ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಲಾಭದಾಯಕ!

ಟೋಕಿಯೋ (ಜಪಾನ್) – ಚೀನಾ ಮತ್ತು ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಜಪಾನ್ ತನ್ನ ಶಸ್ತ್ರಾಸ್ತ್ರ ರಫ್ತು ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದೆ. ರಕ್ಷಣಾ ನೀತಿಯಲ್ಲಿ ದೊಡ್ಡ ಸುಧಾರಣೆ ತರುತ್ತಾ ಜಪಾನ್ ಏಪ್ರಿಲ್ 21, 2026 ರಂದು ಮಾರಕ ಶಸ್ತ್ರಾಸ್ತ್ರಗಳ ರಫ್ತಿನ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ತನ್ನನ್ನು ‘ಶಾಂತಿಪ್ರಿಯ ದೇಶ’ ಎಂದು ಗುರುತಿಸಿಕೊಳ್ಳಲು ಈ ನಿರ್ಬಂಧ ಹೇರಿತ್ತು; ಆದರೆ ಈಗ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಸಚಿವ ಸಂಪುಟದ ಸಭೆಯಲ್ಲಿ ಈ ನಿಯಮ ಬದಲಾಯಿಸಲಾಗಿದೆ. ಜಪಾನ್‌ನ ಈ ಕ್ರಮವು ಭಾರತಕ್ಕೆ ಲಾಭದಾಯಕವಾಗುವ ಸಾಧ್ಯತೆಯಿದೆ.
೧. ಚೀನಾ ಜಪಾನ್‌ನ ಈ ನಿರ್ಧಾರವನ್ನು ಖಂಡಿಸಿದೆ, ಆದರೆ ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳು ಈ ನಿರ್ಧಾರವನ್ನು ಸ್ವಾಗತಿಸಿವೆ.
೨. ರಫ್ತು ನಿಷೇಧ ತೆರವುಗೊಳಿಸಿರುವುದರಿಂದ ಜಪಾನ್‌ಗೆ ಜಾಗತಿಕ ಮಾರುಕಟ್ಟೆಯ ಬಾಗಿಲುಗಳು ತೆರೆದಿವೆ. ಜಪಾನ್ ನೌಕಾ ನಿರ್ಮಾಣ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿದ್ದು, ಆಧುನಿಕ ನೌಕಾನೆಲೆಗಳನ್ನು ಹೊಂದಿದೆ. ಜಪಾನ್‌ನ ‘ಸೋರಿಯು’ ಮತ್ತು ‘ತೈಗೆ’ ಶ್ರೇಣಿಯ ಜಲಾಂತರ್ಗಾಮಿಗಳು ವಿಶ್ವದ ಅತ್ಯುತ್ತಮ ಜಲಾಂತರ್ಗಾಮಿಗಳೆಂದು ಪರಿಗಣಿಸಲ್ಪಟ್ಟಿವೆ. ಹಾಗೆಯೇ ಕ್ಷಿಪಣಿಗಳು ಮತ್ತು ಫಿರಂಗಿ ವ್ಯವಸ್ಥೆಗಳ ಉತ್ಪಾದನೆಯಲ್ಲಿಯೂ ಜಪಾನ್ ಮುಂದಿದೆ.
೩. ಜಪಾನ್‌ನ ಈ ನಿರ್ಧಾರದಿಂದ ಭಾರತಕ್ಕೆ ಸುಧಾರಿತ ತಂತ್ರಜ್ಞಾನ ಪಡೆಯುವುದು ಸುಲಭವಾಗಲಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನದಡಿ ದೇಶದ ರಕ್ಷಣಾ ಕ್ಷೇತ್ರವು ಈಗಾಗಲೇ ಪ್ರಗತಿ ಸಾಧಿಸುತ್ತಿದೆ. ಆಗಸ್ಟ್ 2025 ರಲ್ಲಿ ಭಾರತ ಮತ್ತು ಜಪಾನ್ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಜಂಟಿ ಘೋಷಣೆಗೆ ಸಹಿ ಹಾಕಿವೆ. ಇದರಿಂದ ಭಾರತದ ರಕ್ಷಣಾ ಉದ್ಯಮ ವ್ಯವಸ್ಥೆಯು ಬಲಗೊಳ್ಳಲಿದ್ದು, ‘ಇಂಡೋ-ಪ್ಯಾಸಿಫಿಕ್’ ಪ್ರದೇಶದ ಭದ್ರತಾ ವ್ಯವಸ್ಥೆಯು ಮತ್ತಷ್ಟು ಸುಭದ್ರವಾಗಲಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara