ಸಂತ್ರಸ್ತೆಯ ಗರ್ಭಪಾತ ಮಾಡಿಸಿದ
ಮತಾಂತರಗೊಳ್ಳಲು ಒತ್ತಡ
ಬುರ್ಖಾ ಧರಿಸಲು ಮತ್ತು ಕಲ್ಮಾ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಪಠಿಸಲು ಬಲವಂತ

ಇಂದೂರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಇಂದೂರನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ೧೯ ವರ್ಷದ ಸಂತ್ರಸ್ತ ಹಿಂದೂ ವಿದ್ಯಾರ್ಥಿನಿಯು ಅಬ್ದುಲ್ ಅಜೀಜ್ ಪಠಾಣ್ ಎಂಬಾತನ ಮೇಲೆ ಬಲಾತ್ಕಾರ, ಬ್ಲ್ಯಾಕ್‌ಮೇಲಿಂಗ್, ಮತಾಂತರಕ್ಕಾಗಿ ಒತ್ತಡ ಹೇರಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಬ್ದುಲ್ ಅಜೀಜ್ ಪಠಾಣ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
೧. ಸಂತ್ರಸ್ತೆಯ ಹೇಳಿಕೆಯಂತೆ, ೧ ವರ್ಷದ ಹಿಂದೆ ಆಕೆಗೆ ಆರೋಪಿಯ ಪರಿಚಯವಾಗಿತ್ತು. ಆತ ತನ್ನ ಸುಳ್ಳು ಗುರುತನ್ನು ಹೇಳಿಕೊಂಡು ತನ್ನ ಹೆಸರು ರಾಹುಲ್ ಎಂದು ತಿಳಿಸಿದ್ದನು. ಸಂವಹನ ಹೆಚ್ಚಾದ ನಂತರ ಆರೋಪಿಯು ವಿಶ್ವಾಸವನ್ನು ಗಳಿಸಿ ಮದುವೆಯ ಪ್ರಸ್ತಾಪ ಇಟ್ಟಿದ್ದನು. ಒಂದು ದಿನ ಆತ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದನು. ಅಲ್ಲಿ ಮನೆಯವರ ಅನುಪಸ್ಥಿತಿಯ ಲಾಭ ಪಡೆದು ಮದುವೆಯ ಆಮಿಷ ತೋರಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದನು.
೨. ಸಂತ್ರಸ್ತ ಹಿಂದೂ ಯುವತಿಯು ಮದುವೆಯ ಬಗ್ಗೆ ಮಾತನಾಡಿದಾಗ, ಆರೋಪಿಯು ತನ್ನ ನಿಜವಾದ ಗುರುತು ಅಬ್ದುಲ್ ಅಜೀಜ್ ಪಠಾಣ್ ಎಂದು ಹೇಳಿದನು ಮತ್ತು ಮದುವೆಗಾಗಿ ಮತಾಂತರವಾಗಬೇಕೆಂದು ಶರತ್ತು ವಿಧಿಸಿದನು. ಅಂದಿನಿಂದ ಆತ ಆಕೆಯ ಮೇಲೆ ಮತಾಂತರಕ್ಕಾಗಿ ನಿರಂತರವಾಗಿ ಒತ್ತಡ ಹೇರಲಾರಂಭಿಸಿದನು.
೩. ಸಂತ್ರಸ್ತೆಯು ವಿರೋಧಿಸಿದಾಗ, ಆರೋಪಿಯು ಆಕೆಯ ಅಶ್ಲೀಲ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದನು ಮತ್ತು ಅದೇ ಆಧಾರದ ಮೇಲೆ ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಆರೋಪಿಯು ಆಕೆಗೆ ಅಮಲು ಪದಾರ್ಥಗಳನ್ನು ತಿನ್ನಿಸಿದನು. ಬುರ್ಖಾ ಧರಿಸುವಂತೆ ಒತ್ತಾಯ ಮಾಡಿದನು ಹಾಗೂ ಕಲ್ಮಾ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಬಲವಂತವಾಗಿ ಓದಿಸಿದನು.
೪. ಆರೋಪಿಯು ಸಂತ್ರಸ್ತ ಯುವತಿಯ ಮೇಲೆ ಒತ್ತಡ ಹೇರಿ ಗರ್ಭಪಾತ ಮಾಡಿಸಿದ.
೫. ಸಂತ್ರಸ್ತ ವಿದ್ಯಾರ್ಥಿನಿಯು ಬೇಸತ್ತು ಇಂದೂರ ತೊರೆದು ತನ್ನ ಊರಾದ ಛಿಂದವಾಡಾಗೆ ತೆರಳಿ ಕುಟುಂಬದವರಿಗೆ ಸಂಪೂರ್ಣ ಘಟನೆಯನ್ನು ತಿಳಿಸಿದಳು. ತದನಂತರ ಸಂತ್ರಸ್ತ ವಿದ್ಯಾರ್ಥಿನಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!