ತನ್ನ ೪ ವರ್ಷದ ಸೋದರನ ಮಗಳ ಮೇಲೆ ಅತ್ಯಾಚಾರ ಎಸಗಿದ ಮಹಮ್ಮದ್ ಜಸೀಮ್ ಎನ್‌ಕೌಂಟರ್‌ನಲ್ಲಿ ಹತ

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿ ತನ್ನ ೪ ವರ್ಷದ ಸೋದರನ ಮಗಳ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಹತ್ಯೆ ಮಾಡಿದ ಆರೋಪವಿರುವ ಮಹಮ್ಮದ್ ಜಸೀಮ್‌ನನ್ನು ಏಪ್ರಿಲ್ ೧೯ ರ ರಾತ್ರಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ೨ ಪೊಲೀಸರು ಸಹ ಗಾಯಗೊಂಡಿದ್ದಾರೆ. ಈ ಚಕಮಕಿಯ ಸಂದರ್ಭದಲ್ಲಿ ಅವನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಪೊಲೀಸರು ತಲೆಮರೆಸಿಕೊಂಡಿದ್ದ ಜಸೀಮ್‌ನ ಮಾಹಿತಿ ನೀಡುವವರಿಗೆ ೫೦ ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು.

ಅವನಿಗೆ ಬದುಕುವ ಹಕ್ಕಿರಲಿಲ್ಲ! – ಸಹೋದರನ ಪ್ರತಿಕ್ರಿಯೆ

ಸಂತ್ರಸ್ತ ಬಾಲಕಿಯ ತಂದೆ, ಆರೋಪಿ ಸಹೋದರನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ನಂತರ ಪ್ರತಿಕ್ರಿಯಿಸುತ್ತಾ, ನನ್ನ ಮಗಳ ಜೊತೆಗೆ ಅವನು ಮಾಡಿದ ಕೃತ್ಯದ ನಂತರ, ಅವನಿಗೆ ಬದುಕುವ ಯಾವುದೇ ಹಕ್ಕಿರಲಿಲ್ಲ. ಪೊಲೀಸರು ನಮಗೆ ನಿಜವಾದ ಅರ್ಥದಲ್ಲಿ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು. ೨೦೨೫ ರಲ್ಲಿ ಮಹಮ್ಮದ್ ಜಸೀಮ್ ತನ್ನ ಪತ್ನಿಯ ಸಹೋದರಿಯ (ನಾದಿನಿಯ) ಮೇಲೆ ಚಾಕುವಿನಿಂದ ದಾಳಿ ಮಾಡಿದ್ದನು. ಆನಂತರ ಒಂದು ಮಾನಭಂಗ ಪ್ರಕರಣದಲ್ಲೂ ಅವನನ್ನು ಬಂಧಿಸಲಾಗಿತ್ತು. ಪದೇ ಪದೇ ಅಪರಾಧಗಳನ್ನು ಮಾಡುತ್ತಿದ್ದರೂ, ಅವನು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬರುತ್ತಿದ್ದನು.