ಸಿಪಿಎಂನ 10 ಕಾರ್ಯಕರ್ತರಿಗೆ 25 ವರ್ಷಗಳ ಜೈಲು ಶಿಕ್ಷೆ : 2011 Keralam Bomb Attack

ಕಣ್ಣೂರು (ಕೇರಳಮ್): 15 ವರ್ಷಗಳ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ವಾಹನದ ಮೇಲೆ ಬಾಂಬ್ ಎಸೆದ ಪ್ರಕರಣ

ಕಣ್ಣೂರು (ಕೇರಳಮ್) – 15 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರ ಮೇಲೆ ನಡೆದ ಬಾಂಬ್ ದಾಳಿ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ (CPM) 10 ಕಾರ್ಯಕರ್ತರನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿದ್ದು, ಒಟ್ಟಾರೆ 25 ವರ್ಷಗಳವರೆಗೆ ಶಿಕ್ಷೆ ನೀಡಲಾಗಿದೆ.

ಸರಕಾರಿ ವಕೀಲರಾದ ಯು. ರಮೇಶನ್ ಅವರ ಪ್ರಕಾರ, ಮುಖ್ಯ ಆರೋಪಿ ಟಿ.ವಿ. ಬೀನು ಸತತ 25 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ; ಏಕೆಂದರೆ ಆತನೇ ವಾಹನದ ಮೇಲೆ ಬಾಂಬ್ ಎಸೆದಿದ್ದನು. ಎಂ.ಕೆ. ಪ್ರದೀಪ್ ಕುಮಾರ್, ಪಿ.ಪಿ. ಸತ್ಯನ್, ಪಿ.ವಿ. ಬಾಬುರಾಜ್ (ಸಿಪಿಎಂ ಪಂಚಾಯತ್ ಸದಸ್ಯ), ಇ.ವಿ. ವಿನೋದ್ ಕುಮಾರ್, ವಿಜಯನ್, ಕೆ.ಪಿ. ಸುರೇಶ್, ಟೋಬಿ, ಜನಾರ್ದನನ್ ಕೆ.ವಿ. ಮತ್ತು ಶಿವಪ್ರಕಾಶ್ ಉಳಿದ ಪ್ರಮುಖ ಆರೋಪಿಗಳಾಗಿದ್ದಾರೆ. ನ್ಯಾಯಾಲಯವು ಎಲ್ಲಾ ದೋಷಿಗಳಿಗೆ 2 ಲಕ್ಷದ 60 ಸಾವಿರ ರೂಪಾಯಿ ದಂಡವನ್ನೂ ಸಹ ವಿಧಿಸಿದೆ.

ಘಟನೆ ನಡೆದದ್ದು ಯಾವಾಗ?
ಈ ಘಟನೆಯು 27 ನವೆಂಬರ್ 2011 ರಂದು ನಡೆದಿತ್ತು. ಕಣ್ಣೂರಿನ ತಿಮಿರಿ ಕಾಲೇಜು ಬಳಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಬಾಂಬ್ ಎಸೆಯಲಾಗಿತ್ತು. ಸಂಘದ ಶಾಖೆಯನ್ನು ಪ್ರಾರಂಭಿಸುವ ವಿಷಯದಲ್ಲಿ ಎರಡೂ ಗುಂಪುಗಳ ನಡುವೆ ತೀವ್ರ ವಿವಾದ ಉಂಟಾಗಿತ್ತು ಮತ್ತು ಒಂದು ದಿನದ ಹಿಂದೆ ಸಂಘರ್ಷವೂ ನಡೆದಿತ್ತು. ಘಟನೆಯ ಸಮಯದಲ್ಲಿ ವಾಹನದಲ್ಲಿ 30 ಕಾರ್ಯಕರ್ತರು ಪ್ರಯಾಣಿಸುತ್ತಿದ್ದರು, 9 ಜನರು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

  • ಬಾಂಬ್ ಸ್ಫೋಟ ನಡೆಸುವ ಕಾರ್ಯಕರ್ತರಿರುವ ಸಿಪಿಎಂ ಪಕ್ಷವನ್ನು ನಿಷೇಧಿಸಬೇಕು! ಇದಕ್ಕಾಗಿ ದೇಶದ ಹಿಂದುತ್ವನಿಷ್ಠ ಸಂಘಟನೆಗಳು ಸರಕಾರದ ಮೇಲೆ ಸಂಘಟಿತವಾಗಿ ಒತ್ತಡ ಹೇರಬೇಕು!
  • ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ನಿಷೇಧಕ್ಕೆ ಆಗ್ರಹಿಸುವ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಡೋಂಗಿ ಪ್ರಗತಿಪರರು ಈಗ ಸಿಪಿಎಂ ನಿಷೇಧಕ್ಕೆ ಏಕೆ ಆಗ್ರಹಿಸುತ್ತಿಲ್ಲ?
  • 15 ವರ್ಷಗಳ ನಂತರ ಸಿಗುವ ನ್ಯಾಯವು ಅನ್ಯಾಯಕ್ಕೆ ಸಮಾನ!