ಗೋರಖ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ

ಗೋರಖ್‌ಪುರ (ಉತ್ತರ ಪ್ರದೇಶ) – ಹಸುವಿನ ಹಾಲು ಪ್ರಕೃತಿಯ ಮತ್ತು ದೈವಿಕ ಕೊಡುಗೆಯಂತಿದೆ. ಗೋಮಾಂಸ ತಿನ್ನುವವರು ಹಂದಿಯ ಹಾಲನ್ನು ಕುಡಿಯುತ್ತಾರೆಯೇ? ಜಗತ್ತಿನಲ್ಲಿ ಯಾರೇ ಹಸುವನ್ನು ಗೌರವಿಸಲಿ ಅಥವಾ ಬಿಡಲಿ, ಹಸುವಿನ ಹಾಲನ್ನು ಮಾತ್ರ ಬಳಸುತ್ತಾರೆ. ಸಣ್ಣ ಮಗುವೂ ತಾಯಿಯ ಹಾಲನ್ನೇ ಕುಡಿಯುತ್ತದೆ, ಇದು ಪ್ರಕೃತಿ ನೀಡಿರುವ ವರದಾನವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ‘ನಾರಿ ಶಕ್ತಿ ವಂದನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಉನ್ನತ ಸ್ಥಾನ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರಿಯುತ್ತಾ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಯಾವಾಗಲೂ ಉನ್ನತ ಸ್ಥಾನ ನೀಡಲಾಗಿದೆ ಎಂದರು. ರಾಮನನ್ನು ‘ಕೌಸಲ್ಯೆಯ ಪುತ್ರ’ ಎಂದು, ಕೃಷ್ಣನನ್ನು ‘ಯಶೋದೆಯ ಮುದ್ದಿನ ಮಗ’ ಎಂದು ಸಂಬೋಧಿಸಲಾಗುತ್ತದೆ, ಹಾಗೆಯೇ ಭೀಷ್ಮ ಮತ್ತು ಅರ್ಜುನರನ್ನು ಕೂಡ ಅವರ ತಾಯಿಯಂದಿರೊಂದಿಗೆ ಜೋಡಿಸಿ ಗುರುತಿಸಲಾಗುತ್ತದೆ. ಇದರಿಂದ ಮಾತೃಶಕ್ತಿಯ ಮಹತ್ವ ಕಂಡುಬರುತ್ತದೆ. ಮಥುರಾ ಮತ್ತು ವೃಂದಾವನದಲ್ಲಿ ‘ರಾಧೆ-ರಾಧೆ’ ಎಂದು ಉಚ್ಚರಿಸಲಾಗುತ್ತದೆ, ಹಾಗೆಯೇ ಕಾಶಿಯಲ್ಲಿ ‘ನಮಃ ಪಾರ್ವತಿ ಪತಯೇ’ ಎಂದು ಘೋಷಿಸಲಾಗುತ್ತದೆ ಎಂದೂ ಅವರು ಉಲ್ಲೇಖಿಸಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!