ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಪರ್ವೇಜ್ ಮಲಿಕ್ ಅವರ ಸ್ವೀಕಾರ
ಪಾಕಿಸ್ತಾನದಲ್ಲಿ ಪೆಟ್ರೋಲ್ ದಾಸ್ತಾನು ಖಾಲಿ!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಬಳಿ ಪ್ರಸ್ತುತ ಕಚ್ಚಾ ತೈಲದ ಕೇವಲ ೫ ರಿಂದ ೭ ದಿನಗಳ ದಾಸ್ತಾನು ಮಾತ್ರ ಲಭ್ಯವಿದೆ. ಅಷ್ಟೇ ಅಲ್ಲದೆ, ಒಂದು ದಿನಕ್ಕೂ ಆಗುವಷ್ಟು ಪೆಟ್ರೋಲ್ ಸಂಗ್ರಹ ಕೂಡ ಉಳಿದಿಲ್ಲ. ಪಾಕಿಸ್ತಾನದ ಇಂಧನ ವ್ಯವಸ್ಥೆಯು ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿದೆ. ಈ ಪರಿಸ್ಥಿತಿಯು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ದೀರ್ಘಕಾಲದ ಇಂಧನ ಸನ್ನದ್ಧತೆಯಲ್ಲಿ ಸುಧಾರಣೆ ತರುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಭಾರತಕ್ಕೆ ಯಾವ ರೀತಿ ಒಂದು ಸಹಿಯಿಂದ ೬೦ ರಿಂದ ೭೦ ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹ ಸಿಗುತ್ತದೆಯೋ, ಅಂತಹ ಪರಿಸ್ಥಿತಿ ಪಾಕಿಸ್ತಾನಕ್ಕಿಲ್ಲ ಎಂದು ಪಾಕಿಸ್ತಾನದ ಕೇಂದ್ರ ಪೆಟ್ರೋಲಿಯಂ ಸಚಿವ ಅಲಿ ಪರ್ವೇಜ ಮಲಿಕ್ ಅವರು ‘ಸಮಾ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.
Pakistan’s Petroleum Minister Ali Pervaiz Malik admits: India secures oil with a single signature, while Pakistan struggles for supplies.
Petrol stocks are depleting there.
And this same bankrupt nation dreams of mediating wars between major powers. What could be more… pic.twitter.com/9NVAphytgO
— Sanatan Prabhat (@SanatanPrabhat) April 28, 2026
ಮಲಿಕ್ ಅವರು ಮಾತನಾಡುತ್ತಾ,
ಅಮೆರಿಕಾ-ಇರಾನ್ ಯುದ್ಧವು ಶೀಘ್ರವಾಗಿ ಕೊನೆಗೊಳ್ಳದ ಕಾರಣ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿದೆ. ಪಾಕಿಸ್ತಾನವು ತುರ್ತಾಗಿ ‘ಇಂಧನ ಭದ್ರತಾ ಯೋಜನೆ’ಯನ್ನು ರೂಪಿಸುವ ಅಗತ್ಯವಿದೆ. ಇತಿಹಾಸದಲ್ಲಿ ದುಬೈನಲ್ಲಿ ಕಚ್ಚಾ ತೈಲದ ಬೆಲೆಯು ಎಂದೂ ೧೭೦ ಡಾಲರ್ ಗೆ ತಲುಪಿರಲಿಲ್ಲ. ಈ ಪರಿಸ್ಥಿತಿಯು ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಅಸ್ಥಿರತೆಯ ಲಕ್ಷಣವಾಗಿದೆ. ಸರಕಾರವು ಜನರ ಸಂಕಷ್ಟಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಸಾಧ್ಯವಿರುವೆಡೆ ಸಬ್ಸಿಡಿ ನೀಡಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಇಂಧನ ಭದ್ರತೆಯನ್ನು ಸುಧಾರಿಸಲು ೩೦ ದಿನಗಳ ‘ಕ್ರೂಡ್ ಆಯಿಲ್ ಪ್ರೋಗ್ರಾಂ’ (ಕಚ್ಚಾ ತೈಲ ಕಾರ್ಯಕ್ರಮ) ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation