ಶಿರೋಲಿ ಪುಲಾಚಿ (ಜಿಲ್ಲೆ ಕೊಲ್ಹಾಪುರ): ಮತಾಂಧನಿಂದ ಹಿಂದೂ ಯುವತಿಯರ ವಿಡಿಯೋ ಪ್ರಸಾರ;

ಕೊಲ್ಹಾಪುರ – ಹಿಂದೂ ಯುವತಿಯರನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ, ಅವರ ‘ವಿಡಿಯೋ’ಗಳನ್ನು ತಯಾರಿಸಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಶಯಿತ ಮತಾಂಧ ಸಮೀರ್ ಸನದೆ ವಾಸವಿರುವ ಶಿರೋಲಿ ಪುಲಾಚಿ ಗ್ರಾಮದಲ್ಲಿ ಏಪ್ರಿಲ್ ೨೮ ರಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಮತ್ತು ಹಿಂದುತ್ವನಿಷ್ಠರು ಗ್ರಾಮದ ಕಮಾನಿನಿಂದ ಗ್ರಾಮ ಪಂಚಾಯಿತಿಯವರೆಗೆ ಮೆರವಣಿಗೆ ನಡೆಸಿ, ಸಂಶಯಿತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪೊಲೀಸರು ಈ ಮೆರವಣಿಗೆಯನ್ನು ಗ್ರಾಮ ಪಂಚಾಯಿತಿ ಕಚೇರಿಯ ಹೊರಗಡೆ ತಡೆದರು ಮತ್ತು ಮೆರವಣಿಗೆಗೆ ಅನುಮತಿ ಇಲ್ಲ ಎಂಬ ಕಾರಣ ನೀಡಿ ಗ್ರಾಮಸ್ಥರನ್ನು ಹಿಂತಿರುಗುವಂತೆ ಹೇಳಿದರು. ಈ ಸಂದರ್ಭದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ‘ಗ್ರಾಮ ಬಂದ್’ ಚಳವಳಿಯನ್ನು ನಡೆಸಿದರು.
ಈ ಪ್ರಕರಣದಲ್ಲಿ ಸಮೀರ್ ಸನದೆ ಇವನಿಗೆ ಸಹಕರಿಸಿದ ಆತನ ಗೆಳೆಯ ಶಾಹರುಖ್ ದೇಸಾಯಿ ತಲೆಮರೆಸಿಕೊಂಡಿದ್ದು, ಆತನನ್ನು ಕೂಡ ಕೂಡಲೇ ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. (ಹಿಂದೂಗಳು ಯಾವಾಗಲೂ ಸಂಯಮದಿಂದ ಪ್ರತಿಭಟಿಸುತ್ತಾರೆ, ಆದರೆ ಮತಾಂಧರು ಯಾವಾಗಲೂ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಹೀಗಿದ್ದರೂ ಕಾನೂನಿನ ಚಡಿ ಏಟು ಯಾವಾಗಲೂ ಹಿಂದೂಗಳ ಮೇಲೆಯೇ ಏಕೆ? ಮತಾಂಧರು ಹಿಂದೂ ಯುವತಿಯರನ್ನು ಜಾಲಕ್ಕೆ ಸಿಲುಕಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದರೂ ಹಿಂದೂಗಳು ಪ್ರತಿಭಟನೆ ಕೂಡ ಮಾಡಬಾರದೆಂದು ಪೊಲೀಸರಿಗೆ ಅನ್ನಿಸುತ್ತದೆಯೇ? – ಸಂಪಾದಕರು)
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ನಮ್ಮನ್ನು ಮೆರವಣಿಗೆಗೆ ಅನುಮತಿ ಇಲ್ಲ ಎಂಬ ಕಾರಣ ನೀಡಿ ಪೊಲೀಸರು ತಡೆದಿದ್ದಾರೆ; ಆದರೆ ಎರಡು ದಿನಗಳಲ್ಲಿ ನಾವು ಅನುಮತಿ ಪಡೆದು ಮತ್ತೆ ಮೆರವಣಿಗೆ ನಡೆಸಲಿದ್ದೇವೆ. ಪೊಲೀಸರು ನಮ್ಮನ್ನು ‘ಮೌನ ಮೆರವಣಿಗೆ ನಡೆಸಿ’ ಎಂದು ಹೇಳುತ್ತಿದ್ದಾರೆ; ಆದರೆ ಹಿಂದೂಗಳು ಈಗ ಸುಮ್ಮನೆ ಕೂರುವುದಿಲ್ಲ. ನಮ್ಮ ತಾಯಿ-ತಂಗಿಯರ ಮೇಲೆ ದೌರ್ಜನ್ಯ ಎಸಗುವ ಮತಾಂಧರನ್ನು ಗ್ರಾಮದಿಂದ ಹೊರ ಹಾಕಬೇಕೆಂದು ನಾವು ಈ ಮೂಲಕ ಆಗ್ರಹಿಸುತ್ತೇವೆ. ಪೊಲೀಸರು ೪ ದಿನಗಳಲ್ಲಿ ಈ ಬಗ್ಗೆ ಕೂಲಂಕುಷ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹಿಂದೂಗಳ ಆಕ್ರೋಶ ಸ್ಫೋಟಗೊಳ್ಳುವುದು ಖಚಿತ, ಎಂದು ಹೇಳಿದರು.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ