ಅಲಿಗಢದಲ್ಲಿ ಜಿಹಾದಿಯಿಂದ ಹೆಸರು ಬದಲಿಸಿ ಹಿಂದೂ ಮಹಿಳೆಗೆ ವಂಚನೆ: 15 ದಿನಗಳ ಕಾಲ ಅತ್ಯಾಚಾರ!

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ

ಅಲಿಗಢ – ಉತ್ತರ ಪ್ರದೇಶದ ಅಲಿಗಢದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇಲ್ಲಿನ ಆದಿಲ್ ಎಂಬ ಜಿಹಾದಿಯು ಗಾಜಿಯಾಬಾದ್‌ನ ಹಿಂದೂ ವಿಧವೆಗೆ ವಂಚಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆರೋಪಿ ಆದಿಲ್ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಅವಳನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದ್ದನು. ಮದುವೆಯ ಭರವಸೆ ನೀಡಿ, ನಂತರ ಹೋಟೆಲ್‌ನಲ್ಲಿ 15 ದಿನಗಳ ಕಾಲ ಒತ್ತೆಯಾಳಾಗಿರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪೊಲೀಸರು ಮುಖ್ಯ ಆರೋಪಿ ಆದಿಲ್ ಮತ್ತು ಹೋಟೆಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

1. ಸಂತ್ರಸ್ತ ಮಹಿಳೆಯ ಪ್ರಕಾರ, ಒಂದು ವರ್ಷದ ಹಿಂದೆ ಆಕೆಗೆ ಅಲಿಗಢದ ಆದಿಲ್‌ನ ಪರಿಚಯವಾಗಿತ್ತು. ಆ ಸಮಯದಲ್ಲಿ ಪತಿಯ ಮರಣದ ನಂತರ ಆಕೆ ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಆರೋಪಿಯು ಹೆಸರು ಬದಲಾಯಿಸಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿ, ಕ್ರಮೇಣ ಆಕೆಯ ವಿಶ್ವಾಸ ಗಳಿಸಿದ್ದನು. ಮದುವೆಯ ಭರವಸೆ ನೀಡಿ ಆಕೆಗೆ ಆಸರೆಯಾಗಿದ್ದನು.

2. 15 ದಿನಗಳ ಹಿಂದೆ ಆರೋಪಿಯು ಆಕೆಯನ್ನು ಅಲಿಗಢಕ್ಕೆ ಕರೆಸಿಕೊಂಡು ಹೋಟೆಲ್‌ವೊಂದಕ್ಕೆ ಕರೆದೊಯ್ದಿದ್ದನು. ಅಲ್ಲಿ ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಸತತವಾಗಿ ಅತ್ಯಾಚಾರ ಎಸಗಿದ್ದನು. ಆರೋಪಿಯು ಮತಾಂಧನೆಂದು ತಿಳಿದ ನಂತರ ಸಂತ್ರಸ್ತ ಮಹಿಳೆ ಇದನ್ನು ವಿರೋಧಿಸಿದ್ದಳು.

3. ಇದರ ನಂತರ, ಆರೋಪಿಯು ಹೋಟೆಲ್ ಮಾಲೀಕನೊಂದಿಗೆ ಸೇರಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ್ದನು. ಅಲ್ಲದೆ ಆಕೆಯ ಮಾಂಗಲ್ಯ ಸರ ಮತ್ತು 3 ಲಕ್ಷ ರೂಪಾಯಿಗಳನ್ನು ಕಸಿದುಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ.

4. ಏಪ್ರಿಲ್ 16, 2026 ರಂದು ಆರೋಪಿಯು ಕೆಲಸದ ನಿಮಿತ್ತ ಹೊರಗೆ ಹೋದಾಗ, ತಾನು ಹೇಗೋ ಹೋಟೆಲ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ ಎಂದು ಸಂತ್ರಸ್ತೆ ಹೇಳಿದ್ದಾಳೆ; ಆದರೆ ಆರೋಪಿಯು ಆಕೆಯನ್ನು ರಸ್ತೆಯಲ್ಲಿ ಹಿಡಿದು ಮನಬಂದಂತೆ ಥಳಿಸಿದ್ದಾನೆ. ಆಕೆಯ ಕಿರುಚಾಟ ಕೇಳಿ ಸುತ್ತಮುತ್ತಲಿನ ಜನರು ಜಮಾಯಿಸಿ ಆಕೆಯನ್ನು ರಕ್ಷಿಸಿದ್ದಾರೆ. ಜನರು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

5. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಮತಾಂತರ ವಿರೋಧಿ ಕಾಯ್ದೆ ಜಾರಿಯಲ್ಲಿದ್ದರೂ, ಮತಾಂಧರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆಂದರೆ, ಅವರಿಗೆ ಕಾನೂನಿನ ಸ್ವಲ್ಪವೂ ಭಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ!