
ಬೆಂಗಳೂರು – ಕಾಣೆಯಾದ ಹಸುಗಳನ್ನು ಹುಡುಕುವಂತಹ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಗಂಭೀರ ಮತ್ತು ನೈಜ ಅಪರಾಧಗಳ ತನಿಖೆಯತ್ತ ಗಮನ ಹರಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಪ್ರಕರಣವೊಂದರಲ್ಲಿ ಕಾಣೆಯಾದ ಹಸುಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪೊಲೀಸರ ತನಿಖಾ ಆದ್ಯತೆಗಳ ಬಗ್ಗೆ ಪ್ರಶ್ನೆ ಎತ್ತುತ್ತಾ ಈ ಮೇಲಿನ ಸೂಚನೆಯನ್ನು ನೀಡಿದ್ದಾರೆ.
ಪೊಲೀಸರು ವಿವೇಚನೆಯಿಂದ ವರ್ತಿಸಬೇಕು!
ನ್ಯಾಯಮೂರ್ತಿಗಳು ಮಾತು ಮುಂದುವರೆಸುತ್ತಾ, “ಪೊಲೀಸರು ಏನು ಮಾಡುತ್ತಿದ್ದಾರೆ? ಅವರು ನೈಜ ಅಪರಾಧಗಳನ್ನು ಪತ್ತೆಹಚ್ಚಬೇಕು. ಅನೇಕ ಗಂಭೀರ ಅಪರಾಧಗಳು ಬಾಕಿ ಇರುವಾಗ, ಕಾಣೆಯಾದ ಹಸುಗಳನ್ನು ಹುಡುಕುವುದು ಪೊಲೀಸರ ಪ್ರಾಥಮಿಕ ಕೆಲಸವಾಗಲು ಸಾಧ್ಯವಿಲ್ಲ. ಹಲವು ಬಾರಿ ಕ್ಷುಲ್ಲಕ ದೂರುಗಳ ಮೇಲೆ ಪೊಲೀಸರು ಅನಗತ್ಯ ಸಮಯ ವ್ಯರ್ಥ ಮಾಡುತ್ತಾರೆ. ಇದರಿಂದಾಗಿ ಪ್ರಮುಖ ಪ್ರಕರಣಗಳ ತನಿಖೆ ವಿಳಂಬವಾಗುತ್ತದೆ.” ಕಾಣೆಯಾದ ಹಸುಗಳನ್ನು ಹುಡುಕುವಂತಹ ಪ್ರಕರಣಗಳಿಂದ ಪೊಲೀಸ್ ಪಡೆಯ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಗಂಭೀರ ಪ್ರಕರಣಗಳ ಅಪರಾಧಿಗಳನ್ನು ಹಿಡಿಯಲು ಪೊಲೀಸರು ಹೆಚ್ಚಿನ ತತ್ಪರತೆ ತೋರಿಸುವುದು ಅಗತ್ಯವಾಗಿದೆ. ಹಸುಗಳು ಕಾಣೆಯಾಗುವಂತಹ ಪ್ರಕರಣಗಳನ್ನು ‘ಕ್ರಿಮಿನಲ್ ಪ್ರಕರಣ’ಗಳಾಗಿ ಪರಿಗಣಿಸುವಾಗ ಪೊಲೀಸರು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು,” ಎಂದು ನ್ಯಾಯಾಲಯ ಹೇಳಿದೆ. ಈ ಹಿಂದೆಯೂ ಇತರ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ಪೊಲೀಸರ ತನಿಖೆಯ ಮಂದಗತಿ ಮತ್ತು ಆದ್ಯತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University