ಹೊಸ ಮಾರ್ಗಸೂಚಿಗಳಲ್ಲಿ ಉದ್ಯೋಗಿಗಳಿಗೆ ಧಾರ್ಮಿಕ ಸಂಕೇತಗಳನ್ನು ಧರಿಸಲು ಅನುಮತಿ!

ನವದೆಹಲಿ: ಚಮೋತ್ಪನ್ನಗಳ (ಕನ್ನಡಕಗಳ) ಮಾರಾಟ ಸಂಸ್ಥೆಯಾದ ‘ಲೆನ್ಸ್‌ಕಾರ್ಟ್’ ಕೊನೆಗೂ ಕ್ಷಮೆಯಾಚಿಸಿದೆ. ಹಿಂದೂ ಉದ್ಯೋಗಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಬಳಸುವುದನ್ನು ಈ ಸಂಸ್ಥೆ ನಿಷೇಧಿಸಿತ್ತು, ಆದರೆ ಮುಸ್ಲಿಮರಿಗೆ ಮಾತ್ರ ಅನುಮತಿ ನೀಡಿತ್ತು. ಈ ಬಗ್ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಸಂಸ್ಥೆಯು ಈಗ ಕ್ಷಮೆಯಾಚಿಸಿದೆ. ಅಲ್ಲದೆ, ಹಿಂದೂ ಉದ್ಯೋಗಿಗಳಿಗೂ ಕೂಡ ಧಾರ್ಮಿಕ ಸಂಕೇತಗಳನ್ನು ಬಳಸಲು ಅನುಮತಿ ನೀಡುವುದಾಗಿ ಘೋಷಿಸಿದೆ.
‘X’ (ಟ್ವಿಟರ್) ನಲ್ಲಿ ಸಂಸ್ಥೆಯ ಹೇಳಿಕೆ:
೧. ಗ್ರಾಹಕರು ಮತ್ತು ಸಮಾಜದ ಕಳಕಳಿಯನ್ನು ದೂರಗೊಳಿಸಲು ನಾವು ನಮ್ಮ ಮಾರ್ಗಸೂಚಿಗಳನ್ನು ಸಾರ್ವಜನಿಕ ಹಾಗೂ ಪಾರದರ್ಶಕಗೊಳಿಸುತ್ತಿದ್ದೇವೆ. ಹೊಸ ನೀತಿಯಲ್ಲಿ ಉದ್ಯೋಗಿಗಳ ಶ್ರದ್ಧೆಗೆ ಸಂಬಂಧಿಸಿದ ಎಲ್ಲಾ ಸಂಕೇತಗಳಾದ ಬಿಂದಿ, ತಿಲಕ, ಕುಂಕುಮ, ಕೈಗೆ ಕಟ್ಟುವ ದಾರ, ಮಂಗಳಸೂತ್ರ, ಕಡ, ಹಿಜಾಬ್ ಮತ್ತು ಪಗಡಿಯನ್ನು (ಪೇಟ) ಅಂಗೀಕರಿಸಲಾಗಿದೆ. ನಮ್ಮ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಸಂವಹನದಿಂದ ಯಾರಿಗಾದರೂ ನೋವಾಗಿದ್ದರೆ ಅಥವಾ ಅವರ ನಂಬಿಕೆಯನ್ನು ಸ್ವೀಕರಿಸಿಲ್ಲ ಎಂದು ಅನಿಸಿದ್ದರೆ, ನಮಗೆ ಈ ಬಗ್ಗೆ ಮನಃಪೂರ್ವಕ ವಿಷಾದವಿದೆ. ಇದು ಲೆನ್ಸ್‌ಕಾರ್ಟ್‌ನ ಗುರುತಲ್ಲ ಮತ್ತು ಎಂದಿಗೂ ಗುರುತಾಗಿರುವುದಿಲ್ಲ.
Lenskart Apologises After Public Backlash
Following organised protests and outrage from Hindus across the country, Lenskart has issued an apology and revised guidelines now allowing employees to wear religious symbols.
It shows that biased policies change only when challenged… https://t.co/EutjVvi2Rs pic.twitter.com/W8wi4ZoK9z
— Sanatan Prabhat (@SanatanPrabhat) April 20, 2026
೨. ಸಂಸ್ಥೆಯ ೨,೪೦೦ಕ್ಕೂ ಹೆಚ್ಚು ಶಾಖೆಗಳನ್ನು ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳೊಂದಿಗೆ ಕೆಲಸ ಮಾಡುವ ಜನರೇ ನಡೆಸುತ್ತಿದ್ದಾರೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೆನ್ಸ್‌ಕಾರ್ಟ್ ಭಾರತದಲ್ಲಿ ನಿರ್ಮಾಣವಾದ, ಭಾರತೀಯರಿಂದ ಮತ್ತು ಭಾರತೀಯರಿಗಾಗಿ ನಡೆಸಲ್ಪಡುತ್ತಿರುವ ಸಂಸ್ಥೆಯಾಗಿದೆ. ಭವಿಷ್ಯದಲ್ಲಿ ನಮ್ಮ ಪ್ರತಿಯೊಂದು ನೀತಿಗಳು, ತರಬೇತಿ ಸಾಮಗ್ರಿಗಳು ಮತ್ತು ಸಂವಹನಗಳು ಎಲ್ಲರನ್ನೂ ಒಳಗೊಳ್ಳುವ ಮೌಲ್ಯಗಳನ್ನು ಪ್ರತಿಬಿಂಬಿಸಲಿವೆ ಮತ್ತು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ನಾವು ನಿರಂತರವಾಗಿ ಶ್ರಮಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.
We have heard you. Clearly and openly. Over the past few days, our community and customers have spoken – and we have listened.
Today, we are standardizing our In-Store Style Guide and sharing it publicly and transparently: https://t.co/lC8KlLLUZm
These guidelines explicitly and…
— lenskart (@Lenskart_com) April 18, 2026
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ