
ನಾಗಪುರ – ಭಾರತವು ಖಂಡಿತವಾಗಿಯೂ ವಿಶ್ವಗುರು ಆಗಲಿದೆ, ಈ ಬಗ್ಗೆ ಯಾರಿಗೂ ಸಂಶಯ ಬೇಡ. ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣದ ಬಗ್ಗೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದರು. ಮಂದಿರ ನಿರ್ಮಾಣ ಅಸಾಧ್ಯವೆಂದೇ ಭಾವಿಸಲಾಗಿತ್ತು; ಆದರೆ ಇಂದು ಆ ಮಂದಿರವು ಎಲ್ಲರ ಎದುರು ಸಾಕ್ಷಾತ್ ಆಗಿ ನಿಂತಿದೆ. ಅದೇ ರೀತಿ ಭಾರತವು ವಿಶ್ವಗುರುವಾಗಿ ಪುನರುತ್ಥಾನಗೊಳ್ಳುವುದು ಕೂಡ ಸಂಪೂರ್ಣ ಖಚಿತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಪ್ರತಿಪಾದಿಸಿದರು. ಇಲ್ಲಿನ ‘ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್’ (ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ) ಪರಿಸರದಲ್ಲಿ ನಿರ್ಮಿಸಲಾಗುತ್ತಿರುವ ‘ಭಾರತ ದುರ್ಗಾ ಶಕ್ತಿ ಸ್ಥಳ’ ದೇವಸ್ಥಾನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ, ಸ್ವಾಮಿ ಮಿತ್ರಾನಂದಜೀ ಮಹಾರಾಜ, ಸಾಧ್ವಿ ಋತಂಭರಾ ಮತ್ತು ಧೀರೇಂದ್ರಕೃಷ್ಣ ಶಾಸ್ತ್ರಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಪ.ಪೂ. ಸರಸಂಘಚಾಲಕರು ಮಾತು ಮುಂದುವರೆಸುತ್ತಾ,
೧. ದೇಶದ ಭವಿಷ್ಯದ ಬಗ್ಗೆ ಸಂಶಯಪಡಬೇಡಿ. ಧೈರ್ಯದೊಂದಿಗೆ ಆತ್ಮನಿರ್ಭರತೆಯಿಂದ ಜೀವನ ನಡೆಸಿ.
೨. ಜನರು ಸಂಕಲ್ಪದಂತೆ ಮುನ್ನಡೆದರೆ ಭಾರತವು ಇನ್ನಷ್ಟು ಸಶಕ್ತವಾಗಲಿದೆ.
೩. ಭಾರತವು ವಿಶ್ವಗುರು ಆಗುವ ಕನಸು ನಿರಂತರ ಪ್ರಯತ್ನ ಮತ್ತು ಸಾಮೂಹಿಕ ಶಿಸ್ತಿನ ಮೂಲಕ ಸಾಕಾರಗೊಳ್ಳಲಿದೆ.
೪. ಭಾರತವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕಾದರೆ, ಅದನ್ನು ತನ್ನದೇ ಆದ ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳ ದೃಷ್ಟಿಕೋನದಿಂದ ನೋಡಬೇಕು. ಕಳೆದ ೧೫೦ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ವಿಚಾರಗಳ ಮೂಲಕ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ವಿದೇಶಿ ಸಿದ್ಧಾಂತಗಳ ಪದರಗಳನ್ನು ತೆಗೆದುಹಾಕಬೇಕಾಗುತ್ತದೆ.
೪ ಮಕ್ಕಳಿಗೆ ಜನ್ಮ ನೀಡಿ, ಅವರಲ್ಲಿ ಒಂದು ಮಗುವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೀಡಿ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಭಾರತದಲ್ಲಿ ಎಲ್ಲಿಯೇ ವಿಪತ್ತು ಸಂಭವಿಸಿದರೂ ಜನರು ಜೀವ ಉಳಿಸಿಕೊಳ್ಳಲು ಓಡುತ್ತಾರೆ; ಆದರೆ ನಮ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಪ್ರಾಣ ಉಳಿಸಿಕೊಳ್ಳಲು ಓಡುವುದಿಲ್ಲ, ಬದಲಾಗಿ ಅಲ್ಲಿಗೆ ಹೋಗಿ ಜನರ ಪ್ರಾಣ ಉಳಿಸುತ್ತಾನೆ. ಆದ್ದರಿಂದ ೪ ಮಕ್ಕಳನ್ನು ಹೆತ್ತು ಅವರಲ್ಲಿ ಒಂದು ಮಗುವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೀಡಿ, ಇದರಿಂದ ಆ ಮಗು ಇತರರ ಪ್ರಾಣ ಉಳಿಸಲು ಸಹಾಯ ಮಾಡುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಈ ಸಮಯದಲ್ಲಿ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಉಪಸ್ಥಿತರಿದ್ದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !