
ನವ ದೆಹಲಿ – ಸಮಾನ ನಾಗರಿಕ ಸಂಹಿತೆಯು ಒಂದು ಸಾಂವಿಧಾನಿಕ ಅಪೇಕ್ಷೆಯಾಗಿದೆ ಮತ್ತು ಇದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ‘ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಅಧಿನಿಯಮ, ೧೯೩೭’ ರ ಕೆಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನವನ್ನು ಮಾಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ. ಶರಿಯತ್ ನ ಪ್ರಸ್ತುತ ಉತ್ತರಾಧಿಕಾರ ನಿಯಮಗಳಲ್ಲಿ ಮಹಿಳೆಯರ ವಿರುದ್ಧ ಸ್ಪಷ್ಟ ತಾರತಮ್ಯ ಕಂಡುಬರುತ್ತಿದ್ದು, ಅವುಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಮುಸ್ಲಿಮರು ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಬಾರದು! – ನ್ಯಾಯವಾದಿ ಪ್ರಶಾಂತ ಭೂಷಣ್ ಅರ್ಜಿದಾರರ ಪರ ನ್ಯಾಯವಾದಿ ಪ್ರಶಾಂತ ಭೂಷಣ್ ಮಾತನಾಡಿ, ನ್ಯಾಯಾಲಯವು ಶರಿಯತ್ ಕಾನೂನಿನ ನಿಬಂಧನೆಗಳನ್ನು ರದ್ದುಗೊಳಿಸಿದರೆ, ಭಾರತೀಯ ಉತ್ತರಾಧಿಕಾರ ಅಧಿನಿಯಮವನ್ನು ಜಾರಿಗೆ ತರಬಹುದು. ವೈಯಕ್ತಿಕ ಕಾನೂನಿಗೆ ಸಂವಿಧಾನದ ೨೫ ನೇ ವಿಧಿಯಡಿ ರಕ್ಷಣೆ ಸಿಗುವುದಿಲ್ಲ. ಅದನ್ನು ರದ್ದುಗೊಳಿಸಿದರೆ ಭಾರತೀಯ ಉತ್ತರಾಧಿಕಾರ ಕಾಯ್ದೆ ಅನ್ವಯವಾಗಬಹುದು. ಮುಸ್ಲಿಂ ಉತ್ತರಾಧಿಕಾರ ಕಾನೂನು ಕೇವಲ ಅಸಂಘಟಿತವಲ್ಲ; ಅದರ ನಿಯಮಗಳು ಎಷ್ಟು ಸಂಕೀರ್ಣವಾಗಿವೆ ಎಂದರೆ ನ್ಯಾಯವಾದಿಗಳಿಗೂ ಅವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ. ನಾನು ಅನೇಕ ಬಾರಿ ನನ್ನ ಮುಸ್ಲಿಂ ಮಿತ್ರರಿಗೆ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಬೇಡಿ ಎಂದು ಹೇಳುತ್ತೇನೆ ಎಂದರು.
ಈ ವಿಷಯವು ನ್ಯಾಯಾಂಗದ ಹಸ್ತಕ್ಷೇಪಕ್ಕೆ ಒಳಪಡುತ್ತದೆಯೇ? ಅಥವಾ ಇದನ್ನು ಶಾಸಕಾಂಗದ ನಿರ್ಧಾರಕ್ಕೆ ಬಿಡಬೇಕೇ? ಎಂದು ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ನ್ಯಾಯವಾದಿ ಭೂಷಣ್, ನ್ಯಾಯಾಲಯವು ತಾರತಮ್ಯದ ಆಚರಣೆಗಳನ್ನು ರದ್ದುಗೊಳಿಸಬಹುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಅರ್ಧ ಅಥವಾ ಅದಕ್ಕಿಂತ ಕಡಿಮೆ ಪಾಲು ನೀಡುವುದು ತಾರತಮ್ಯವಾಗಿದೆ. ಇದು ನಾಗರಿಕ ವಿಷಯವಾಗಿದೆಯೇ ಹೊರತು ೨೫ ನೇ ವಿಧಿಯ ಅಡಿಯಲ್ಲಿ ಯಾವುದೇ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ. ಉತ್ತರಾಧಿಕಾರವನ್ನು ನಿರ್ಧರಿಸುವಾಗ, ಯಾವುದೇ ಮುಸ್ಲಿಂ ತನ್ನ ಆಸ್ತಿಯಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಪಾಲನ್ನು ವಿಲ್ (ಮೃತ್ಯುಪತ್ರ) ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸ್ವಂತ ಸಂಪಾದನೆಯ ಆಸ್ತಿಯ ಬಗ್ಗೆಯೂ ಇಚ್ಛಾನುಸಾರ ವಿಲ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಶರಿಯತ್ ಕಾನೂನಿನ ಅಡಿಯಲ್ಲಿ ತಾರತಮ್ಯವನ್ನು ಎದುರಿಸುತ್ತಿರುವ ಮಹಿಳೆಯರು ನ್ಯಾಯಾಲಯದ ಮೊರೆ ಹೋಗಬೇಕು ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ನಮೂದಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ