ಮಾದಕ ದ್ರವ್ಯ ಮಾಫಿಯಾದ ಕೈವಾಡವಿರುವ ಶಂಕೆ

ಬೋಗೋಟಾ (ಕೊಲಂಬಿಯಾ) – ದಕ್ಷಿಣ ಅಮೆರಿಕದ ದೇಶವಾದ ಕೊಲಂಬಿಯಾದ ನೈಋತ್ಯ ಭಾಗದಲ್ಲಿ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಏಪ್ರಿಲ್ 25 ರಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ. ಸೇನಾ ಮುಖ್ಯಸ್ಥರು ಈ ಘಟನೆಯನ್ನು ‘ಭಯೋತ್ಪಾದಕ ದಾಳಿ’ ಎಂದು ಬಣ್ಣಿಸಿದ್ದಾರೆ. ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿ ಸಂಸ್ಥೆಯ ಪ್ರಕಾರ, ಈ ಸ್ಫೋಟವು ಕಾವುಕಾ ಪ್ರಾಂತ್ಯದ ಕಾಜಿಬಿಯೊ ಪ್ರದೇಶದಲ್ಲಿರುವ ಪಾನ್-ಅಮೆರಿಕನ ಹೆದ್ದಾರಿಯಲ್ಲಿ ಸಂಭವಿಸಿದೆ.
೧. ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.
೨. ಕೊಲಂಬಿಯಾದ ಸಶಸ್ತ್ರ ಪಡೆಗಳ ಕಮಾಂಡರ್ ಜನರಲ್ ಹ್ಯೂಗೋ ಲೋಪೆಜ್ ಅವರು ಈ ದಾಳಿಗೆ ‘ಇವಾನ್ ಮೊರ್ದಿಸ್ಕೋ’ ಎಂಬ ಕುಖ್ಯಾತ ಅಪರಾಧ ಜಾಲ ಮತ್ತು ‘ಜೈಮೆ ಮಾರ್ಟಿನೆಜ್’ ಗುಂಪು ಕಾರಣ ಎಂದು ಹೇಳಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman