
ಮುಂಬೈ – ‘ಫಲಜ್ಯೋತಿಷ ಅಭ್ಯಾಸ ಮಂಡಳ, ಪುಣೆ’ ಇವರ ವತಿಯಿಂದ ಜ್ಯೋತಿಷ್ಯ ವಿಷಯಗಳ ವಿವಿಧ ಪದವಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಇತ್ತೀಚೆಗೆ ಇವುಗಳಲ್ಲಿನ ‘ಜ್ಯೋತಿಷ ಪ್ರಾಜ್ಞ’ ಎಂಬ ಪದವಿ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಸನಾತನದ ಸಾಧಕರಾದ ಶ್ರೀ. ಶ್ರೇಯಸ ಪಿಸೋಳಕರ ಅವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ೨೦೦ ಅಂಕಗಳಲ್ಲಿ ೧೭೮ ಅಂಕಗಳನ್ನು ಪಡೆದಿದ್ದಾರೆ. ಈ ಸಮಯದಲ್ಲಿ ಫಲಜ್ಯೋತಿಷ ಅಭ್ಯಾಸ ಮಂಡಳದ ಅಧ್ಯಕ್ಷ ಮತ್ತು ಸಂಚಾಲಕರಾದ ಪಂಡಿತ ವಿಜಯ ಶ್ರೀಕೃಷ್ಣ ಜಕಾತದಾರ ಅವರು ದೂರವಾಣಿ ಕರೆ ಮಾಡಿ ಶ್ರೇಯಸ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಂಡಿತ ಜಕಾತದಾರ ಅವರು, ‘ಇನ್ನು ಮುಂದೆಯೂ ನೀವು ನಿಮ್ಮ ಅಧ್ಯಯನವನ್ನು ಇದೇ ರೀತಿ ಮುಂದುವರೆಸಿ. ನೀವು ನಮ್ಮ ಕುಟುಂಬದವರೇ ಆಗಿದ್ದೀರಿ. ನಿಮ್ಮ ಮುಂದಿನ ಎಲ್ಲ ಮಾರ್ಗಕ್ರಮಣಕ್ಕೆ ಶುಭ ಹಾರೈಕೆಗಳು !’, ಎಂದು ಹಾರೈಸಿದರು.
‘ಕೇವಲ ಗುರುಕೃಪೆಯಿಂದ ಮಾತ್ರ ಇದು ಸಾಧ್ಯವಾಯಿತು. ಈ ಯಶಸ್ಸನ್ನು ನಾನು ಶ್ರೀಗುರುಗಳ ಚರಣಗಳಿಗೆ ಅರ್ಪಿಸುತ್ತೇನೆ. ಶ್ರೀಗುರುಗಳ ಸೇವೆಗಾಗಿ ಈ ಜ್ಞಾನದ ಉಪಯೋಗ ಮಾಡುತ್ತೇನೆ’, ಎಂದು ಶ್ರೀ. ಶ್ರೇಯಸ ಪಿಸೋಳಕರ ಅವರು ತಮ್ಮ ಮನೋಗತವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !