ಬೈಬಲ್ ಮತ್ತು ಕುರಾನ್ ಮುನ್ಸೂಚನೆಗಳ ಪ್ರಕಾರ ವಿನಾಶದ ಸಂಕೇತ!

ತೆಲ್ ಅವಿವ್ (ಇಸ್ರೇಲ್) – ದಕ್ಷಿಣ ಇಸ್ರೇಲ್‌ನ ನೇಟಿವೋಟ್ ನಗರದಲ್ಲಿ ಜೇನುನೊಣಗಳ ಬೃಹತ್ ಹಿಂಡುಗಳು ಕಂಡುಬಂದಿದ್ದು, ಅವು ವಾಹನಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿವೆ. ಇದರಿಂದಾಗಿ ಕೆಲವು ವಿಮಾನಗಳ ಹಾರಾಟದ ಮೇಲೆಯೂ ಪರಿಣಾಮ ಬೀರಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಇಸ್ರೇಲಿ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ‘ಅಶುಭ ಸಂಕೇತ’ ಎಂದು ಪರಿಗಣಿಸಿದ್ದಾರೆ. ಈ ಹಿಂದೆ ತೆಲ್ ಅವಿವ್‌ನಲ್ಲಿ ಕಾಗೆಗಳ ದೊಡ್ಡ ಹಿಂಡುಗಳು ಕಾಣಿಸಿಕೊಂಡಿದ್ದವು. ಇದು ವಿನಾಶದ ಸಂಕೇತವಾಗಿದ್ದು, ಇದರ ಉಲ್ಲೇಖ ಬೈಬಲ್ ಮತ್ತು ಕುರಾನ್‌ನಲ್ಲಿ ಕಂಡುಬರುತ್ತದೆ ಎಂದು ಕೆಲವು ಬಳಕೆದಾರರು ತಿಳಿಸಿದ್ದಾರೆ.
೧. ಬೈಬಲ್‌ನ 7:18 ರ ವಚನವನ್ನು ಉಲ್ಲೇಖಿಸುತ್ತಾ, ‘ನೈಲ್ ನದಿಯ ಮುಖಜ ಭೂಮಿಯಿಂದ ನೊಣಗಳನ್ನು ಕರೆಯಲಾಗುವುದು’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
೨. ಭಾರತದ ವ್ಯಕ್ತಿಯೊಬ್ಬರು ‘ಎಕ್ಸ್’ (X) ನಲ್ಲಿ ಇಸ್ರೇಲ್‌ನ ಜೇನುನೊಣಗಳ ದಾಳಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಅದನ್ನು ಕುರಾನ್‌ನ ‘ಸೂರತ್ ಅಲ್-ಅರಾಫ್’ಗೆ ಸಂಬಂಧಿಸಿದ್ದಾರೆ. ಇದು ಅಹಂಕಾರಿ ಮತ್ತು ಅಪರಾಧಿ ಜನರಿಗೆ ನೀಡಲಾದ ಸಂದೇಶ ಎಂದು ಅದರಲ್ಲಿ ಹೇಳಲಾಗಿದೆ.
೩. ಕಳೆದ ತಿಂಗಳು ತೆಲ್ ಅವಿವ್ ನಗರದ ಮೇಲೆ ಸಾವಿರಾರು ಕಾಗೆಗಳ ಹಿಂಡುಗಳು ಸುಳಿದಾಡುತ್ತಿರುವುದು ಕಂಡುಬಂದಿತ್ತು. ಇರಾನ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇದನ್ನು ವಿನಾಶದ ಸಂಕೇತವೆಂದು ನೋಡಲಾಗಿತ್ತು ಮತ್ತು ಬೈಬಲ್‌ನ ವಚನಗಳೊಂದಿಗೆ ಇದನ್ನು ಜೋಡಿಸಲಾಗಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation