ತಮಿಳುನಾಡು ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳ ಹೇಳಿಕೆ
ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ; ಕ್ಷಮೆಯಾಚನೆಗೆ ಆಗ್ರಹ

ತಿರುಚ್ಚಿ(ತಮಿಳುನಾಡು) – ‘ಶಾರ್ಟ್ಸ್’ (ಹಾಫ್ ಪ್ಯಾಂಟ್) ಧರಿಸುವ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳಕ್ಕೆ ಆಹ್ವಾನ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ ಎಂದು “ತಮಿಳುನಾಡು ನ್ಯಾಷನಲ್ ಲಾ ಯೂನಿವರ್ಸಿಟಿ”ಯ (ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ) ಕುಲಪತಿ ವಿ. ನಾಗರಾಜ ಅವರು ಹೇಳಿಕೆ ನೀಡಿದ ನಂತರ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಏಪ್ರಿಲ್ ೧೬ ರ ತಡರಾತ್ರಿ ವಿದ್ಯಾರ್ಥಿಗಳು ಶಾರ್ಟ್ಸ್ ಮತ್ತು ಕಪ್ಪು ಬಟ್ಟೆಗಳನ್ನು ಧರಿಸಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿ ‘ಕುಲಪತಿಗಳು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು. ಈ ಹಿಂದೆ ೨೦೧೬ ರಲ್ಲೂ ವಿ. ನಾಗರಾಜ ಅವರು ಇಂತಹದ್ದೇ ಟಿಪ್ಪಣಿ ಮಾಡಿದ್ದರು; ಆಗ ಅವರು ಬೆಂಗಳೂರಿನ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ಯಲ್ಲಿ ಪ್ರಾಧ್ಯಾಪಕರಾಗಿದ್ದರು.
ಕುಲಪತಿಗಳು ಈ ಹೇಳಿಕೆಯನ್ನು ಏಪ್ರಿಲ್ ೧೫ ರಂದು ವರ್ಗ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ನೀಡಿದ್ದರು. ಏಪ್ರಿಲ್ ೧೬ ರಂದು ಬೆಳಿಗ್ಗೆ ಸಂತಪ್ತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನೋಟಿಸ್ ಹಚ್ಚುವ ಮೂಲಕ ಈ ಹೇಳಿಕೆಯನ್ನು ಖಂಡಿಸಿದರು. ನಂತರ ಸಂಜೆ ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು ಕುಲಪತಿಗಳೊಂದಿಗೆ ಸಂವಾದ ನಡೆಸಬೇಕೆಂದು ಆಗ್ರಹಿಸಿದರು. ಈ ಫಲಕಗಳಲ್ಲಿ ‘ಬಟ್ಟೆಗಳನ್ನಲ್ಲ, ವಿಚಾರಗಳನ್ನು ದೂಷಿಸಿ’ ಎಂದು ಬರೆಯಲಾಗಿತ್ತು. ಒಬ್ಬ ಹಿರಿಯ ಪ್ರಾಧ್ಯಾಪಕರು ಕುಲಪತಿಗಳನ್ನು ಬೆಂಬಲಿಸುತ್ತಾ, ಅವರು ಈ ಟಿಪ್ಪಣಿಯನ್ನು ಹಿರಿಯರಾಗಿ ಹಿತೈಷಿಯ ನೆಲೆಯಲ್ಲಿ ಮಾಡಿದ್ದರು ಎಂದು ಹೇಳಿದರು. ಅಲ್ಲದೆ ಈ ಹೇಳಿಕೆಯನ್ನು ಸಂದರ್ಭದಿಂದ ಹೊರತಾಗಿ ಅರ್ಥೈಸಲಾಗಿದೆ ಮತ್ತು ವಿದ್ಯಾರ್ಥಿಗಳು ಇದನ್ನು ಅತಿಶಯೋಕ್ತಿಯಾಗಿ ಬಿಂಬಿಸಿದ್ದಾರೆ ಎಂದೂ ತಿಳಿಸಲಾಯಿತು.
ಈ ವಿಷಯವು ಜೋಧಪುರಕ್ಕೂ ತಲುಪಿದ್ದು, ಅಲ್ಲಿನ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಈ ಘಟನೆಯನ್ನು ಖಂಡಿಸಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಹೇಳಿಕೆಯ ಬಗ್ಗೆ ಅಪಾರ್ಥವಾಗಿದೆ! – ಕುಲಪತಿಗಳ ಸ್ಪಷ್ಟನೆ
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಸಂಜೆ ಕುಲಪತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಹೊರಬಂದರು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ತಿಳಿಸಿದರು. ತಾವು ಪ್ರವೇಶ ಪ್ರಕ್ರಿಯೆ ಮತ್ತು ವಿಶ್ವವಿದ್ಯಾಲಯದ ಘನತೆಯ ಬಗ್ಗೆ ಮಾತನಾಡುತ್ತಿದ್ದೆವು ಮತ್ತು ಅದನ್ನು ಹೆಚ್ಚಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದೆವು. ಅದೇ ಸಂದರ್ಭದಲ್ಲಿ ಉಡುಪಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೆವು. ಸಂಸ್ಥೆಯ ಘನತೆಯನ್ನು ಹೆಚ್ಚಿಸಬೇಕಾದರೆ ಯೋಗ್ಯವಾದ ಉಡುಪು ಕೂಡ ಒಂದು ಅಂಶವಾಗಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ