(ಇಮಾಂಬಾಡಾ ಎಂದರೆ ಶಿಯಾ ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳ, ಹಾಗೂ ಈದ್ಗಾ ಎಂದರೆ ನಮಾಜ್ ಮಾಡುವ ಸ್ಥಳ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸಂಭಲ್ ನ ಬಿಛೌಲಿ ಗ್ರಾಮದಲ್ಲಿ ಏಪ್ರಿಲ್ 16 ರಂದು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಈದ್ಗಾ ಮತ್ತು ಇಮಾಂಬಾಡಾ ಮೇಲೆ ಬುಲ್ಡೋಜರ್ ಚಲಾಯಿಸಿ ಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬುಲ್ಡೋಜರ್ ಕಾರ್ಯಾಚರಣೆಯನ್ನು ನೋಡಲು ಗ್ರಾಮದ ಅನೇಕ ನಾಗರಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
೧. ಆಡಳಿತದ ಮಾಹಿತಿಯ ಪ್ರಕಾರ, ಬಿಛೌಲಿ ಗ್ರಾಮದಲ್ಲಿ ಈದ್ಗಾ ಮತ್ತು ಇಮಾಂಬಾಡಾವನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು.
೨. ಗ್ರಾಮಸ್ಥರ ದೂರಿನ ನಂತರ, ಲೆಕ್ಕಾಧಿಕಾರಿಗಳು ಜನವರಿ 18 ರಂದು ತಹಸೀಲ್ದಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜನವರಿ 31, 2026 ರಂದು ನ್ಯಾಯಾಲಯದ ಆದೇಶದಂತೆ ವಿವಿಧ ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಲಾಗಿತ್ತು. ಈ ನೋಟಿಸ್ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
೩. ಇದರ ನಂತರ, ಆಡಳಿತಾಧಿಕಾರಿಗಳ ತಂಡವು ಏಪ್ರಿಲ್ 16 ರಂದು ಬೆಳಿಗ್ಗೆ 7.30 ಕ್ಕೆ ಘಟನಾ ಸ್ಥಳಕ್ಕೆ ತಲುಪಿತು. ಅಲ್ಲಿ ಇಮಾಂಬಾಡಾ ಮತ್ತು ಈದ್ಗಾವನ್ನು ಬುಲ್ಡೋಜರ್ ಸಹಾಯದಿಂದ ಕೆಡವಲಾಯಿತು.
೪. ಸರಕಾರಿ ಭೂಮಿಯಲ್ಲಿ ಯಾವುದೇ ರೀತಿಯ ಅಕ್ರಮ ನಿರ್ಮಾಣಗಳನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram