
‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, “ಪ.ಪೂ. ಬಾಬಾರವರು (ಪ.ಪೂ. ಭಕ್ತರಾಜ ಮಹಾರಾಜರು) ನನಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ಎಂಬ ಗುರುಮಂತ್ರವನ್ನು ಕೊಟ್ಟರು. ಅದರಿಂದ ನನಗೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಯನ್ನು ಮಾಡಬೇಕಾಗುತ್ತಿದೆ, ಅಂದರೆ ಸಮಾಜದಲ್ಲಿನ ರಜ-ತಮವನ್ನು ಕಡಿಮೆಗೊಳಿಸಿ ಸತ್ತ್ವಗುಣವನ್ನು ಸ್ಥಾಪಿಸಬೇಕಾಗುತ್ತಿದೆ” ಎಂದು ಹೇಳಿದರು.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (ಮೇ ೨೦೧೭)

(‘ಪ್ರಭು ಶ್ರೀರಾಮಚಂದ್ರನೆಂದರೆ ಧರ್ಮಸಂಸ್ಥಾಪನೆಯ ಸಾಕ್ಷಾತ್ ಮೂರ್ತಿವೆತ್ತ ಉದಾಹರಣೆ ! ಪ.ಪೂ. ಬಾಬಾರವರು ತಮ್ಮ ಶಿಷ್ಯ ಡಾ. ಆಠವಲೆಯವರಿಂದ ಭಾವಿಕಾಲದಲ್ಲಿ ಆಗಲಿರುವ ಧರ್ಮಸಂಸ್ಥಾಪನೆಯ ಕಾರ್ಯವನ್ನು ಗುರುತಿಸಿಯೇ ಅವರಿಗೆ ಗುರುಮಂತ್ರವೆಂದು ರಾಮನಾಮವನ್ನು ಕೊಟ್ಟಿದ್ದರು. ಪ.ಪೂ. ಬಾಬಾರವರ ಸಂಕಲ್ಪ, ಡಾ. ಆಠವಲೆಯವರು ಭಾವಪೂರ್ಣವಾಗಿ ಮಾಡಿದ ನಾಮಜಪ ಮತ್ತು ಸಮರ್ಪಣಾಭಾವದಿಂದ ಮಾಡಿದ ಸಮಷ್ಟಿಸಾಧನೆ, ಇವುಗಳಿಂದಾಗಿ ಅವರಲ್ಲಿ ಶ್ರೀರಾಮತತ್ತ್ವ ಕಾರ್ಯನಿರತವಾಯಿತು. ಆದ್ದರಿಂದ ಅವರು ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಶ್ರೀರಾಮನ ಅಂಶವಿದೆ. ಅವರೇ ಈ ಪೃಥ್ವಿಯಲ್ಲಿ ರಾಮರಾಜ್ಯ (ಹಿಂದೂ ರಾಷ್ಟ್ರ)ದ ಸ್ಥಾಪಿಸಲಿದ್ದಾರೆ’ ಎಂದು ಸಪ್ತರ್ಷಿಗಳೂ ಜೀವನಾಡಿಪಟ್ಟಿ ವಾಚನದ ಮಾಧ್ಯಮದಿಂದ ೩.೨.೨೦೨೧ ರಂದು ಹೇಳಿದ್ದಾರೆ.’
– (ಪೂ.) ಶ್ರೀ. ಸಂದೀಪ ಆಳಶಿ) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಮಷ್ಟಿ ಸಾಧನೆ ಮತ್ತು ಆಧ್ಯಾತ್ಮಿಕ ಅಧಿಕಾರ’)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !