
ಕೊಟ್ಟಾಯಂ (ಕೇರಳ) – ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ಉತ್ಸವದಲ್ಲಿ ಭಜನಾ ಮಂಡಳಿಯೊಂದು ಕ್ರಿಶ್ಚಿಯನ್ ಭಕ್ತಿಗೀತೆಯನ್ನು ಹಾಡಿದ್ದರಿಂದ ದೊಡ್ಡ ವಿವಾದ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಮತ್ತು ಪ್ರಮುಖ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
೧. ದೇವಸ್ಥಾನದ ಕಾರ್ಯಕ್ರಮದಲ್ಲಿ ‘ನಂದಗೋವಿಂದಮ್’ ಹೆಸರಿನ ಭಜನಾ ಮಂಡಳಿಯು ಪ್ರಸ್ತುತಿ ನೀಡುತ್ತಿತ್ತು. ಮಂಡಳಿಯ ಮುಖ್ಯ ಗಾಯಕ ನವೀನ ಮೋಹನ ಮಾತನಾಡಿ, ‘ಸ್ಥಳೀಯ ಚರ್ಚ್ ಈ ಉತ್ಸವಕ್ಕಾಗಿ ವಾಹನ ನಿಲುಗಡೆ (ಪಾರ್ಕಿಂಗ್) ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿ ಸಹಕರಿಸಿದೆ. ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ನಾವು ಈ ಹಾಡನ್ನು ಸಮರ್ಪಿಸುತ್ತಿದ್ದೇವೆ’ ಎಂದು ಹೇಳಿದರು. ನಂತರ ಅವರ ತಂಡ ಕ್ರಿಶ್ಚಿಯನ್ ಭಕ್ತಿಗೀತೆಯನ್ನು ಹಾಡಿತು.
೨. ಈ ಕೃತ್ಯವನ್ನು ಸಮರ್ಥಿಸಿಕೊಂಡ ನವೀನ ಮೋಹನ, ‘ದೇವಸ್ಥಾನದಲ್ಲಿ ದೀಪ ಬೆಳಗಿದಾಗ, ಚರ್ಚ್ ನಲ್ಲಿಯೂ ದೀಪ ಬೆಳಗಿಸಲಾಗುತ್ತದೆ. ಈ ಸಹಕಾರಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಲು ನಾವು ಆ ಹಾಡನ್ನು ಹಾಡಿದ್ದೇವೆ. ಭಕ್ತಿಯು ಧರ್ಮಗಳನ್ನು ಮೀರಿದ್ದು’ ಎಂದು ಹೇಳಿದರು.
೩. ಭಜನಾ ಮಂಡಳಿಯು ಇನ್ ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿ ಸ್ಪಷ್ಟೀಕರಣ ನೀಡುತ್ತಾ, ‘ನಾವು ಯಾವುದೇ ಮಿತಿ ಮೀರಿಲ್ಲ; ಏಕೆಂದರೆ ನಮಗೆ ಅಲ್ಲಿ ಯಾವುದೇ ಮಿತಿ ಕಾಣಿಸಲೇ ಇಲ್ಲ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ’ ಎಂದು ತಿಳಿಸಿದೆ.
೪. ದೇವಸ್ಥಾನದ ಸಮಿತಿಯು ಸಹ ಭಜನಾ ಮಂಡಳಿಯ ಬೆಂಬಲಕ್ಕೆ ನಿಂತಿದೆ. ‘ವಿವಿಧ ಧರ್ಮಗಳ ಜನರು ದೇವಸ್ಥಾನದ ಚಟುವಟಿಕೆಗಳಲ್ಲಿ ನಿಯಮಿತವಾಗಿ ಸಹಕರಿಸುತ್ತಾರೆ. ಈ ಹಾಡಿನಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ’ ಎಂದು ಸಮಿತಿ ಸ್ಪಷ್ಟನೆ ನೀಡಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram