ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ:

ನವದೆಹಲಿ – ಮಹಿಳೆಯರು ಮಸೀದಿಯನ್ನು ಪ್ರವೇಶಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂಬುದರ ಕುರಿತು ಇಸ್ಲಾಂನ ಎಲ್ಲಾ ಪಂಥಗಳಲ್ಲಿ ಒಮ್ಮತವಿದೆ; ಆದರೆ ‘ಮಸೀದಿಯಲ್ಲಿ ನಮಾಜ್ ಮಾಡುವ ಸಮುದಾಯದಲ್ಲಿ ಭಾಗವಹಿಸುವುದು ಮಹಿಳೆಯರಿಗೆ ಕಡ್ಡಾಯವಲ್ಲ’ ಎಂಬುದರ ಬಗ್ಗೆಯೂ ಒಮ್ಮತವಿದೆ. ಹಾಗೆಯೇ ಪ್ರವಾದಿ ಮೊಹಮ್ಮದರು ಸ್ವತಃ ಮಹಿಳೆಯರನ್ನು ಮಸೀದಿಗೆ ಬರದಂತೆ ತಡೆಯಬಾರದು ಎಂದು ಸೂಚನೆ ನೀಡಿದ್ದಾರೆ. ಆದರೂ ಮಹಿಳೆಯರು ಮನೆಯಲ್ಲೇ ನಮಾಜ್ ಮಾಡುವುದು ಹೆಚ್ಚು ಸೂಕ್ತವಾಗಿದೆ. ಮನೆಯಲ್ಲಿ ನಮಾಜ್ ಮಾಡುವುದರಿಂದ ಮಹಿಳೆಯರಿಗೆ ಮಸೀದಿಯಲ್ಲಿ ನಮಾಜ್ ಮಾಡುವ ಪುರುಷರಿಗೆ ಸಿಗುವಷ್ಟೇ ಧಾರ್ಮಿಕ ಪುಣ್ಯ ಲಭಿಸುತ್ತದೆ ಎಂಬ ಮಾಹಿತಿಯನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸುಪ್ರೀಂ ಕೋರ್ಟ್‌ಗೆ ನೀಡಿದೆ. ಸುಪ್ರೀಂ ಕೋರ್ಟ್‌ನ 9 ಸದಸ್ಯರ ಸಾಂವಿಧಾನಿಕ ಪೀಠವು ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಶಬರಿಮಲೈ ಪ್ರಕರಣದ ಅರ್ಜಿಗಳೊಂದಿಗೆ ಸೇರಿಸಲಾಗಿದೆ. ಸಂವಿಧಾನದ 25 ಮತ್ತು 26 ನೇ ವಿಧಿಯ ವ್ಯಾಪ್ತಿಗೆ ಸಂಬಂಧಿಸಿದ ಸಾಂವಿಧಾನಿಕ ಅಂಶಗಳು ಈ ಎರಡೂ ಪ್ರಕರಣಗಳಿಗೆ ಅನ್ವಯವಾಗುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಎಂ.ಆರ್. ಶಂಶಾದ್ ಅವರು ಬೋರ್ಡ್ ಪರವಾಗಿ ವಾದ ಮಂಡಿಸಿದರು.
Selective Silence on Women’s Entry? ⚖️
“Women are not prohibited from entering mosques for Namaz, but it is better if they pray at home,” the All India Muslim Personal Law Board stated in the Supreme Court of India during the Sabarimala Temple matter.
This implies that while… pic.twitter.com/tqcTjZjv6U
— Sanatan Prabhat (@SanatanPrabhat) April 24, 2026
ಅರ್ಜಿಗಳಿಗೆ ಉತ್ತರಿಸುತ್ತಾ ಶಂಶಾದ್ ಅವರು, “ಮಸೀದಿಗಳಲ್ಲಿ ‘ಗರ್ಭಗುಡಿ’ ಎಂಬ ಪರಿಕಲ್ಪನೆ ಇಲ್ಲ; ಆದರೆ ದರ್ಗಾಗಳಲ್ಲಿ ಇರುತ್ತದೆ. ಮಸೀದಿಯಲ್ಲಿ ಗರ್ಭಗುಡಿ ಇಲ್ಲದಿರುವುದರಿಂದ ಯಾರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಬೇಕೆಂದು ಪಟ್ಟು ಹಿಡಿಯುತ್ತಿಲ್ಲ,” ಎಂದು ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!