ರಾಷ್ಟ್ರವಾದಿ ಕಾಂಗ್ರೆಸ್ 20 ವಾರಕರಿಗಳನ್ನು ಮತಾಂಧ ಎಂದು ಕರೆದು ಅವರ ಹೆಸರುಗಳನ್ನು ಘೋಷಿಸಿದ ಪ್ರಕರಣ.
ವಿಶ್ವ ಹಿಂದೂ ಪರಿಷತ್ ಪತ್ರಿಕಾಗೋಷ್ಠಿ

ವಿಶ್ವ ಹಿಂದೂ ಪರಿಷತ್ ಪತ್ರಿಕಾಗೋಷ್ಠಿ
ಮುಂಬಯಿ, ಏಪ್ರಿಲ್ 21 (ವಾರ್ತೆ.) – ಹಿಂದೂ ಧರ್ಮದ ಅನುಯಾಯಿಗಳಾಗಿದ್ದಾರೆ ಎಂಬ ಕಾರಣಕ್ಕಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಚಂದ್ರ ಪವಾರ್ ಬಣ) ಪಕ್ಷದ ವಕ್ತಾರ ವಿಕಾಸ್ ಲವಾಂಡೆ ಅವರು 20 ವಾರಕರಿಗಳನ್ನು ಮತಾಂಧ ಎಂದು ಕರೆದು ಅವರ ಹೆಸರುಗಳನ್ನು ಘೋಷಿಸಿದ್ದಾರೆ. ವಾರಕರಿಗಳಲ್ಲಿ ಶೇಕಡಾ 60 ರಷ್ಟು ಮತಾಂಧರು ನುಸುಳಿದ್ದಾರೆ ಎಂದು ಶರದ್ ಪವಾರ್ ಹೇಳಿಕೆ ನೀಡಿದ್ದರು, ಅದರ ಬೆನ್ನಲ್ಲೇ ವಿಕಾಸ್ ಲವಾಂಡೆ ಈ ಹೆಸರುಗಳನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ, ಮತಾಂಧ ಎಂದು ಕರೆಯಲ್ಪಟ್ಟ ಆ 20 ವಾರಕರಿಗಳನ್ನು ವಾರಕರಿ ಸಮುದಾಯದ ಪರವಾಗಿ ಸನ್ಮಾನಿಸಲಾಗುವುದು ಎಂದು ಅಖಿಲ ಭಾರತ ಸಂತ ಸಮಿತಿಯ ಕೊಂಕಣ ಪ್ರಾಂತದ ಸಹ-ಕಾರ್ಯದರ್ಶಿ ಸ್ವಾಮಿ ಶ್ರೀ ಶ್ರೀ ಶಿವರೂಪಾನಂದ ಸ್ವಾಮಿ ಘೋಷಿಸಿದರು.
ಏಪ್ರಿಲ್ 21 ರಂದು ಮುಂಬಯಿ ಮರಾಠಿ ಪತ್ರಕರ್ತ ಸಂಘದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಭಾರತಾನಂದ ಸರಸ್ವತಿ, ನ್ಯಾಯವಾದಿ ಶೀತಲ್ ಭೋಸಲೆ, ಹ.ಭ.ಪ. ಸುನಿಲ್ ರಾನ್ಕರ್ ಮಹಾರಾಜ್ ಮತ್ತು ಸುಭಾಷ್ ಮಹಾರಾಜ್ ತರಣೆ ಉಪಸ್ಥಿತರಿದ್ದರು. ವಾರಕರಿಗಳನ್ನು ಮತಾಂಧರೆಂದು ಕರೆಯುವ ಈ ಹಿಂದೂ ವಿರೋಧಿ ಧೋರಣೆಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.
ಕೇಸರಿ ಧ್ವಜ ಹಿಡಿದ ವಾರಕರಿಗಳು ಹಿಂದೂ ಧರ್ಮದಿಂದ ಬೇರೆಯಾಗುವುದು ಹೇಗೆ? – ಸ್ವಾಮಿ ಭಾರತಾನಂದ ಸರಸ್ವತಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಸಂತ ಸಮಿತಿ
ಸಮಾಜದಲ್ಲಿ ಭೇದಭಾವ ಮೂಡಿಸಲು ವಿಕಾಸ್ ಲವಾಂಡೆ ಇಂತಹ ಹೇಳಿಕೆ ನೀಡಿದ್ದಾರೆ. ವಾರಕರಿ ಸಂಪ್ರದಾಯವನ್ನು ಸನಾತನ ಧರ್ಮದಿಂದ ಬೇರ್ಪಡಿಸುವ ಸಂಚು ಇದಾಗಿದೆ. ಸನಾತನ ಧರ್ಮವನ್ನು ಮುಗಿಸಲು ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿರುವವರ ಕೈಗೊಂಬೆಗಳು ಇವರು. ವೇದಗಳು ಮತ್ತು ಯಜ್ಞಗಳನ್ನು ಟೀಕಿಸುವುದೇ ಇವರ ಪ್ರಗತಿಪರ ವ್ಯಾಖ್ಯಾನವಾಗಿದೆ. ಹಿಂದೂಗಳು ಜಾಗೃತರಾಗುತ್ತಿರುವುದು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮತಾಂತರ, ಕಾರ್ಪೊರೇಟ್ ಜಿಹಾದ್, ಲವ್ ಜಿಹಾದ್, ಬಾಂಗ್ಲಾದೇಶಿ ನುಸುಳುವಿಕೆ ಅಥವಾ ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಇವರು ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಸಂತ ಜ್ಞಾನೇಶ್ವರ ಮಹಾರಾಜರ ಮೊದಲ ಓವಿ ಆಗಿರುವ ಓಂ ನಮೋಜಿ ಆದ್ಯಾ, ವೇದ ಪ್ರತಿಪಾದ್ಯಾ ಎಂದಿದೆ. ವೇದಗಳೇ ವಾರಕರಿಗಳಿಗೆ ಪ್ರಮಾಣ. ವಸುಧೈವ ಕುಟುಂಬಕಂ ಎಂಬ ವೈದಿಕ ಪರಂಪರೆಯನ್ನು ಜ್ಞಾನೇಶ್ವರ ಮಹಾರಾಜರು ಹೇ ವಿಶ್ವಚಿ ಮಾಝೆ ಘರ (ಈ ಇಡೀ ವಿಶ್ವವೇ ನನ್ನ ಮನೆ) ಎಂಬ ಶಬ್ದಗಳಲ್ಲಿ ಹೇಳಿದ್ದಾರೆ. ವಾರಕರಿಗಳ ಧ್ವಜವೇ ಕೇಸರಿಯಾಗಿರುವಾಗ, ಅವರು ಹಿಂದೂ ಧರ್ಮದಿಂದ ಬೇರೆಯಾಗಲು ಹೇಗೆ ಸಾಧ್ಯ? ‘ಜೈ ಶ್ರೀರಾಮ’ ಮತ್ತು ‘ರಾಮಕೃಷ್ಣ ಹರಿ’ ಬೇರೆ ಇರಲು ಸಾಧ್ಯವಿಲ್ಲ. ನಾವು ಶೇಕಡಾ 60 ರಷ್ಟು ಮಾತ್ರವಲ್ಲ, ಶೇಕಡಾ 100 ರಷ್ಟು ಸನಾತನಿಗಳಾಗಿದ್ದೇವೆ, ಎಂದು ಹೇಳಿದರು.
ರಾಜ್ಯಾದ್ಯಂತ ಜನಾಂದೋಲನ ರೂಪಿಸುತ್ತೇವೆ! – ಶ್ರೀ ಶ್ರೀ ಶಿವರೂಪಾನಂದ ಸ್ವಾಮಿ, ಸಹ-ಕಾರ್ಯದರ್ಶಿ, ಕೊಂಕಣ ಪ್ರಾಂತ, ವಿಶ್ವ ಹಿಂದೂ ಪರಿಷತ್
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ವಿಕಾಸ್ ಲವಾಂಡೆ ಅವರು ಘೋಷಿಸಿದ 20 ಹೆಸರುಗಳು ವಾರಕರಿ ಸಂಪ್ರದಾಯದ ರತ್ನಗಳಿದ್ದಂತೆ. ಆನೆ ನಡೆಯುವಾಗ ನಾಯಿಗಳು ಬೊಗಳುತ್ತವೆ. ವಾರಕರಿಗಳನ್ನು ಮತಾಂಧರೆಂದು ಕರೆಯುವ ಇಂತಹ ಕೃತ್ಯಗಳ ವಿರುದ್ಧ ನಾವು ಜನ ಆಂದೋಲನವನ್ನು ರೂಪಿಸುತ್ತೇವೆ, ಎಂದು ಹೇಳಿದರು.
ಸಂತರ ಕಾರ್ಯ ಅಲೌಕಿಕವಾದುದು! – ಹ.ಭ.ಪ. ಸುನಿಲ್ ರಾನ್ಕರ್ ಮಹಾರಾಜ್
ಈ ಸಂದರ್ಭದಲ್ಲಿ ಮಾತನಾಡಿದ ಹ.ಭ.ಪ. ಸುನಿಲ್ ರಾನ್ಕರ್ ಮಹಾರಾಜ್ ಅವರು, ”ಸಂತರ ಕಾರ್ಯವು ಅಲೌಕಿಕವಾಗಿದೆ. ಮಹಾರಾಷ್ಟ್ರವು ಸಂತರ ನಾಡು. ನಾವು ಯಾವುದೇ ಪಕ್ಷದವರಲ್ಲ, ನಾವು ವಾರಕರಿ ಸಂಪ್ರದಾಯದ ವಕ್ತಾರರು” ಎಂದು ಹೇಳಿದರು.
ಧರ್ಮದ ವಿರುದ್ಧ ಹೋಗುವವರ ಪಕ್ಷ ಉಳಿಯುವುದಿಲ್ಲ! – ಹ.ಭ.ಪ. ಸುಭಾಷ್ ಮಹಾರಾಜ್ ತರಣೆವಾರಕರಿಗಳು ಬೆಂಬಲ ನೀಡಿದ್ದಕ್ಕೆ ಪ್ರಧಾನ ಮಂತ್ರಿಗಳು ಆಯ್ಕೆಯಾಗುತ್ತಾರೆ. ಒಂದು ವೇಳೆ ವಾರಕರಿಗಳು ನಿರ್ಧಾರ ಮಾಡಿದರೆ ಯಾವ ಪಕ್ಷವೂ ಉಳಿಯುವುದಿಲ್ಲ. ಯಾರು ಧರ್ಮದ ವಿರುದ್ಧ ಹೋಗುತ್ತಾರೋ ಅವರ ಪಕ್ಷ ಸರ್ವನಾಶವಾಗುತ್ತದೆ ಎಂದು ಹ.ಭ.ಪ. ಸುಭಾಷ್ ಮಹಾರಾಜ್ ತರಣೆ ಎಚ್ಚರಿಸಿದರು. |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ