ಹಿಂದೂ ಹಬ್ಬಗಳ ದಿನದಂದು ರಜೆ ನಿರಾಕರಣೆ; ರಮಜಾನ್ ಗಾಗಿ ಮುಸ್ಲಿಮರಿಗೆ ರಿಯಾಯತಿ ಮತ್ತು ರಜೆಗಳು!

ಪುಣೆ – ಹಿಂಜವಡಿ, ಖರಾಡಿ ಮತ್ತು ವಿಮಾನನಗರದಂತಹ ಪ್ರಮುಖ ‘ಐಟಿ ಪಾರ್ಕ್’ಗಳಲ್ಲಿ (ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗಾಗಿ ಸಿದ್ಧಪಡಿಸಲಾದ ವಿಶೇಷ ಪ್ರದೇಶ) ಕೆಲಸ ಮಾಡುವ ಇಂಜಿನಿಯರ್ ಗಳು ಸಂಸ್ಥೆಯ ಆಡಳಿತ ಮಂಡಳಿಯ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಸಂಸ್ಥೆಗಳಲ್ಲಿ ಮುಸ್ಲಿಂ ಉದ್ಯೋಗಿಗಳು ತಮ್ಮ ಧರ್ಮವನ್ನು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಉದ್ಯೋಗಿಗಳ ಮನವೊಲಿಸಿ ಅವರನ್ನು ಮತಾಂತರಕ್ಕೆ ಪ್ರೇರೇಪಿಸುವ ಪ್ರಯತ್ನಗಳು ಸಂಸ್ಥೆಯ ಆವರಣದಲ್ಲೇ ನಡೆಯುತ್ತಿವೆ. ಈ ಕೃತ್ಯಗಳಿಗೆ ಸಂಸ್ಥೆಯ ಮ್ಯಾನೇಜ್ ಮೆಂಟ್ ನ ಗುಪ್ತ ಬೆಂಬಲವಿದೆ ಎಂಬ ಸಂಶಯವನ್ನು ಉದ್ಯೋಗಿಗಳು ವ್ಯಕ್ತಪಡಿಸಿದ್ದಾರೆ. ಇದು ಕೇವಲ ಒಂದು ಸಂಸ್ಥೆಗೆ ಸೀಮಿತವಾಗಿರದೆ ಪುಣೆಯ ಸಂಪೂರ್ಣ ಐಟಿ ಕ್ಷೇತ್ರದಲ್ಲಿ ಇದರ ಜಾಲ ಹರಡಿದೆ. ರಾಜ್ಯ ಸರಕಾರವು ಈ ಪ್ರಕರಣಗಳ ಬಗ್ಗೆ ಆಳವಾದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉದ್ಯೋಗಿಗಳು ಒತ್ತಾಯಿಸಿದ್ದಾರೆ.
ಉದ್ಯೋಗಿಗಳು ಮಾಡಿರುವ ಗಂಭೀರ ಆರೋಪಗಳು!
೧. ಸಂಸ್ಥೆಗಳಲ್ಲಿನ ಸಭೆಯ ಕೊಠಡಿಗಳನ್ನು (ಮೀಟಿಂಗ್ ರೂಮ್) ನಿರ್ದಿಷ್ಟ ಸಮುದಾಯದ ಪ್ರಾರ್ಥನಾ ಸ್ಥಳಗಳಾಗಿ ಬಳಸಲಾಗುತ್ತಿದೆ. ಅಧಿಕೃತ ಕೆಲಸಕ್ಕಾಗಿ ಮೀಸಲಾದ ಸ್ಥಳಗಳನ್ನು ಈ ರೀತಿ ಬಳಸಲಾಗುತ್ತಿದ್ದರೂ, ಆಡಳಿತ ಮಂಡಳಿಯು ಅದನ್ನು ಅನುಕೂಲಕರವಾಗಿ ನಿರ್ಲಕ್ಷಿಸುತ್ತಿದೆ.
೨. ಹಿಂದೂ ಹಬ್ಬಗಳ ದಿನದಂದು ಅನೇಕ ಬಾರಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತದೆ ಅಥವಾ ರಜೆಗಳನ್ನು ನಿರಾಕರಿಸಲಾಗುತ್ತದೆ; ಆದರೆ ರಮಜಾನ್ ನಂತಹ ನಿರ್ದಿಷ್ಟ ಸಮಯದಲ್ಲಿ ಮುಸ್ಲಿಮರಿಗೆ ರಿಯಾಯತಿಗಳು(ಸವಲತ್ತು) ಮತ್ತು ರಜೆಗಳನ್ನು ನೀಡಲಾಗುತ್ತದೆ. ಹಿಂದೂ ಹಬ್ಬಗಳನ್ನು ಪಂಚಾಂಗದಲ್ಲಿ ಕೇವಲ ‘ಐಚ್ಛಿಕ ರಜೆ'(ಪರ್ಯಾಯ ರಜೆ) ಎಂದು ತೋರಿಸಲಾಗುತ್ತದೆ. ಈ ತಾರತಮ್ಯ ಕೇವಲ ಹಬ್ಬಗಳಿಗೆ ಸೀಮಿತವಾಗಿರದೆ ಸಂಸ್ಥೆಯ ಆಂತರಿಕ ನೀತಿಗಳ ಮೇಲೂ ಈಗ ಧರ್ಮದ ಪ್ರಭಾವ ಕಂಡುಬರುತ್ತಿದೆ.
೩. ಉದ್ಯೋಗಿಗಳ ಸಾಂಪ್ರದಾಯಿಕ ಉಡುಪಿನ ಬಗ್ಗೆ ವಿವಾದ ಮಾಡಲಾಗುತ್ತದೆ. ಮುಸ್ಲಿಂ ಯುವತಿಯರಿಗೆ ಹಿಜಾಬ್ ಧರಿಸಲು ಅನುಮತಿಯಿದೆ; ಆದರೆ ಹಿಂದೂ ಯುವತಿಯರಿಗೆ ಸೀರೆ ಅಥವಾ ‘ಪಂಜಾಬಿ ಉಡುಪು’ ಧರಿಸಲು ಅಡ್ಡಿಪಡಿಸಲಾಗುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!