ಐಟಿ ವಲಯದಲ್ಲಿ ಲೈಂಗಿಕ ಕಿರುಕುಳದ ದೂರುಗಳು ಹೆಚ್ಚಾಗಿವೆ ಎಂಬ ಆರೋಪ!

ಪುಣೆ – ಮಾಹಿತಿ-ತಂತ್ರಜ್ಞಾನ (ಐಟಿ) ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (‘ಟಿ.ಸಿ.ಎಸ್.’) ತನ್ನ ವಾರ್ಷಿಕ ವರದಿಯಲ್ಲಿ, 2020 ರಿಂದ 2025 ರವರೆಗಿನ 5 ವರ್ಷಗಳ ಆರ್ಥಿಕ ಅವಧಿಯಲ್ಲಿ ಲೈಂಗಿಕ ಕಿರುಕುಳದ ದೂರುಗಳು ಐದು ಪಟ್ಟು ಹೆಚ್ಚಾಗಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ‘ಐಟಿ ಕ್ಷೇತ್ರದ ಇತರೆ ಸಂಸ್ಥೆಗಳಲ್ಲೂ ಇಂತಹ ಘಟನೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ’ ಎಂದು ‘ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್’ (NITES) ಅಧ್ಯಕ್ಷರಾದ ಹರಪ್ರೀತ್ ಸಿಂಗ್ ಸಲೂಜಾ ತಿಳಿಸಿದ್ದಾರೆ.
🚨 Fivefold rise in sexual harassment complaints at Tata Consultancy Services reportedly raises serious concerns about workplace safety.
⚠️ Growing allegations of misconduct in the IT sector highlight the urgent need for stronger safeguards, strict action, and safe environments… pic.twitter.com/HtzbUj65NW
— Sanatan Prabhat (@SanatanPrabhat) April 16, 2026
ಸಲೂಜಾ ಅವರು, “ಟಿ.ಸಿ.ಎಸ್.ನಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ಕೇಂದ್ರ ಕಾರ್ಮಿಕ ಸಚಿವರು ಗಮನಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಮುಖ್ಯ ಕಾರ್ಮಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಸಂಸ್ಥೆಯು ತನ್ನ ವಾರ್ಷಿಕ ವರದಿಯಲ್ಲಿ ನೀಡಿರುವ ಮಾಹಿತಿ!
2020-21ನೇ ಆರ್ಥಿಕ ವರ್ಷದಲ್ಲಿ ಮಹಿಳಾ ಉದ್ಯೋಗಿಗಳಿಂದ 27 ಲೈಂಗಿಕ ಕಿರುಕುಳದ ದೂರುಗಳು ದಾಖಲಾಗಿದ್ದವು. 2024-25ನೇ ಆರ್ಥಿಕ ವರ್ಷದಲ್ಲಿ ಈ ದೂರುಗಳ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ 102 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 23 ದೂರುಗಳು ಬಾಕಿ ಉಳಿದಿವೆ. ಒಟ್ಟು ಮಹಿಳಾ ಉದ್ಯೋಗಿಗಳ ಪೈಕಿ ಲೈಂಗಿಕ ಕಿರುಕುಳದ ದೂರು ನೀಡಿದವರ ಪ್ರಮಾಣ 2023-24ನೇ ವರ್ಷದಲ್ಲಿ ಶೇ. 0.05 ರಷ್ಟಿತ್ತು. 2024-25ನೇ ವರ್ಷದಲ್ಲಿ ಅದು ಹೆಚ್ಚಾಗಿ ಶೇ. 0.06 ಕ್ಕೆ ತಲುಪಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ