೮ ವರ್ಷದ ಬಾಲಕನ ಮರಣದ ನಂತರ ಸತ್ಯ ಬಯಲು!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೌನ್ಸಾ ನಗರದ ಸರಕಾರಿ ಆಸ್ಪತ್ರೆಯಲ್ಲಿ ನವೆಂಬರ್ ೨೦೨೪ ರಿಂದ ಅಕ್ಟೋಬರ್ ೨೦೨೫ ರ ಅವಧಿಯಲ್ಲಿ ೩೩೧ ಮಕ್ಕಳು ಎಚ್.ಐ.ವಿ. ಪೀಡಿತರಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣವು ೮ ವರ್ಷದ ಬಾಲಕನೊಬ್ಬ ಮೃತಪಟ್ಟ ನಂತರ ಬಹಿರಂಗಗೊಂಡಿದೆ. ಈ ಘಟನೆಯಲ್ಲಿ ಸರಕಾರಿ ಆಸ್ಪತ್ರೆಯ ಗಂಭೀರ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ.
೧. ‘ಬಿಬಿಸಿ’ ವರದಿಯ ಪ್ರಕಾರ, ಆಸ್ಪತ್ರೆಯಲ್ಲಿ ಸಿರಿಂಜ್ ಗಳನ್ನು ಪದೇ ಪದೇ ಮರುಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಅನೇಕ ಪ್ರಕರಣಗಳಲ್ಲಿ ಒಂದೇ ಔಷಧದ ಬಾಟಲಿಯಿಂದ ಬೇರೆ ಬೇರೆ ಮಕ್ಕಳಿಗೆ ಇಂಜೆಕ್ಷನ್ ನೀಡಲಾಗಿತ್ತು. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಯಿತು.
೨. ೮ ವರ್ಷದ ಮಹಮ್ಮದ್ ಅಮೀನ್ ಎಂಬ ಬಾಲಕನ ಮರಣದ ನಂತರ ಈ ಪ್ರಕರಣವು ಬೆಳಕಿಗೆ ಬಂದಿತು. ಬಾಲಕನ ಸಹೋದರಿ ಅಸ್ಮಾ ಕೂಡ ಎಚ್.ಐ.ವಿ. ಪಾಸಿಟಿವ್ ಆಗಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಮಯದಲ್ಲಿ ಕಲುಷಿತ ಸೂಜಿಯನ್ನು ಬಳಸಿದ್ದರಿಂದಲೇ ಮಕ್ಕಳಿಗೆ ಎಚ್.ಐ.ವಿ. ತಗುಲಿದೆ ಎಂದು ಅವರ ತಾಯಿ ಹೇಳಿದ್ದಾರೆ.
ಎಚ್.ಐ.ವಿ. ಪೀಡಿತರಾಗುವುದು ಎಂದರೇನು?
‘ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್’ ಎಂಬ ವೈರಸ್ ದೇಹದಲ್ಲಿ ಕಂಡುಬಂದರೆ ಆ ವ್ಯಕ್ತಿಯು ಎಚ್.ಐ.ವಿ. ಸೋಂಕಿತನೆಂದು ಕರೆಯಲ್ಪಡುತ್ತಾನೆ. ಇದರರ್ಥ ಆ ವ್ಯಕ್ತಿಗೆ ಕೂಡಲೇ ಏಡ್ಸ್ ಬಂದಿದೆ ಎಂದಲ್ಲ. ಆ ವೈರಸ್ ದೇಹದ ರೋಗನಿರೋಧಕ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದ ಕೆಲ ಸಮಯದ ಬಳಿಕ ದೇಹವು ಇತರ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation