ಪಾಕಿಸ್ತಾನದ ಸುದ್ದಿವಾಹಿನಿ ‘ಜಿಯೋ ನ್ಯೂಸ್ ಉರ್ದು’ಗೆ ನೋಟಿಸ್ ಜಾರಿ

ಇಸ್ಲಾಮಾಬಾದ (ಪಾಕಿಸ್ತಾನ) – ಸ್ವರ ಸಾಮ್ರಾಜ್ಞಿ ಆಶಾ ಭೋಸಲೆ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಪಾಕಿಸ್ತಾನದ ಕೆಲವು ಸುದ್ದಿವಾಹಿನಿಗಳಿಗೆ ಪಾಕಿಸ್ತಾನ ಸರಕಾರವು ವಿರೋಧ ವ್ಯಕ್ತಪಡಿಸಿದೆ. ಪಾಕ್ ಸರಕಾರದ ‘ಪಾಕಿಸ್ತಾನ್ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ’ (ಪಾಕಿಸ್ತಾನದ ಸುದ್ದಿವಾಹಿನಿಗಳನ್ನು ನಿಯಂತ್ರಿಸುವ ಸರಕಾರಿ ಸಂಸ್ಥೆ) ‘ಜಿಯೋ ನ್ಯೂಸ್ ಉರ್ದು’ಗೆ ‘ಕಾರಣ ಕೇಳಿ ನೋಟಿಸ್’ ನೀಡಿದೆ. ಈ ವಾಹಿನಿಯು ಆಶಾ ಭೋಸಲೆ ಅವರಿಗೆ ಸುದೀರ್ಘವಾಗಿ ಶ್ರದ್ಧಾಂಜಲಿ ಸಲ್ಲಿಸಿತ್ತು ಮತ್ತು ಅವರ ಹಾಡುಗಳನ್ನು ಪ್ರಸಾರ ಮಾಡಿತ್ತು.
Pakistan government expresses outrage over tribute paid to Asha Bhosle!
Notice issued to Pakistan’s news channel ‘Geo News Urdu’.
Where are the so called Indian "supporters of art" hiding now, those who usually lecture about keeping art away from politics and vent their guts… pic.twitter.com/797B3D8OQv
— Sanatan Prabhat (@SanatanPrabhat) April 14, 2026
ಪಾಕ್ ಸರಕಾರದ ಈ ನಿಲುವನ್ನು ವಿರೋಧಿಸಿದ ‘ಜಿಯೋ ನ್ಯೂಸ್’ನ ವ್ಯವಸ್ಥಾಪಕ ನಿರ್ದೇಶಕ ಅಜಹರ್ ಅಬ್ಬಾಸ್ ಅವರು, ಒಬ್ಬ ಪ್ರಸಿದ್ಧ ಕಲಾವಿದರ ನಿಧನದ ಸುದ್ದಿಯನ್ನು ನೀಡುವಾಗ ಅವರ ಕಾರ್ಯ ಮತ್ತು ಕೊಡುಗೆಗಳ ಬಗ್ಗೆ ಅವಲೋಕನ ಮಾಡುವುದು ಪತ್ರಿಕೋದ್ಯಮದ ಒಂದು ಪ್ರಮಾಣಿತ ಮತ್ತು ಸಾಮಾನ್ಯ ಪದ್ಧತಿಯಾಗಿದೆ. ಜ್ಞಾನದಂತೆ ಕಲೆಯೂ ಸಹ ಮಾನವೀಯತೆಯ ಒಂದು ಹಂಚಿಕೆಯ ಪರಂಪರೆಯಾಗಿದೆ ಮತ್ತು ಅದನ್ನು ಯಾವುದೇ ಗಡಿಗಳಲ್ಲಿ ಬಂಧಿಸಬಾರದು. ಯುದ್ಧ ಮತ್ತು ಸಂಘರ್ಷದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು, ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation