‘ಗ್ರೂಮಿಂಗ್ ಗ್ಯಾಂಗ್‌’ಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ತನಿಖೆ ನಡೆಸಿ ! – ಬ್ರಿಟನ್ ಸಂಸದೆ ಕೆಟಿ ಲ್ಯಾಮ್ ಅವರ ಬೇಡಿಕೆ

(‘ಗ್ರೂಮಿಂಗ್ ಗ್ಯಾಂಗ್ಸ್’ ಎಂದರೆ ಬಾಲಕಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರ ಲೈಂಗಿಕ ಶೋಷಣೆ ಮಾಡುವ ತಂಡಗಳು)

ಲಂಡನ (ಬ್ರಿಟನ) – ಬ್ರಿಟನ್‌ ನ ಕನ್ಸರ್ವೇಟಿವ್ ಪಕ್ಷದ ಸಂಸದೆ ಕೆಟಿ ಲ್ಯಾಮ್ ಅವರು ದೇಶದಲ್ಲಿರುವ ‘ಗ್ರೂಮಿಂಗ್ ಗ್ಯಾಂಗ್‌’ಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪಾಕಿಸ್ತಾನಿ ಮೂಲದ ಕೆಲವು ಬ್ರಿಟಿಷ್ ಮುಸಲ್ಮಾನ ತಂಡಗಳು ೧೯೯೦ರ ದಶಕದಿಂದ ೨೦೧೦ರ ದಶಕದವರೆಗೆ ಬಾಲಕಿಯರನ್ನು (ವಿಶೇಷವಾಗಿ ಶ್ವೇತವರ್ಣೀಯ ಮತ್ತು ಸಿಖ್ ಬಾಲಕಿಯರನ್ನು) ಸತತವಾಗಿ ಲೈಂಗಿಕವಾಗಿ ಶೋಷಣೆ ಮಾಡಿವೆ. ಇದರಿಂದ ದೇಶದ ರೋದರ್‌ ಹ್ಯಾಮ್, ರೋಚ್‌ ಡೇಲ್ ಮತ್ತು ಟೆಲ್‌ ಫೋರ್ಡ್‌ ನಂತಹ ನಗರಗಳಲ್ಲಿನ ಜನರ ಜೀವನವು ಕೆಟ್ಟದಾಗಿ ಪ್ರಭಾವಿತಗೊಂಡಿದೆ.

‘ಖಾಲ್ಸಾ ವಾಕ್ಸ್’ ಸುದ್ದಿ ಜಾಲತಾಣದ ವರದಿಯ ಪ್ರಕಾರ, ಅಪರಾಧಿಗಳು ೧೧ ವರ್ಷದ ಸಣ್ಣ ವಯಸ್ಸಿನ ಬಾಲಕಿಯರನ್ನು ಉದ್ಯಾನವನಗಳು, ಬಸ್ ನಿಲ್ದಾಣಗಳು ಅಥವಾ ಶಾಲೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗುರಿಯಾಗಿಸುತ್ತಿದ್ದರು. ಅವರಿಗೆ ಮಧುರವಾದ ಮಾತುಗಳನ್ನಾಡಿ, ಮದ್ಯ, ಮಾದಕ ಪದಾರ್ಥ ಅಥವಾ ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವ ಮೂಲಕ ಜಾಲಕ್ಕೆ ಎಳೆದುಕೊಳ್ಳುತ್ತಿದ್ದರು. ನಿಧಾನವಾಗಿ ಅವರ ವಿಶ್ವಾಸವನ್ನು ಸಂಪಾದಿಸಿ, ನಂತರ ಅದನ್ನು ಬೆದರಿಕೆ ಮತ್ತು ಒತ್ತಡ ಮತ್ತು ಭಯ ಹುಟ್ಟಿಸುತ್ತಿದ್ದರು. ಸಂತ್ರಸ್ತ ಬಾಲಕಿಯರನ್ನು ಫ್ಲಾಟ್‌ ಗಳಿಗೆ ಅಥವಾ ಅಂಗಡಿಗಳಿಗೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿ ಅನೇಕ ಜನರು ಆ ಬಾಲಕಿಯರನ್ನು ಪದೇ ಪದೇ ಲೈಂಗಿಕವಾಗಿ ಶೋಷಿಸುತ್ತಿದ್ದರು. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಹಲ್ಲೆ ಮಾಡಲಾಗುವುದು, ಮನೆಗೆ ಬೆಂಕಿ ಹಚ್ಚಲಾಗುವುದು ಅಥವಾ ಅವರ ಖಾಸಗಿ ವಿಡಿಯೋಗಳನ್ನು ಇಂಟರ್ನೆಟ್‌ ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು.

ಗ್ರೂಮಿಂಗ್ ಗ್ಯಾಂಗ್‌ ಗಳ ಹಾವಳಿ ಮತ್ತು ಭೀಕರ ವಾಸ್ತವ

ವರದಿಯ ಪ್ರಕಾರ, ರೋದರ್‌ ಹ್ಯಾಮ್‌ ನಲ್ಲಿ ೧೯೯೭ ರಿಂದ ೨೦೧೩ ರ ಅವಧಿಯಲ್ಲಿ ಸುಮಾರು ೧ ಸಾವಿರ ೪೦೦ ಸಂತ್ರಸ್ತೆಯರ ಪ್ರಕರಣಗಳು ಬೆಳಕಿಗೆ ಬಂದಿವೆ, ಇದು ಸಮಸ್ಯೆಯ ಭೀಕರತೆಯನ್ನು ತೋರಿಸುತ್ತದೆ. ಇವರಲ್ಲಿ ಹೆಚ್ಚಿನ ಬಾಲಕಿಯರು ಬಡ ಕುಟುಂಬದವರಾಗಿದ್ದರು ಅಥವಾ ಕೇರ್ ಸೆಂಟರ್‌ ಗಳಲ್ಲಿ ವಾಸಿಸುತ್ತಿದ್ದರು. ಟ್ಯಾಕ್ಸಿ ಚಾಲಕರಂತಹ ಜನರು ಅವರಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಅನೇಕ ಆರೋಪಿಗಳು ಹಗಲಿನಲ್ಲಿ ಸಾಮಾನ್ಯ ಚಾಲಕರು ಅಥವಾ ಅಂಗಡಿ ಕೆಲಸಗಾರರಂತೆ ಕಾಣಿಸುತ್ತಿದ್ದರು ಮತ್ತು ರಾತ್ರಿ ವೇಳೆಯಲ್ಲಿ ಬಹಿರಂಗವಾಗಿ ಅಪರಾಧಗಳನ್ನು ಮಾಡುತ್ತಿದ್ದರು.

ರೋದರ್‌ ಹ್ಯಾಮ್‌ ನಲ್ಲಿ ಅನೇಕ ವರ್ಷಗಳ ಕಾಲ ಈ ಶೋಷಣೆ ಮುಂದುವರಿದಿತ್ತು ಮತ್ತು ೧೯೯೧ ರಿಂದಲೇ ಈ ಬಗ್ಗೆ ಬಂದ ದೂರುಗಳನ್ನು ನಿರ್ಲಕ್ಷಿಸಲಾಗಿತ್ತು. ಈಗ ‘ಆಪರೇಷನ್ ಸ್ಟೋವ್‌ ವುಡ್’ ಹೆಸರಿನಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ೧ ಸಾವಿರದ ೧೦೦ ಕ್ಕೂ ಹೆಚ್ಚು ಸಂತ್ರಸ್ತೆಯರನ್ನು ಗುರುತಿಸಲಾಗಿದ್ದು, ಇದರ ವಿಚಾರಣೆಗಳು ೨೦೨೭ ರವರೆಗೆ ನಡೆಯಲಿವೆ.

ವಿವಿಧ ನಗರಗಳಲ್ಲಿನ ಅಪರಾಧಗಳು ಮತ್ತು ಶಿಕ್ಷೆ

೧. ರೋಚ್‌ ಡೇಲ್ ನಗರದಲ್ಲಿ ೨೦೧೨ ರಲ್ಲಿ ಬಾಲಕಿಯರ ಸಾಗಾಣಿಕೆಗಾಗಿ ೯ ಜನರನ್ನು ದೋಷಿಗಳೆಂದು ಘೋಷಿಸಲಾಯಿತು. ಒಂದು ಬಾಲಕಿಯನ್ನು ಒಂದೇ ರಾತ್ರಿಯಲ್ಲಿ ೨೦ ಜನರು ಲೈಂಗಿಕವಾಗಿ ಶೋಷಿಸಿದ ಘಟನೆ ವರದಿಯಾಗಿದೆ. ೨೦೨೫ ರಲ್ಲಿ ಇನ್ನು ೭ ಜನರಿಗೆ ಶಿಕ್ಷೆಯಾಗಿದ್ದು, ಅವರಿಗೆ ಒಟ್ಟಾರೆಯಾಗಿ ೧೭೪ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

೨. ವರದಿಯ ಪ್ರಕಾರ, ೧೯೭೦ ರ ದಶಕದಿಂದ ಟೆಲ್‌ ಫೋರ್ಡ್ ನಗರದಲ್ಲಿ ಬಡತನದ ಕಾರಣದಿಂದಾಗಿ ಸುಮಾರು ೧ ಸಾವಿರ ಬಾಲಕಿಯರನ್ನು ಗುರಿಯಾಗಿಸಲಾಗಿತ್ತು. ಆಕ್ಸಫರ್ಡ್‌ ನಲ್ಲಿ ‘ಆಪರೇಷನ್ ಬುಲ್‌ ಫಿಂಚ್’ ಅಡಿಯಲ್ಲಿ ೧೯೯೮ ರಿಂದ ೨೦೧೨ ರವರೆಗಿನ ಪ್ರಕರಣಗಳಲ್ಲಿ ೨೨ ಜನರಿಗೆ ಶಿಕ್ಷೆಯಾಗಿದೆ.

೩. ಹಡರ್ಸ್‌ ಫೀಲ್ಡನಲ್ಲಿ ೧೧ ವರ್ಷದ ಬಾಲಕಿಯರ ಮೇಲೆ ೧೨೦ ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ೨೦ ಜನರು ದೋಷಿಗಳೆಂದು ಸಾಬೀತಾಗಿದೆ. ನ್ಯೂಕ್ಯಾಸಲ್ ನಲ್ಲಿಯೂ ಇಂತಹ ಅನೇಕ ಪ್ರಕರಣಗಳು ಬಹಿರಂಗವಾಯಿತು. ಗ್ರೇಟರ್ ಮ್ಯಾಂಚೆಸ್ಟರ್‌ ನ ಅಂಕಿಅಂಶಗಳ ಪ್ರಕಾರ, ಸಾಮೂಹಿಕ ಶೋಷಣೆಯ ಶೇ. ೫೨ ರಷ್ಟು ಪ್ರಕರಣಗಳಲ್ಲಿ ಏಷ್ಯನ್, ವಿಶೇಷವಾಗಿ ಪಾಕಿಸ್ತಾನಿ ಮೂಲದವರು ಭಾಗಿಯಾಗಿದ್ದಾರೆ.

ಸಿಖ್ ಸಮುದಾಯದ ಮುನ್ನಡೆ !

ವರದಿಯಲ್ಲಿ ಹೀಗೂ ಹೇಳಲಾಗಿದೆ, ಈ ವರ್ಷ ಹೌನ್ಸಲೋನಲ್ಲಿ ಸಿಖ್ ಸಮುದಾಯದ ೨೦೦ ಜನರು ಸೇರಿ ೧೬ ವರ್ಷದ ಸಿಖ್ ಬಾಲಕಿಯನ್ನು ರಕ್ಷಿಸಿದ್ದಾರೆ. ಆಕೆಯನ್ನು ೩೪ ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಅಪಹರಿಸಿ ಲೈಂಗಿಕವಾಗಿ ಶೋಷಿಸುತ್ತಿದ್ದನು. ‘ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿರಲಿಲ್ಲ’ ಎಂದು ಹೇಳಲಾಗಿದೆ. ‘ಯಾವಾಗ ವ್ಯವಸ್ಥೆಗಳು ಕೆಲಸ ಮಾಡುವುದಿಲ್ಲವೋ, ಆಗ ಜನರು ಸ್ವತಃ ಮುಂದೆ ಬಂದು ಸಹಾಯ ಮಾಡುತ್ತಾರೆ’ ಎಂಬುದನ್ನು ಈ ಘಟನೆ ತೋರಿಸುತ್ತದೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ಕೇವಲ ಭಾರತಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ, ಬದಲಾಗಿ ಪಾಶ್ಚಿಮಾತ್ಯ ದೇಶಗಳಿಗೂ ಅದರ ತಟ್ಟುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ !