ಒಡಿಶಾದಲ್ಲಿ ತಾಪಮಾನ 44.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ!

ನವದೆಹಲಿ – ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಉಷ್ಣದ ಅಲೆ (ಹೀಟ್ ವೇವ್) ಮುಂದುವರಿದಿದೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಒಡಿಶಾ, ಉತ್ತರಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ತಾಪಮಾನವು 40 ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ. ಒಡಿಶಾದ ಝಾರ್ಸುಗುಡಾದಲ್ಲಿ 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ದೇಶದ ಅತಿ ಉಷ್ಣದ ನಗರವಾಗಿ ಹೊರಹೊಮ್ಮಿದೆ. ಉಷ್ಣದ ಅಲೆಯನ್ನು ಗಮನದಲ್ಲಿ ಇಟ್ಟುಕೊಂಡು, ಒಡಿಶಾ ಸರಕಾರವು ಮಧ್ಯಾಹ್ನದ ಸಮಯದಲ್ಲಿ ಜನಗಣತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
1. ದೆಹಲಿಯ ಶಾಲೆಗಳಲ್ಲಿ ‘ವಾಟರ್ ಬೆಲ್’ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಇದರ ಮೂಲಕ ಪ್ರತಿ 45 ರಿಂದ 60 ನಿಮಿಷಕ್ಕೊಮ್ಮೆ ಗಂಟೆಯನ್ನು ಬಾರಿಸಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ನೆನಪಿಸಲಾಗುತ್ತದೆ.
2. ಮುಂದಿನ 4 ರಿಂದ 5 ದಿನಗಳವರೆಗೆ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಬಹುತೇಕ ಭಾಗಗಳಲ್ಲಿ ಉಷ್ಣದ ಅಲೆಯು ಮುಂದುವರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.
3. ಪಂಜಾಬ್, ಹರಿಯಾಣ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ 24 ಮತ್ತು 25 ಏಪ್ರಿಲ್ ರಂದು ಉಷ್ಣದ ಅಲೆ ಉಂಟಾಗುವ ಸಾಧ್ಯತೆಯಿದೆ.
4. ಉತ್ತರಪ್ರದೇಶದಲ್ಲಿ 25 ಏಪ್ರಿಲ್ ಮತ್ತು ಮಧ್ಯಪ್ರದೇಶದಲ್ಲಿ 26 ಏಪ್ರಿಲ್ ರಂದು ಉಷ್ಣದ ಅಲೆ ಇರುತ್ತದೆ.
5. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ 24 ರಿಂದ 27 ಏಪ್ರಿಲ್ ಅವಧಿಯಲ್ಲಿ ಉಷ್ಣದ ಅಲೆ ಇರುತ್ತದೆ, ಹಾಗೆಯೇ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಉಷ್ಣದ ಅಲೆ ಬರುವ ಸಾಧ್ಯತೆಯಿದೆ.
6. ಹರಿಯಾಣ, ಚಂಡೀಗಢ, ದೆಹಲಿ, ಒಡಿಶಾ ಮತ್ತು ಗೋವಾದಲ್ಲಿ ರಾತ್ರಿಯೂ ಉಷ್ಣತೆ ಇರುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!