ಇದುವರೆಗೆ ೩೭ ನೌಕೆಗಳನ್ನು ವಾಪಸ್ ಕಳುಹಿಸಿದ ಅಮೆರಿಕ

ಟೆಹರಾನ್ (ಇರಾನ್) – ಏಪ್ರಿಲ್ ೨೫ ರಂದು ಅಮೆರಿಕದ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸುತ್ತಿದ್ದ ‘ಸೇವನ್’ ಎಂಬ ಇರಾನಿ ವ್ಯಾಪಾರಿ ನೌಕೆಯನ್ನು ತಡೆದಿದೆ. ಇರಾನ್ ನ ತೈಲ ಮತ್ತು ಅನಿಲವನ್ನು ಕಳ್ಳಮಾರ್ಗದಿಂದ ವಿದೇಶಗಳಿಗೆ ಸಾಗಿಸುತ್ತಿದ್ದ ೧೯ ನೌಕೆಗಳ ಸಮೂಹದಲ್ಲಿ ಈ ನೌಕೆಯೂ ಒಂದಾಗಿತ್ತು. ಅಮೆರಿಕ ನೌಕಾಪಡೆಯ ಎಚ್ಚರಿಕೆಯ ನಂತರ ಈ ನೌಕೆಯು ಇರಾನ್ ಕಡೆಗೆ ಹಿಂತಿರುಗಿತು. ಅಮೆರಿಕದ ನೌಕಾಪಡೆಯು ಇದುವರೆಗೆ ಇಂತಹ ೩೭ ನೌಕೆಗಳನ್ನು ವಾಪಸ್ ಕಳುಹಿಸಿದೆ.
‘ರಾಡೋ ಫ್ಲೀಟ್’ ಎಂಬುದು ೧೯ ನೌಕೆಗಳ ಸಮೂಹವಾಗಿದೆ. ಇದು ಇರಾನ್ ನ ತೈಲ ಮತ್ತು ಅನಿಲವನ್ನು ವಿಶ್ವದ ಇತರ ದೇಶಗಳಿಗೆ ತಲುಪಿಸುತ್ತದೆ. ಈ ಎಲ್ಲಾ ನೌಕೆಗಳ ಮೇಲೆ ಅಮೆರಿಕದ ನಿರ್ಬಂಧಗಳಿವೆ. ಈ ನೌಕೆಗಳು ಇರಾನ್ ನಿಂದ ಇತರ ದೇಶಗಳಿಗೆ ತೈಲ, ಅನಿಲ, ಪ್ರೊಪೇನ್ ಮತ್ತು ಬ್ಯುಟೇನ್ ನಂತಹ ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಸಾಗಿಸುತ್ತವೆ. ‘ಈ ನೌಕೆಗಳು ಇರಾನ್ ನ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತಿರುವುದರಿಂದ ನಾವು ಅವುಗಳನ್ನು ತಡೆಯುತ್ತಿದ್ದೇವೆ’, ಎಂದು ಅಮೆರಿಕ ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation