ಬಂಡಾಯ ಮತ್ತು ನಾಸ್ತಿಕವಾದಿ ಚಳವಳಿ ಅವನತಿಯಾಗಿರುವುದರಿಂದ ಹತಾಶೆಯಿಂದ ವಾರಕರಿ ಸಂಪ್ರದಾಯದ ಮೇಲೆ ಟೀಕೆ! – ಹ.ಭ.ಪ. ರಾಮಕೃಷ್ಣ ಮಹಾರಾಜ ವೀರ್

ಪಂಢರಪುರ – ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಬಂಡಾಯ ಮತ್ತು ನಾಸ್ತಿಕ ಚಳವಳಿಗಳು ಪತನಗೊಂಡಿವೆ. ಈ ಚಳವಳಿಗಳಿಗೆ ರಾಜಾಶ್ರಯ ನೀಡಿದವರೂ ಸಹ ಅವನತಿ ಹೊಂದಿದ್ದಾರೆ. ಆದ್ದರಿಂದ, ನಿರಾಸೆ ಮತ್ತು ಹತಾಶೆಯಿಂದ ‘ವಾರಕರಿ ಸಂಪ್ರದಾಯದಲ್ಲಿ ಒಳನುಸುಳುವಿಕೆ ನಡೆದಿದೆ’ ಎಂಬಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡುತ್ತಿರುವವರಿಗೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೋರಾಡುವ ಶಕ್ತಿ ಉಳಿದಿಲ್ಲದ ಕಾರಣ, ವಾರಕರಿ ಸಂಪ್ರದಾಯವನ್ನು ‘ಸಾಫ್ಟ್ ಟಾರ್ಗೆಟ್’ (ಸುಲಭ ಗುರಿ) ಮಾಡಿಕೊಂಡು ಟೀಕಿಸಲಾಗುತ್ತಿದೆ. ರಾಷ್ಟ್ರವಾದಿ ಕಾಂಗ್ರೆಸ್ ಶರದ ಪವಾರ ಬಣವು ನೀಡಿರುವ ಇಂತಹ ಹೇಳಿಕೆಗಳಿಂದ ಅವರು ವಾರಕರಿಗಳ ಕೆಂಗಣ್ಣಿಗೆ ಗುರಿಯಾಗುವುದಷ್ಟೇ ಅಲ್ಲದೆ, ಸಂತ ನಿಂದನೆ ಮಾಡುವವರು ದೇವರ ಕೋಪವನ್ನೂ ಎದುರಿಸಬೇಕಾಗುತ್ತದೆ ಎಂದು ಹ.ಭ.ಪ. ರಾಮಕೃಷ್ಣ ವೀರ ಮಹಾರಾಜರು ಪಂಢರಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ರಾಷ್ಟ್ರವಾದಿ ಕಾಂಗ್ರೆಸ ವಕ್ತಾರ ವಿಕಾಸ ಲವಾಂಡೆ ಅವರು ವಾರಕರಿ ಸಂಪ್ರದಾಯದ ೨೦ ‘ಪ್ರತಿಗಾಮಿ ಮಹಾರಾಜರ’ ಹೆಸರುಗಳನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಢರಪುರದಲ್ಲಿ ವಾರಕರಿ ಸಂಪ್ರದಾಯದ ಪ್ರಮುಖರ ಸಭೆ ನಡೆಯಿತು. ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಹ.ಭ.ಪ. ರಾಮಕೃಷ್ಣ ವೀರ ಮಹಾರಾಜರು ಮುಂದುವರಿದು ಮಾತನಾಡುತ್ತಾ, ‘ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಲು, ಜಾತಿಗಳ ಗುಂಪುಗಳನ್ನು ವಿಭಜಿಸಲು ಮತ್ತು ಅದರ ಮೂಲಕ ರಾಜಕೀಯ ಮಾಡಲು ಬಯಸುವವರ ಜಾತಿ ರಾಜಕಾರಣದ ಷಡ್ಯಂತ್ರಗಳನ್ನು ವಾರಕರಿ ಸಂಪ್ರದಾಯವು ನಾಶಪಡಿಸುತ್ತದೆ. ಆದ್ದರಿಂದ ಅವರು ವಾರಕರಿಗಳ ಮೇಲೆ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಏಕಾದಶಿಯ ದಿನ ಪಂಢರಪುರಕ್ಕೆ ಬಂದು ಮಾಂಸಾಹಾರ ಸೇವಿಸುವವರು ವಾರಕರಿ ಸಂಪ್ರದಾಯಕ್ಕೆ ಏನನ್ನಾದರೂ ಕಲಿಸಲು ಬರುವುದು ಎಂದರೆ, ಒಬ್ಬ ವೇಶ್ಯೆಯು ಪತಿವ್ರತೆಗೆ ಸಂಸಾರ ಮಾಡುವುದು ಹೇಗೆ ಎಂದು ಕಲಿಸಿಕೊಟ್ಟಂತೆ ಇದೆ.

ವಿಕಾಸ ಲವಾಂಡೆ ಅವರನ್ನು ತಕ್ಷಣ ಬಂಧಿಸಿ! – ಹ.ಭ.ಪ. ರಾಮಕೃಷ್ಣ ವೀರ ಮಹಾರಾಜ್

ಮಹಾರಾಷ್ಟ್ರದ ವಾರಕರಿಗಳು ಆಕ್ರೋಶಗೊಂಡಿದ್ದು, ಈ ವಿಷಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು, ಅಂದರೆ ಮಹಾರಾಷ್ಟ್ರ ಸರಕಾರವು ಸ್ವತಃ ಗಮನಹರಿಸಿ ರಾಷ್ಟ್ರವಾದಿ ಕಾಂಗ್ರೆಸ್ ಶರದ ಪವಾರ ಬಣದ ವಕ್ತಾರ ವಿಕಾಸ ಲವಾಂಡೆ ಅವರನ್ನು ತಕ್ಷಣ ಬಂಧಿಸಬೇಕು. ಈ ನಿಟ್ಟಿನಲ್ಲಿ ವಾರಕರಿ ಸಂಪ್ರದಾಯದ ಪ್ರಮುಖರು ಏಪ್ರಿಲ್ ೧೯ ರಂದು ಪಂಢರಪುರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಿದ್ದಾರೆ. ವಿಕಾಸ ಲವಾಂಡೆ ಅವರನ್ನು ಬಂಧಿಸದಿದ್ದರೆ ಇದರ ತೀವ್ರ ಪ್ರತಿಕ್ರಿಯೆ ಮಹಾರಾಷ್ಟ್ರದಲ್ಲಿ ಕಂಡುಬರಲಿದೆ, ಎಂದೂ ಹೇಳಿದ್ದಾರೆ.