗಳಲ್ಲಿ ಈ ಕ್ಷಿಪಣಿ ವ್ಯವಸ್ಥೆಯನ್ನು ಸೈನ್ಯಕ್ಕೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ.
೨. ಭಾರತವು ನೌಕಾ ವಿರೋಧಿ (Anti-ship) ಕ್ಷಿಪಣಿಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಈ ಕ್ಷಿಪಣಿಯು ಬ್ರಹ್ಮೋಸ್‌ಗಿಂತ ಹೆಚ್ಚು ವೇಗವಾಗಿರಲಿದೆ. ಇದರ ಮೂರನೇ ಹಂತದ ಪರೀಕ್ಷೆಯು ಇದೇ ತಿಂಗಳು ನಡೆಯಲಿದೆ.
೩. ‘ಅಗ್ನಿ-೬’ ಕ್ಷಿಪಣಿ ಕಾರ್ಯಕ್ರಮಕ್ಕಾಗಿ ತಾಂತ್ರಿಕ ತಂಡವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಕಾಮತ್ ಸ್ಪಷ್ಟಪಡಿಸಿದ್ದಾರೆ. ಸರಕಾರದಿಂದ ಹಸಿರು ನಿಶಾನೆ ದೊರೆತ ತಕ್ಷಣ ನಾವು ಇದರ ಕೆಲಸವನ್ನು ಆರಂಭಿಸುತ್ತೇವೆ ಎಂದಿದ್ದಾರೆ.
೪. ‘ಅಗ್ನಿ-೬’ ಅಗ್ನಿ ಕ್ಷಿಪಣಿ ಸರಣಿಯ ಅತ್ಯಂತ ಆಧುನಿಕ ‘ಖಂಡಾಂತರ ಕ್ಷಿಪಣಿ’ (Intercontinental Ballistic Missile – ICBM) ಆಗಿರಲಿದೆ. ಇದರ ದಾಳಿ ಸಾಮರ್ಥ್ಯವು ೧೦ ಸಾವಿರದಿಂದ ೧೨ ಸಾವಿರ ಕಿಲೋಮೀಟರ್‌ಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಕ್ಷಿಪಣಿಯು ಏಕಕಾಲದಲ್ಲಿ ಅನೇಕ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಒಂದೇ ಬಾರಿಗೆ ಹಲವಾರು ಗುರಿಗಳನ್ನು ತಲುಪಬಲ್ಲದು.
೫. ರಷ್ಯಾದ ಬಳಿ ‘ಜಿರ್ಕಾನ್’ ಮತ್ತು ‘ಕಿಂಜಾಲ್’ ಹೈಪರ್‌ಸಾನಿಕ್ ಕ್ಷಿಪಣಿಗಳಿವೆ. ಚೀನಾ ‘ಡಿಎಫ್-ಜೆಡ್‌ಎಫ್’ (DF-ZF) ಅನ್ನು ನಿಯೋಜಿಸಿದೆ. ಅಮೆರಿಕ ಈ ತಂತ್ರಜ್ಞಾನದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಅಮೆರಿಕದ ಬಳಿ ಟೊಮಾಹಾಕ್ ತಂತ್ರಜ್ಞಾನದ ‘ಸೂಪರ್‌ಸಾನಿಕ್’ ಕ್ಷಿಪಣಿಗಳಿವೆ; ಆದರೆ ಇತ್ತೀಚಿನ ವರ್ಷಗಳಲ್ಲಿ ‘AGM-183 ARRW’ ನಂತಹ ಅವರ ಹೈಪರ್‌ಸಾನಿಕ್ ಯೋಜನೆಗಳು ವಿಫಲವಾಗಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ